Sunday, September 8, 2024

Latest Posts

ಮಗನ ಮದುವೆ ಸಂಭ್ರಮದ ವೇೆಳೆ 40 ದಿನ ಅನ್ನ ದಾಸೋಹ ಮಾಡುತ್ತಿರುವ ಅಂಬಾನಿ

- Advertisement -

Special Story: ಅಂಬಾನಿ ಮನೆತನದ ಮದುವೆ ಅಂದ್ರೆ ಸುಮ್ಮನೆ ಮಾತಾ..? ಭಾರತದ ಅತ್ಯಂತ ಶ್ರೀಮಂತ ಮನೆತನದ ಕುಟುಂಬಸ್ಥರ ಮದುವೆ. ಕೋಟಿ ಕೋಟಿ ಖರ್ಚು ಮಾಡಿ, ಅಂಬಾನಿ ತನ್ನ ಮೂರು ಮಕ್ಕಳ ಮದುವೆ ಮಾಡಿಸಿದ್ದಾರೆ. ಆದರೆ ಮೂರನೇ ಮಗನ ಮದುವೆ ಮಾತ್ರ, ಸಖತ್ ಸ್ಪೆಶಲ್ ಮದುವೆ.

ಎರಡೆರಡು ಬಾರಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ. ಮದುವೆ, ರೆಸೆಪ್ಶನ್ ಎಲ್ಲವೂ ಇದೆ. ಈ ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಭೋಜನ, ಎಕ್ಸ್‌ಪೆನ್ಸಿವ್ ಗಿಫ್ಟ್‌ಗಳು, ಎಲ್ಲವನ್ನೂ ನೀಡಲಾಗುತ್ತಿದೆ. ಅಲ್ಲದೇ, ಕೋಟಿ ಕೋಟಿ ಕೊಟ್ಟು, ವಿದೇಶಿ ಸಿಂಗರ್‌ಗಳನ್ನು ಕರೆಸಿ, ಕಾರ್ಯಕ್ರಮ ನಡೆಸಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿರುವ ಅಂಬಾನಿ, ಬಡವರಿಗೋಸ್ಕರವೂ ಅನ್ನ ದಾಸೋಹದ ವ್ಯವಸ್ಥೆ ಮಾಡಿದ್ದಾರೆ.

ತಮ್ಮ ಮನೆಯ ಬಳಿ, ದೊಡ್ಡ ಶಾಮಿಯಾನಾ ಹಾಕಿಸಿ, 40 ದಿನಗಳ ಕಾಲ ಭಂಡಾರಾ ಎಂಬ ಕಾರ್ಯಕ್ರಮ ಮಾಡಿದ್ದು, ಇಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಸೇರಿ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಊಟವೆಂದರೆ ಬರೀ ಅನ್ನ ಸಾರಲ್ಲ. ಮಧ್ಯಮ ವರ್ಗದವರು ಮದುವೆ ಮಾಡಿದ್ರೆ, ಆ ದಿನದ ಊಟ ಹೇಗಿರುತ್ತದೆಯೋ, ಅದೇ ರೀತಿ 40 ದಿನಗಳ ಕಾಲ ಜನರಿಗೆ ಮದುವೆ ಊಟವನ್ನೇ ಹಾಕಿಸಲಾಗುತ್ತಿದೆ.

ಅನ್ನ, ಸಾಂಬಾರ್, ಪೂರಿ, ಪನೀರ್ ಮಸಾಲೆ, ಸಿಹಿ ತಿಂಡಿ, ಸೇರಿ ಭೂರಿ ಭೋಜನವನ್ನೇ ನೀಡಲಾಗಿದೆ. ಇಲ್ಲಿ ಉಂಡ ಅದೆಷ್ಟೋ ಜನ, ಅಂಬಾನಿಗೆ ಸದಾ ಒಳ್ಳೆಯದಾಗಲಿ ಎಂದು ಹರಿಸಿದಿದ್ದಾರೆ. ವೃದ್ಧರು, ಅನಾಥರು, ಕೂಲಿ ಕಾರ್ಮಿಕರು, ಕೆಲಸಕ್ಕೆ ಹೋಗುವವರು, ಅಂಗಡಿಗಳಲ್ಲಿ ಕೆಲಸ ಮಾಡುವವರು, ಡಿಲೆವರಿ ಬಾಯ್ಸ್ ಸೇರಿ, ಹಲವರು ಅಂಬಾನಿಯವರ ಬಂಢಾರಾ ಕಾರ್ಯಕ್ರಮಕ್ಕೆ ಬಂದು, ಊಟ ಮಾಡುತ್ತಿದ್ದಾರೆ.

- Advertisement -

Latest Posts

Don't Miss