Political News: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಕುಟುಂಬದ ವಿರುದ್ಧ ಈಗ ಭೂ ಕಬಳಿಕೆಯ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಕ್ರೈಸ್ತ ಸಮುದಾಯದ ಸಿಎಸ್‌ಐ ಆಸ್ಪತ್ರೆಗೆ ಸೇರಿದ ಕೆಲವು ಜಮೀನುಗಳು ಮತ್ತು ಬೆಂಗಳೂರು ನಗರದಲ್ಲಿ ಸಿಎಸ್‌ಐಟಿಎ ಗೆ ಸೇರಿದ ಅಮೂಲ್ಯ ಆಸ್ತಿಗಳನ್ನು ಕಬಳಿಸಲಾಗಿದೆ ಎಂದು ಸಮಾಜ ಸೇವಕರಾದ ಪ್ರೇಮಕುಮಾರ್, ಸಿಂತ್ಯ ಹಾಗೂ ಕ್ರೈಸ್ತ ಸಮುದಾಯದ ಸ್ಟೀಫನ್ ಆರೋಪ ಮಾಡಿದ್ದಾರೆ.
ರಕ್ಷಾ ರಾಮಯ್ಯ ಅವರ ತಂದೆ, ಮಾಜಿ ಸಚಿವರು, ಮೆ.ರಾಮಯ್ಯ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಮುಖ್ಯಸ್ಥ ಎಂ.ಆರ್.ಸೀತಾರಾಂ ಅವರು ಕೆಲವು ಭೂಗಳ್ಳರೊಂದಿಗೆ ಸೇರಿಕೊಂಡು ಆಸ್ತಿಗಳನ್ನು ಕಬಳಿಸಲು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಜಮೀನುಗಳು ಮಾತ್ರವಲ್ಲದೆ ಬೆಂಗಳೂರಿನ ಎಂ.ಜಿ.ರಸ್ತೆಯ ಅತಿ ಅಮೂಲ್ಯ ಆಸ್ತಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ರೂಪಿಸಲಾಗಿದೆ. ಈ ಆಸ್ತಿಯನ್ನು ಗೂಂಡಾಗಳು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನಾಮಪತ್ರ ವಾಪಸ್ ಪಡೆದಿದ್ದೇನೆ, ಆದ್ರೆ ಧರ್ಮಯುದ್ಧದಿಂದ ಹಿಂದೆ ಸರಿಯುವುದಿಲ್ಲ: ದಿಂಗಾಲೇಶ್ವರ
ಫಯಾಜ್ ಮೇಲೆ ಭುಗಿಲೆದ್ದ ಆಕ್ರೋಶ: ಯಾವ ಮುಸ್ಲಿಂ ವಕೀಲರೂ ವಕಾಲತ್ತು ವಹಿಸದಂತೆ ಆಗ್ರಹ
ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ: ಸಂತೋಷ್ ಲಾಡ್