Wednesday, January 15, 2025

Latest Posts

ನೇಹಾ ಹ* ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೇಸ್

- Advertisement -

Hubli News: ಹುಬ್ಬಳ್ಳಿ: ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ.

ನಗರದ ವೀರಾಪುರ ಓಣಿಯ ನಿವಾಸಿ ಅಂಜಲಿ (20) ಎಂಬಾಕೆಯೇ ಸಾವನ್ನಪ್ಪಿದ ಯುವತಿಯಾಗಿದ್ದು, ಈಕೆಗೆ ಅದೇ ಏರಿಯಾದ ವಿಶ್ವ ಅಲಿಯಾಸ್ ಗಿರೀಶ್ ಸಾವಂತ (21) ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾನೆಂದು ತಿಳಿದುಬಂದಿದೆ.

ವಿಶ್ವ ಎಂಬಾತ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ. ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ, ಇಂದು ಬೆಳಂಬೆಳ್ಳಗ್ಗೆ ಗುಡಿ ಓಣಿಯಲ್ಲಿನ ಅಂಜಲಿ ನಿವಾಸಕ್ಕೆ ತೆರಳಿ ಮನೆಯ ಕದ ಬಡಿದು, ಏಕಾಏಕಿ ಅಂಜಲಿ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಸದ್ಯ ವಿಷಯ ತಿಳಿದು ಸ್ಥಳಕ್ಕೆ ಘಂಟಿಕೇರಿ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಕಿಡ್ನ್ಯಾಪ್‌ ಕೇಸ್ : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ: ಪ್ರೀತಂಗೌಡ

ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss