Sunday, September 8, 2024

Latest Posts

‘ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಗೆಲ್ಲುವುದು, ನಮ್ಮ ದೇವರು ನರೇಂದ್ರ ಮೋದಿ ಅವರ ಹೆಸರಿನಿಂದ’

- Advertisement -

Mysore political News: ಮೈಸೂರು: ಕಾರ್ಯಕರ್ತರ ಅಭಿಲಾಷೆಯಂತೆ, ಅವಕಾಶವಿದ್ದರೆ ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕೋರಿದ್ದೇವೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಕರಂದ್ಲಾಜೆ ಹಿರಿಯ ನಾಯಕಿ.ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನು ಗುರುತಿಸಿಯೇ ಕೇಂದ್ರ ಸಚಿವೆಯನ್ನಾಗಿ ಮಾಡಲಾಗಿದೆ. ಸಂಘಟನೆ ಬಲಪಡಿಸುವುದಕ್ಕೂ ಬಹಳ ಶ್ರಮಿಸಿದ್ದಾರೆ. ಅವರಿಗೆ ಯಾವುದೇ ಸ್ಥಾನ ಸಿಕ್ಕರೂ ನಮ್ಮ ಹಾರೈಕೆ ಅವರೊಂದಿಗೆ ‌ಸದಾ ಇದ್ದೇ ಇರುತ್ತದೆ ಎಂದರು. ಸಚಿವರ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಯಾರಾಗಬೇಕು, ಯಾವಾಗ ಆಗಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ. ಅದನ್ನು ಹೇಳಲು, ನಾನು ಬಹಳ ಕಿರಿಯ. ನಾನು ಪಕ್ಷಕ್ಕೆ ಬಂದು 10 ವರ್ಷ ಆಗುತ್ತಿದೆಯಷ್ಟೆ. ನಾನು ಪಕ್ಷದ ನೇಮಕದ ವಿಚಾರದಲ್ಲಿ ಹೇಳಲು ಆಗುವುದಿಲ್ಲ. ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಪಕ್ಷದ ಕಾರ್ಯಕರ್ತರು ಶೋಭಾ ಕರಂದ್ಲಾಜೆ ಅವರನ್ನು ಕರೆಯುತ್ತಿದ್ದಾರೆ. ನಾನೂ ಶುಭಾಶಯ ಕೋರಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಗೆಲ್ಲುವುದು ನಮ್ಮ ದೇವರು ನರೇಂದ್ರ ಮೋದಿ ಅವರ ಹೆಸರಿನಿಂದ. ಲೋಕಸಭೆ ಚುನಾವಣೆಗೂ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ದೃಷ್ಟಿಯಿಂದ ಮಾತ್ರವೇ ಅಧ್ಯಕ್ಷರು ಬೇಕು. ದೇಶದಾದ್ಯಂತ ಲೋಕಸಭಾ ಚುನಾವಣೆ ಮೋದಿ ಅವರ ಹೆಸರಿನಲ್ಲೇ ನಡೆಯುತ್ತದೆ. ಜನರು ಮತ ಹಾಕುವುದು ಕೂಡ ಅವರನ್ನು ನೋಡಿಯೇ. ನಾನೂ ಎರಡು ಚುನಾವಣೆಗಳನ್ನು ಅವರ ಹೆಸರಲ್ಲೇ ಗೆದ್ದಿದ್ದೇನೆ.

ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಗೆಲ್ಲುವುದು ನಮ್ಮ ದೇವರು ನರೇಂದ್ರ ಮೋದಿ ಅವರ ಹೆಸರಿನಿಂದ. ಲೋಕಸಭೆ ಚುನಾವಣೆಗೂ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ದೃಷ್ಟಿಯಿಂದ ಮಾತ್ರವೇ ಅಧ್ಯಕ್ಷರು ಬೇಕು. ದೇಶದಾದ್ಯಂತ ಲೋಕಸಭಾ ಚುನಾವಣೆ ಮೋದಿ ಅವರ ಹೆಸರಿನಲ್ಲೇ ನಡೆಯುತ್ತದೆ. ಜನರು ಮತ ಹಾಕುವುದು ಕೂಡ ಅವರನ್ನು ನೋಡಿಯೇ. ನಾನೂ ಎರಡು ಚುನಾವಣೆಗಳನ್ನು ಅವರ ಹೆಸರಲ್ಲೇ ಗೆದ್ದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ಅವರ ಹೆಸರಿನಲ್ಲೇ ಗೆಲ್ಲೋನು. ಬೇರೆಯವರ ಪ್ರಭಾವವೇನೂ ಇರುವುದಿಲ್ಲ’ ಎಂದರು.

ಪಕ್ಷದ ರಾಜ್ಯ ಘಟಕಕ್ಕೂ ಒಳ್ಳೆಯ ನೇತೃತ್ವ ಬೇಕು. ಹೊಸ ನಾಯಕತ್ವ ಬರಬೇಕು ಎಂಬುದು ಬಹಳಷ್ಟು ಕಾರ್ಯಕರ್ತರ ಅಭಿಲಾಷೆಯೂ ಆಗಿದೆ. ಅದಕ್ಕೆ ಪೂರಕವಾಗಿ ಮಾಧ್ಯಮದಲ್ಲಿ ಒಂದಷ್ಟು ಊಹೆಗಳನ್ನು ಮಾಡಲಾಗುತ್ತಿದೆಯಷ್ಟೆ ಎಂದು ಪ್ರತಿಕ್ರಿಯಿಸಿದರು.
ವರದಿ ಪರಮೇಶ್ ಪಿರಿಯಾಪಟ್ಟಣ, ಕರ್ನಾಟಕ ಟಿವಿ

ಮರ್ಯಾದಾ ಹತ್ಯೆ ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಗಳನ್ನೇ ಹತ್ಯೆ ಮಾಡಿದ ತಂದೆ..

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

- Advertisement -

Latest Posts

Don't Miss