Cricket News: ಟೀಮ್ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್, ನನಗೆ ಆರ್ಸಿಬಿ ಪರ ಆಡಲು ಒಂಚೂರು ಇಷ್ಟವಿರಲಿಲ್ಲ. ಆದರೆ ನನ್ನ ಕ್ರಿಕೇಟ್ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ, ಬ್ಲಾಕ್ಮೇಲ್ ಮಾಡಿ, ಆರ್ಸಿಬಿ ಪರ ಆಡುವಂತೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ನನಗೆ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡುವ ಆಸೆ ಇತ್ತು. ಆದರೆ ಬೆದರಿಕೆ ಹಾಕಿ ನಾನು ಆರ್ಸಿಬಿ ಪರ ಆಡುವಂತೆ ಮಾಡಿದರು. ಈ ಕೆಲಸ ಮಾಡಿದ್ದು, ಇಂಡಿಯನ್ ಪ್ರಿಮಿಯರ್ ಲೀಗ್ನ ಅಂದಿನ ಅಧ್ಯಕ್ಷ ಲಲಿತ್ ಮೋದಿ ಎಂದು ಪ್ರವೀಣ್, ಲಲಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಪ್ರವೀಣ್ಗೆ ಯಾಕೆ ಆರ್ಸಿಬಿ ಪರ ಆಡಲು ಇಷ್ಟವಿರಲಿಲ್ಲವೆಂದರೆ, ತನ್ನ ಊರಾದ ಮೀರತ್ನಿಂದ ಬೆಂಗಳೂರು ತುಂಬಾ ದೂರದಲ್ಲಿತ್ತು. ಅಲ್ಲದೇ ಬೆಂಗಳೂರಿನ ಆಹಾರ ಕೂಡ ಪ್ರವೀಣ್ಗೆ ಇಷ್ಟವಾಗುತ್ತಿರಲಿಲ್ಲವಂತೆ. ಆದರೆ ದೆಹಲಿ, ಮೀರತ್ಗೆ ಹತ್ತಿರವಾಗಿದ್ದು, ನನಗೆ ಮನೆಗೆ ಹೋಗಲು ಕೂಡ ಅನುಕೂಲವಾಗುತ್ತಿತ್ತು. ಹಾಗಾಗಿ ನಾನು ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪರವಾಗಿ ಆಡಲು ಇಚ್ಛಿಸಿದ್ದೆ.
ಆದರೆ ಅದಕ್ಕೂ ಮುನ್ನ ಒಂದು ಪತ್ರದಲ್ಲಿ ನನ್ನ ಸಹಿ ಹಾಕಿಸಿಕೊಂಡಿದ್ದರು. ಅದರಲ್ಲಿ ನಾನು ಆರ್ಸಿಬಿ ಪರ ಆಡುತ್ತೇನೆ ಎಂದು ಬರೆದಿತ್ತು. ನನಗೆ ಇಂಗ್ಲೀಷ್ ಓದಲು ಬರದ ಕಾರಣ, ನಾನು ಹಾಗೇ ಸಹಿ ಹಾಕಿದ್ದೆ. ಆದರೂ ನಾನು ದೇಹಲಿ ಪರವೇ ಆಡುತ್ತೇನೆ ಎಂದು ಹೇಳಿದ್ದೆ. ಆದರೆ ಲಲಿತ್ ಮೋದಿ, ನೀನು ಆರ್ಸಿಬಿ ಪರ ಆಡದಿದ್ದಲ್ಲಿ, ನಿನ್ನ ಕ್ರಿಕೇಟ್ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಸಿದ್ದರು. ಈ ಕಾರಣಕ್ಕೆ ನಾನು ಆರ್ಸಿಬಿ ಪರ ಆಡಬೇಕಾಯಿತು ಎಂದು ಪ್ರವೀಣ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಲುವಾಗಿ ಬಿಜೆಪಿ ರಾಮಮಂದಿರ ಗಿಮಿಕ್: ಮಮತಾ ಬ್ಯಾನರ್ಜಿ