Movie News: ನಟಿ ರಶ್ಮಿಕಾ ಮಂದಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಅನಿಲ್ ಮತ್ತು ರಾಧಿಕಾ ಮದುವೆಗೆ ತೆರಳಿದ್ದು, ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ.
ಅವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಿಂತ ಹೆಚ್ಚು ವ್ಯಂಗ್ಯ ಕಾಮೆಂಟ್ಸ್ ಬಂದಿದೆ. ಏಕೆಂದರೆ, ಸದಾ ಜಿಮ್‌ನಲ್ಲೇ ಕಾಲ ಕಳೆಯುವ ರಶ್ಮಿಕಾ ದೇಹ, ಬಾಡಿ ಬಿಲ್ಡರ್‌ನಂತೆ ಬದಲಾಗಿದೆ. ಹಾಗಾಗಿ ಬಳಕುವ ಬಳ್ಳಿಗಿಂತ ಹೆಚ್ಚಾಗಿ, ರಶ್ಮಿಕಾ ಬಾಡಿ ಬಿಲ್ಡರ್ ತರಹವೇ ಕಾಣುತ್ತಿದ್ದಾರೆಂದು ಕಾಮೆಂಟ್ಸ್‌ನಲ್ಲಿ ಹೇಳಲಾಗಿದೆ.
ರಶ್ಮಿಕಾ ತಾವು ಉಟ್ಟಿದ್ದ ಸೀರೆಗೆ ಸ್ಲಿವಲೆಸ್ ಬ್ಲೌಸ್ ಧರಿಸಿದ್ದರು. ಹೀಗಾಗಿ ಅವರ ಕೈ ಕಾಣುತ್ತಿತ್ತು. ಹಿಂದಿನಿಂದ ರಶ್ಮಿಕಾ ತಿರುಗಿದಾಗ, ಸೇಮ್ ಬಾಡಿ ಬಿಲ್ಡರ್ ತರಹವೇ ಕಂಡರು ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಲೇಡಿ ಬಾಡಿ ಬಿಲ್ಡರ್ ಅಂದಿದ್ದಾರೆ.
ಈ ವೀಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಬಂದಿದೆ. ಕೆಲವರು ರಶ್ಮಿಕಾರ ಈ ಅವತಾರವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಈ ಅವತಾರವನ್ನು ತೆಗಳಿದ್ದಾರೆ.