Political News: ಬೆಂಗಳೂರಿನಲ್ಲಿ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಪ್ರಮುಖರ ಸಮ್ಮುಖದಲ್ಲಿ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ. ಎಸ್, ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಸಿಟಿ ರವಿ ಆರ್ ಅಶೋಕ್, ಬಿವೈ ವಿಜಯೇಂದ್ರ ಉಪಸ್ಥಿತರಿದ್ದರು. ಇನ್ನು ಸುಮಲತಾ ಜೊತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ದೊಡ್ಡಗಣೇಶ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ನರೇಂದ್ರ ಮೋದಿ ಆಡಳಿತ ಮೆಚ್ಚಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳು ಬರಬೇಕು ಅನ್ನೋದು ಜನರ ಅಭಿಪ್ರಾಯ. ಎಲ್ಲಾ 28 ಕ್ಷೇತ್ರದಲ್ಲೂ ಮೋದಿ ಪರ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ ನಿಂದ ಯಾವೊಬ್ಬ ಮಂತ್ರಿಯೂ ಸ್ಪರ್ಧೆಗೆ ಮುಂದಾಗಲಿಲ್ಲ.. ಇದಕ್ಮೆ ಕಾರಣ ಮೋದಿ ಅವರ ಜನಪ್ರಿಯತೆ. ಸುಮಲತಾ ಅಂಬರೀಶ್ ಅವರ ಬಗ್ಗೆ ಸಾಕಷ್ಟುವಿಚಾರ ಮಾಧ್ಯಮ ಗಳಲ್ಲಿ ಚರ್ಚೆ ಆಗ್ತಿದ್ವು. ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸ್ತಾರಾ ಅಂತಾ ಪ್ರಶ್ನೆ ಎದುರಾಗಿತ್ತು. ಆದರೆ ಇದೆಲ್ಲದಕ್ಕೂ ಸುಮಲತಾ ಅವರು ಇತಿಶ್ರೀ ಹಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಅಂಬರೀಶ್ ಅವರ ಜನಪ್ರಿಯತೆ, ಸಂಸದರಾಗಿ ಮಾಡಿರುವ ಕೆಲಸ ಇವೆಲ್ಲವೂ ಇಡೀ ರಾಜ್ಯಕ್ಕೆ ಸಂದೇಶ ಕೊಟ್ಟಿದ್ದಾರೆ. ಕೊಪ್ಪಳ ಭಾಗದಲ್ಲಿ ಶಿವರಾಮೇಗೌಡರು ಮೊದಲಬಾರಿ ಗೆದ್ದಿದ್ರು. ಕಾಂಗ್ರೆಸ್ ತೊರೆದು ಮೋದಿ ಅವರ ಬೆಂಬಲಕ್ಕೆ ಬಂದಿದ್ದಾರೆ. ಎಸ್. ಶಿವರಾಮೇಗೌಡ ಅವರ ಸೇರ್ಪಡೆ ಕೊಪ್ಪಳ ಮಾತ್ರವಲ್ಲ. ಜಿಲ್ಲೆಯ ಇತರೆ ಭಾಗದಲ್ಲೂ ಬಿಜೆಪಿಗೆ ಬಲ ಬಂದಿದೆ. ಸಚಿವ ಶಿವಾನಂದ ಪಾಟೀಲ್ ಅವರ ಸಂಬಂದಿ ಹರ್ಷ ಗೌಡ ಪಾಟೀಲ್ ಸೇರ್ಪಡೆ ಆಗಿದಾರೆ. ಕ್ರಿಕೆಟಿಗ ದೊಡ್ಡ ಗಣೇಶ ಬಿಜೆಪಿ ಸೇರ್ಪಡೆಯಾಗ್ತಿದಾರೆ. ಪ್ರತಿಯೊಬ್ಬರಿಗೂ ದೊಡ್ಡ ಗಣೇಶ್ ಚಿರಪರಿಚಿತ… 28ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲಲು ಹೊರಟಿದ್ದೇವೆ. ಎಲ್ಲರ ಅನುಭವ, ಜನಪ್ರಿಯತೆ ಅಪಾರ. ಅವರ ಸೇವೆ ಬಿಜೆಪಿ ಸದುಪಯೋಗಪಡಿಸಿಕೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಸಭೆ ವಿಚಾರo ಬಗ್ಗೆ ಮಾತನಾಡಿದ ವಿಜಯೇಂದ್ರ, ವಿನಾಶ ಕಾಲೇ ವಿಪರೀತ ಬುದ್ಧಿ. ಅವರ ರಾಜಕೀಯ ಜೀವನದಲ್ಲಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ, ಮಾಡುತ್ತಿದ್ದಾರೆ. ಮುಂದೆ ಅವರೇ ಅನುಭವಿಸುತ್ತಾರೆ ಎಂದಿದ್ದಾರೆ.
ನವೋದಯ ಆಕಾಂಕ್ಷಿಗಳಿಗೆ ದಾರಿದೀಪ.. ಸರ್ಕಾರಿ ಶಾಲೆಗಳಿಗೆ ಭರವಸೆಯ ಬಣ್ಣ ಈ ಶಿಕ್ಷಕಿ..
ಆಪರೇಷನ್ ಹಸ್ತ: 9 ಮಂದಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ..