ಕರ್ನಾಟಕ ಟಿವಿ : ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ ಅಮಿತ್ ಶಾ ನೇಮಕ ಮಾಡಿದ್ದಾರೆ.. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ನಳೀನ್ ಕುಮಾರ್ ಕಟೀಲ್ ರಾಜ್ಯಧ್ಯಕ್ಷರನ್ನಾಗಿ ಅಮಿತ್ ಶಾ ನೇಮಕ ಮಾಡಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆ ಹೊರಡಿಸಿದ್ದಾರೆ..
BSY ಆಪ್ತ ಅರವಿಂದ್ ಲಿಂಬಾವಳಿಗೆ ನಿರಾಸೆಯ ಹುಳಿ..!
ಬಿಎಸ್ ವೈ ರನ್ನ ಲೋಕಸಭಾ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಲಾಗುತ್ತೆ ಅಂತ ಹೇಳಲಾಗ್ತಿತ್ತು.. ಸಿಎಂ ಹಾಗೂ ಅಧ್ಯಕ್ಷ ಎರಡೂ ಸ್ಥಾನಗಳನ್ನ ಯಡಿಯೂರಪ್ಪ ನಿರ್ವಹಣೆ ಮಾಡ್ತಿದ್ರು.. ತನ್ನ ಆಪ್ತಅರವಿಂದ ಲಿಂಬಾವಳಿಯನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಬಿಎಸ್ ವೈ ಮುಂದಾಗಿದ್ರು.. ಆದ್ರೆ, ಸಂತೋಷ್ ಜೀ ಸಿ.ಟಿ ರವಿಯನ್ನ ರಾಜ್ಯಾಧ್ಯಕ್ಷ ಮಾಡಲು ಯೋಚಿಸಿದ್ರು.. ಆದ್ರೆ ಇಂದು ಸಿ.ಟಿ ರವಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಬಿಎಸ್ ವೈ ಸಂಪುಟ ಸೇರಿದ್ರು.. ಹೀಗಾಗಿ ಅರವಿಂದ ಲಿಂಬಾವಳಿ ಹಾದಿ ಸುಗಮವಾಯ್ತು.. ಶೀಘ್ರವೇ ಅರವಿಂದ ಲಿಂಬಾವಳಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡ್ತಾರೆ ಅಂತ ಎಲ್ಲರೂ ಅಂದು ಕೊಂಡಿದ್ರು. ಆದ್ರೆ, ಅಮಿತ್ ಶಾ ಸಂಪುಟ ವಿಸ್ತರಣೆ ಶಾಕ್ ನಿಂದ ಬಿಎಸ್ ವೈ ಹೊರಬರುವ ಮುನ್ನವೇ ಕಟೀಲ್ ನೇಮಕ ಮಾಡುವ ಮೂಲಕ ಬಿಎಸ್ ವೈ ಗೆ ಮತ್ತೊಂದು ಶಾಕ್ ನೀಡಿದ್ದಾರೆ..