Hubli News: ಹುಬ್ಬಳ್ಳಿ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐದಾರು ಜನರು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗಂಗಾಧರ ನಗರದಲ್ಲಿ ವಿನಾಯಕ ರೋಣ ಎಂಬಾತನೇ ಹಲ್ಲೆಗೊಳಗಾದ ಯುವಕ. ಐದು ಸಾವಿರ ರೂ. ಹಣಕ್ಕೆ ಬಡ್ಡಿ ಕೊಡದೆ ಇರುವ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ಯುವಕ ಹಾಗೂ ಆತನ ಸಂಬಂಧಿಗಳು ಆರೋಪಿಸುತ್ತಿದ್ದಾರೆ. ನಾನು ಬಡ್ಡಿಯನ್ನು ಸರಿಯಾಗಿ ಕಟ್ಟಿಕೊಂಡು ಬಂದಿದ್ದೇನೆ. ಮನೆಗೆ ಕರೆದು ಗಣೇಶ ಸಿದ್ದಾಪುರ, ಅಭಿಷೇಕ ರಾಮಗೇರಿ, ಯಲ್ಲಪ್ಪ ರಾಮಗೇರಿ, ವರುಣ ಭಜಂತ್ರಿ, ಮಣಿಕಂಠ ಸಿದ್ದಾಪುರ, ನಾಗರಾಜ್ ಭಜಂತ್ರಿ, ತಿರಕ್ ಭಜಂತ್ರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ವಿನಾಯಕ ಹಾಗೂ ಆತನ ಸಹೋದರಿ ನಾಗಮ್ಮ ಆರೋಪಿಸಿದ್ದಾರೆ.
ಆದರೆ ಘಟನೆ ಕುರಿತಂತೆ ವಿವಾಹಿತ ಗೃಹಿಣಿ ವಿಚಾರವಾಗಿ ಹಲ್ಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗೃಹಣಿಯೋರ್ವಳಿಗೆ ವಿಡಿಯೋ ಕಿಟಲೆ ಮಾಡಿದ್ದ ಎನ್ನಲಾಗಿದೆ. ಪೊಲೀಸರ ಮೂಲಗಳ ಪ್ರಕಾರ ಗೃಹಣಿ ವಿಚಾರವಾಗಿ ಯುವಕನಿಗೆ ಬುದ್ಧಿ ಮಾತು ಹೇಳಲು ವಿನಾಯಕನನ್ನು ಹಿಡಿಯಲು ಹೋದಾಗ ಗೋಡೆ ಹಾರಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ಎರಡು ಘಟನೆಗಳನ್ನು ನೋಡುವುದಾದರೆ ಯುವಕ ಯಾವ ಘಟನೆಯಿಂದ ಗಾಯಗೊಂಡಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆಸ್ಪತ್ರೆಗೆ ಕಾನೂನು ಸುವ್ಯಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಬೆಂಡಿಗೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡಿರುವ ಯುವಕನನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.