Tuesday, October 15, 2024

Latest Posts

Movie News: ನಟ ಗೋವಿಂದ ಕಾಲಿಗೆ ಗುಂಡೇಟು! ಬಾಲಿವುಡ್ ಮಂದಿ ಆತಂಕ

- Advertisement -

Bollywood news: ಸಿನಿಮಾ ಮಂದಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತಲೇ ಇರುತ್ತೆ. ಅವರು ನಿಂತರೂ ಸುದ್ದಿ. ಕುಂತರೂ ಸುದ್ದಿ. ಅಷ್ಟೇ ಯಾಕೆ ಅವರ ಕಾರು, ಹಾಕುವ ಶೂ, ಧರಿಸುವ ಡ್ರೆಸ್ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತೆ. ಇನ್ನು, ಸಣ್ಣಪುಟ್ಟ ವಿವಾದಗಳೇನಾದರೂ ಆಗಿಬಿಟ್ಟರೆ, ಮುಗಿದೇ ಹೋಯ್ತು. ಟ್ರೋಲ್ ಕಟ್ಟಿಟ್ಟ ಬುತ್ತಿ. ಈಗ ಬಾಲಿವುಡ್ ನಟರೊಬ್ಬರ ಕಾಲಿಗೆ ಗುಂಡೇಟು ಬಿದ್ದಿದೆ. ಗುಂಡು ಬಿದ್ದ ಮೇಲೆ ಅದು ಸುದ್ದಿಯಾಗದೇ ಇರುತ್ತಾ? ಅಷ್ಟಕ್ಕೂ ಗಾಬರಿ ಪಡುವಂಥದ್ದೇನೂ ನಡೆದಿಲ್ಲ. ಆದರೂ, ಅವರ ಕಾಲಿಗೆ ಗುಂಡೇಟು ಬಿದ್ದದ್ದು ಹೇಗೆ ಮತ್ತು ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೊರಿ.

ಎಲ್ಲಾ ಸರಿ ಕಾಲಿಗೆ ಗುಂಡೇಟು ಬೀಳಿಸಿಕೊಂಡ ಆ ಬಾಲಿವುಡ್ ನಟ ಬೇರಾರೂ ಅಲ್ಲ, ಗೋವಿಂದ. ಹೌದು, ತಮ್ಮ ವಿಭಿನ್ನ ಶೈಲಿಯ ಡ್ಯಾನ್ಸ್ ಮೂಲಕ ಗಮನಸೆಳೆದು, ಅಪಾರ ಅಭಿಮಾನಿ ವರ್ಗವನ್ನು ಪಡೆದಿರುವ ಗೋವಿಂದ ಅವರು ತಮ್ಮದೇ ಗನ್ ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದಾರೆ! ಅರೇ, ಇದು ಹೇಗೆ ಎಂಬ ಅಚ್ಚರಿಯಾಗಬಹುದು. ಆದೂ ಇದು ನಿಜ. ಮುಂಬೈನಲ್ಲಿರುವ ಅವರ ಮನೆಯಲ್ಲೇ ಈ ಘಟನೆ ನಡೆದು ಹೋಗಿದೆ.

ಅಕ್ಟೋಬರ್ 1 ರ ಮುಂಜಾನೆ 5 ಗಂಟೆ ಹೊತ್ತಿಗೆ ಈ ಘಟನೆ ನಡದಿದೆ. ಆದರೆ, ದೊಡ್ಡ ಅವಘಢ ಸಂಭವಿಸಿಲ್ಲ. ಇದೀಗ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಹಾಗೆ, ಲೈಸನ್ಸ್ ಇರುವ ಅವರದೇ ಗನ್ ಮಿಸ್ ಫೈಯರ್ ಆಗಿದೆ. ಹೀಗಾಗಿ ಈ ಘಟನೆಗೆ ಕಾರಣವಾಗಿದೆ. ಈ ಸಂಬಂಧ ಗೋವಿಂದ ಅವರು, ಫಸ್ಟ್ ಟೈಮ್ ರಿಯಾಕ್ಷನ್ ಕೊಟ್ಟಿದ್ದಾರೆ. ಐಯುಸಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು ಪ್ರಾಣಾಪಾಯದಿಂದ ದೂರವಾಗಿದ್ದಾರೆ.

ಇನ್ನು, ಅವರೇ ತಮ್ಮ ಫ್ಯಾನ್ಸ್ ಗೆ ಫ್ರೆಂಡ್ಸ್ ಗೆ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ನಿಮ್ಮ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಆಕಸ್ಮಿಕವಾಗಿ ಕಾಲಿಗೆ ಗುಂಡು ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದ’ ಎಂದಿದ್ದಾರೆ.

ಗೋವಿಂದ ಅವರು ಇಂದು ಕೋಲ್ಕತ್ತ ಹೋಗಬೇಕಿತ್ತು. ಹಾಗಾಗಿ ಮುಂಜಾನೆ 5 ಗಂಟೆ ಸುಮಾರಿಗೆ ಅವರು ರೆಡಿ ಆಗುವ ವೇಳೆ ಕೈಯಲ್ಲಿದ್ದ ಗನ್ ಕೈ ಜಾರಿದೆ. ಆಕಸ್ಮಿಕವಾಗಿ ಬುಲೆಟ್ ಫೈಯರ್ ಆಗಿದೆ. ಇದರಿಂದ ಅವರ ಕಾಲಿಗೆ ಬುಲೆಟ್ ಬಿದ್ದಿದೆ. ಬುಲೆಟ್ ಶಬ್ದ ಬಂದ ಬಳಿಕ ಮನೆಯಲ್ಲಿದ್ದ ಎಲ್ಲರಿಗೂ ಗಾಬರಿಯಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಕೇಸ್ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಇನ್ನು, ಗೋವಿಂದ ಅವರಿಗೆ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಡೆದ ಘಟನೆ ಬಗ್ಗೆ ಗೋವಿಂದ ಅವರ ಮ್ಯಾನೇಜರ್ ಕೂಡ ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss