ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ..: ಜ್ವರ ಬಂದ್ರೆ ಹೀಗೆ ಮಾಡಿ!: Dr Anjanappa Podcast

Health Tips: ಮಳೆಗಾಲ ಮುಗಿಯುತ್ತ ಬಂದು ಚಳಿಗಾಲ ಶುರುವಾಗಿದೆ. ಈ ಎರಡೂ ಕಾಲದಲ್ಲಿ ರೋಗಾಣಿಗಳು ಹರಡುವುದೆಲ್ಲ ಕಾಮನ್. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ವೈರಲ್ ಫಿವರ್ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಡಾ.ಆಂಜೀನಪ್ಪ ಅವರು ಮೊಟ್ಟೆ ಸೇವನೆ ಬಗ್ಗೆ ಮಾತನಾಡಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಚಳಿಗಾಲದಲ್ಲಿ, ಮಳೆಗಾಲದಲ್ಲಿ ಮಕ್ಕಳಿಗೆ ಬೆಚ್ಚಗಿರಿಸಬೇಕು. ಜ್ವರ, ನೆಗಡಿ, ಇದ್ದಾಗ ಶಾಲೆಗೆ ಕಳುಹಿಸದಿರುವುದು ಉತ್ತಮ. ಅಲ್ಲದೇ ಮಕ್ಕಳು ಮಳೆಯಲ್ಲಿ ನೆನೆದು ಬಂದರೆ, ಬೇಗ ಅವರ ಮೈ ಕ್ಲೀನ್ ಮಾಡಿ, ಬೇರೆ ಉಡುಪು ಹಾಕಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಿಗೆ ಹೆಚ್ಚು ಜಂಕ್ ಫುಡ್ ನೀಡುವ ಬದಲು ಪ್ರತಿದಿನ 1 ಮೊಟ್ಟೆ ನೀಡಬೇಕು ಅಂತರೆ ವೈದ್ಯರು.

ಅಲ್ಲದೇ ಕೋಲ್ಡ್ ಪಾನೀಯ, ಫ್ರಿಜ್‌ನಲ್ಲಿ ಇರಿಸಿದ ಆಹಾರಗಳನ್ನು ನೀಡಲೇಬೇಡಿ. ಬಿಸಿಯಾದ ಪೇಯ, ಆಹಾರಗಳನ್ನೇ ನೀಡಬೇಕು. ತಂಗಳನ್ನು ನೀಡಬೇಡಿ. ನಲ್ಲಿ ನೀರು ಕುಡಿಯುವ ಬದಲು, ನೀರನ್ನು ಕುದಿಸಿ, ಆರಿಸಿ ನೀಡಬೇಕು ಅಂತಾ ಸಲಹೆ ನೀಡುತ್ತಾರೆ ವೈದ್ಯರು.

ಏಕೆಂದರೆ ಯಾವುದೇ ರೋಗ ಬಂದರೂ, ನೀರಿನ ಸೇವನೆಯಿಂದಲೇ ಬರುತ್ತದೆ. ಹಾಗಾಗಿ ಕುದಿಸಿ, ಆರಿಸಿದ ನೀರನ್ನೇ ಕುಡಿಯಿರಿ. ಅಲ್ಲದೇ, ಮನೆಯ ಸುತ್ತಮುತ್ತ ಕ್ಲೀನ್ ಆಗಿರಿಸಿ. ನಿಂತ ನೀರಿದ್ದರೆ, ಅಲ್ಲೇ ಡೆಂಘ್ಯೂ ಅಂಥ ಖಾಯಿಲೆ ಉದ್ಭವವಾಗುತ್ತದೆ. ಹಾಗಾಗಿ ಆದಷ್ು Soಳ್ಳೆ ಬಾರದ ಹಾಗೆ ನೋಡಿಕ“ಳ್ಳಿ.ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author