Hassan News: ಹಾಸನ: ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ಕುಸ್ತಿ ಪಟುಗಳೊಂದಿಗೆ ನಾವಿದ್ದೇವೆ. ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ನಿದರ್ಶನೀಯ ಶಿಕ್ಷೆ ವಿಧಿಸಿರಿ ಎಂಬ ಘೋಷಣೆಗಳೊಂದಿಗೆ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.
ಎ.ಐ.ಡಿ.ಎಸ್.ಒ. ಜಿಲ್ಲಾ ಸಹ ಸಂಚಾಲಕಿ ಚೈತ್ರಾ ಮಾತನಾಡಿ, ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಹಿಂಸೆಯಂತಹ ಪ್ರಕರಣ ದೇಶದಾಂದ್ಯಂತ ಎಲ್ಲ ರಂಗಗಳಲ್ಲಿಯೂ ನಡೆಯುತ್ತಿದೆ. ಸಿನಿಮಾ, ಕ್ರೀಡೆ, ಕಚೇರಿಗಳು ಯಾವ ಕ್ಷೇತ್ರವೂ ಹೊರತಾಗಿಲ್ಲ. ಏಕೆಂದರೆ, ಹೆಣ್ಣು ಮಕ್ಕಳನ್ನು ಕೇವಲ ಭೋಗದ ವಸ್ತುವಾಗಿ ನೋಡುವ ದೃಷ್ಟಿಕೋನ ಎಲ್ಲೆಡೆ ಇದೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ ಎಂದರು. ಈ ಕೆಟ್ಟ ಪ್ರವೃತ್ತಿ, ಮನಸ್ಥಿತಿ ಮೊದಲು ಬದಲಾಗಬೇಕು. ಮಹಿಳಾ ಕುಸ್ತಿಪಟುಗಳ ವಿಚಾರದಲ್ಲಿ, ಖುದ್ದು ಕೇಂದ್ರ ಬಿಜೆಪಿ ಸರ್ಕಾರವೇ ತನ್ನ ಪಕ್ಷದ ಸಂಸದ ಹಾಗೂ ಕುಸ್ತಿ ಪೇಡರೇಶನ್ ನ ಮುಖ್ಯಸ್ಥನಾದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ರಕ್ಷಿಸುತ್ತಿದೆ. ಎಷ್ಟೋ ಪ್ರಕರಣಗಳಲ್ಲಿ ಅಧಿಕಾರ ನಡೆಸುವ ಸರ್ಕಾರಗಳೇ ಆರೋಪಿಗಳನ್ನು ರಕ್ಷಣೆ ಮಾಡುತ್ತವೆ. ಹೀಗಿರುವಾಗ, ನಮ್ಮ ಹೋರಾಟ ಮತ್ತಷ್ಟು ತೀಕ್ಷ್ಣಗೊಳ್ಳಬೇಕು ಮತ್ತು ಪುರುಷರು ಹೆಣ್ಣು ಮಕ್ಕಳ ಜೊತೆಯಾಗಿ ನಿಂತು ಬೇಡಿಕೆಗಳು ಈಡೇರುವವರೆಗೂ ಅವರಿಗೆ ಸಾಥ್ ನೀಡಬೇಕು ಎಂದು ಹೇಳಿದರು.
ಮಹಿಳಾ ಕುಸ್ತಿ ಪಟುಗಳ ಹೋರಾಟ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ವಿದ್ಯಾರ್ಥಿ ಸಮೂಹ ನಿಮ್ಮ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ. ಆಳುವ ಸರ್ಕಾರಗಳು ಕಿಂಚಿತ್ತೂ ಹೆಣ್ಣುಮಕ್ಕಳ ರಕ್ಷಣೆ, ಭದ್ರತೆ ಕಡೆ ಗಮನ ಹರಿಸದೆ ಇರುವುದು, ಕನಿಷ್ಠ ಪ್ರತಿಕ್ರಿಯೆ ಸಹ ನೀಡದೆ ಇರುವುದು ಅವರ ಧೋರಣೆಯನ್ನು ತೋರಿಸುತ್ತದೆ. ಆದರೆ, ದೇಶದ ಹೆಮ್ಮೆಯಾಗಿರುವ ಕ್ರೀಡಾ ಪದಕ ವಿಜೇತ ಹೆಣ್ಣು ಮಕ್ಕಳು ಅತ್ಯಂತ ದಾರ್ಷ್ಟ್ಟದಿಂದ ಮುಂದುವರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬೆಂಬಲ ಅತ್ಯಂತ ಅವಶ್ಯಕ ಮತ್ತು ಇದು ನಮ್ಮ ಜವಾಬ್ದಾರಿ ಕೂಡ ಆಗಿದೆ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಒ. ಸಂಘಟನೆಯ ಪದಾಧಿಕಾರಿಗಳಾದ ಸುಷ್ಮಾ, ಚಂದ್ರಶೇಖರ್, ಜಯಂತ್, ದರ್ಶನ್, ಸೌಮ್ಯಾ , ನಯನ ಇನ್ನಿತರ ಹಲವು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಅಹಂಕಾರದ ಪರಮಾವಧಿ! ಕಾಂಗ್ರೆಸ್ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ!’
ಭಾರೀ ಗಾಳಿ ಮಳೆಗೆ ಕುಸಿದ ಮನೆಗಳು: ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಪರಿಶೀಲನೆ.
ಬಿಬಿಎಂಪಿ ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ