Sunday, September 8, 2024

Latest Posts

22 ನೇ ವರ್ಷಕ್ಕೆ ಐಎಎಸ್ ಅಧಿಕಾರಿಯಾದ ಅನನ್ಯಾ ಸಿಂಗ್.

- Advertisement -

ಪ್ರತಿ ವರ್ಷವು ಲಕ್ಷಾಂತರ ಮಂದಿ ಯುಪಿಎಸ್‌ಸಿ ನಾಗರಿಕ ಸೇವಾ ಪರಿಕ್ಷೆಗೆ ಹಾಜರಾಗುತ್ತಾರೆ. ಅದರಲ್ಲಿ ಕೆಲವರು ಮಾತ್ರ ಉತ್ತಿರ್ಣರಾಗುತ್ತಾರೆ ಅಂತವರಲ್ಲಿ ಒಬ್ಬರು ಅನನ್ಯಾ ಸಿಂಗ್.

ಯುಪಿಎಸ್‌ಸಿ ಪರೀಕ್ಷೆಯು ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು. ಅದಕ್ಕೆ ಹೆಚ್ಚಿನ ಪರಿಶ್ರಮ ಬೇಕು.

ಒಳ್ಳೆಯ ಕೋಚಿಂಗ್‌ನಲ್ಲಿ ತರಬೇತಿ ಅವಶ್ಯಕವಾಗಿ ಬೇಕಾಗುತ್ತದೆ. ಅದರಲ್ಲಿ ಕೆಲವು ಅಭ್ಯರ್ಥಿಗಳು ಮಾತ್ರ ಯುಪಿಎಸ್‌ಸಿ ಪರೀಕ್ಷೆಯನ್ನು ಮೂದಲ ಬಾರಿಗೆ ಪಾಸ್ ಆಗುತ್ತಾರೆ. ಕೆಲವು ಅಭ್ಯರ್ಥಿಗಳು ಉತ್ತೀರ್ಣರಾಗಲೂ ವರ್ಷಗಳೇ ಬೇಕಾಗುತ್ತದೆ. ಅದರಲ್ಲಿ ಮೂದಲನೆ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾದವರು ಅನನ್ಯಾ ಸಿಂಗ್. ಇವರು 22 ನೇ ವಯಸ್ಸಿನಲ್ಲಿ ಈ ಸಾಧನೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರು ಪ್ರಯಾಗ್‌ರಾಜ್ ನಿವಾಸಿಯಾಗಿದ್ದರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಬಯಸುವವರಿಗೆ ಇವರೆ ಒಂದು ಉತ್ತಮ ಉದಾಹರಣೆ.

ಅನನ್ಯಾ ಸಿಂಗ್ ಹೇಳುವಂತೆ ಯುಪಿಎಸ್‌ಸಿ ಪರೀಕ್ಷೆಗೆ ಬಹಳ ಕಠಿಣ ಪರಿಶ್ರಮದಿಂದ ತಯಾರಾಗಿದ್ದಾರೆ. ಇದೆ ಕಾರಣಕ್ಕೆ ಅವರು ಮೂದಲನೆ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಉತ್ತೀರ್ಣರಾಗಿ  ಭಾರತದಲ್ಲಿ 51ನೇ ರ‍್ಯಾಂಕ್ ಪಡೆದು ಯುವಕ-ಯುವತಿಯರಿಗೆ ಮಾದರಿಯಾಗಿದ್ದರೆ.

ಶ್ರದ್ದೆ,ಕಠಿಣ ಪರಿಶ್ರಮ ,ಇಂತಹ ಪರೀಕ್ಷೆಯನ್ನು ಪಾಸ್ ಆಗಬಹುದು ಎಂದು ಅನನ್ಯಾ ಸಿಂಗ್ ರವರು ಹೇಳುತ್ತಾರೆ. ಅನನ್ಯಾ ಅವರಿಗೆ ಬಾಲ್ಯದಿಂದಲೆ ಐಎಎಸ್ ಅಧಿಕಾರಿ ಆಗುವ ಕನಸು ಇತ್ತಂತೆ. ಈ ಕಾರಣದಿಂದ ತಮ್ಮ ಪದವಿ ಶಿಕ್ಷಣ ಪೂರೈಸುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸಲು ತಯಾರಿ ಮಾಡಿಕೊಂಡು 2019 ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದಿದ್ದಾರೆ.

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಅಥವಾ ಉತ್ತೀರ್ಣರಾಗಲು ಯೋಜಿತವಾಗಿ ತಯಾರಿಯನ್ನು ನಡೆಸುವುದು ಅನಿವಾರ್ಯ. ವೇಳಾಪಟ್ಟಿಯನ್ನು ಹಾಕಿಕೊಂಡು ಅದರಂತೆ ಅಧ್ಯಯನ ಮಾಡಬೇಕು. ಪ್ರತಿ ವಿಷಯಕ್ಕು ಸಮಯವನ್ನು ನೀಡಬೇಕು. ಇದರ ಜೊತೆಗೆ ನಿಮ್ಮ ಶಕ್ತಿ, ದೌರ್ಬಲ್ಯಗಳ ಬಗ್ಗೆ ಕೂಡ ಗಮನಹರಿಸಬೇಕು ಎಂದು ಅನನ್ಯಾ ಸಿಂಗ್ ಹೇಳುತ್ತಾರೆ.

ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳು ಹಳೆಯ ಯುಪಿಎಸ್‌ಸಿ ಪರೀಕ್ಷೆಯ ಪತ್ರಿಕೆಗಳನ್ನು ನೋಡಬೇಕು, ಯಾಕೆಂದರೆ ಕೆಲವು ಬಾರಿ ಪ್ರಶ್ನೆಗಳು ಪುನರಾವರ್ತನೆ ಆಗುತ್ತವೆ ಎಂಬುದು ಅನನ್ಯಾ ಅವರು ನೀಡುವ ಸಲಹೆ.

ಈಗೆ ಅನೇಕ ಸ್ಪರ್ಧಾತ್ಮಕ ಯುವ ಪೀಳಿಗೆ ಅನನ್ಯಾ ಸಿಂಗ್ ಅವರು  ಮಾದರಿಯಾಗುವುದರ ಜೊತೆಗೆ `ಮನಸ್ಸಿದ್ದರೆ ಮಾರ್ಗ’ ಎನುವ ಗಾದೆ ಮಾತನ್ನು ಸತ್ಯಮಾಡಿದ್ದಾರೆ.

- Advertisement -

Latest Posts

Don't Miss