Saturday, July 27, 2024

Latest Posts

ಜಯಪ್ರಕಾಶ ಹೋಟೆಲ್ ಬಳಿ ಕ್ರಿಕೆಟ್ ಬೆಟ್ಟಿಂಗ್ ; PSI ಕವಿತಾ ದಾಳಿ ಓರ್ವ ಅರೆಸ್ಟ್ ಇನ್ನೊಬ್ಬ ಪರಾರಿ

- Advertisement -

Hubli News: ಹುಬ್ಬಳ್ಳಿ: ನಗರದ ನೀಲಿಜನ್ ರಸ್ತೆಯಲ್ಲಿನ ಜಯಪ್ರಕಾಶ ಹೋಟೆಲ್ ಬಳಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಉಪನಗರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಓರ್ವ ಸೆರೆ ಸಿಕ್ಕು ಇನ್ನೋರ್ವ ಪರಾರಿಯಾದ ಘಟನೆ ನಡೆದಿದೆ.

ದಾಳಿಯ ಸಂದರ್ಭದಲ್ಲಿ ಸೆರೆ ಸಿಕ್ಕ ಆರೋಪಿಯನ್ನು ಮಂಟೂರು ರಸ್ತೆಯ ಸಮೀರ್ ಹಾಗೂ ಪರಾರಿಯಾಗಿರುವ ಆರೋಪಿ ಸಿಬಿಟಿಯ ಜೈಲಾನಿ ಖೋಡಪಾಲಿ ಅಂತಾ ತಿಳಿದು ಬಂದಿದೆ. ಬಂಧಿತ ಆರೋಪಿಯಿಂದ 3400 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾಗಿರುವ ಇನ್ನೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

ಉಪನಗರ ಠಾಣೆಯ PSI ಕವಿತಾ ನೇತೃತ್ವದ ತಂಡ ದಾಳಿಯನ್ನು ಮಾಡಿ ಆರೋಪಿಯನ್ನು ಬಂಧನ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ. PSI ಕವಿತಾ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿಡ್ನ್ಯಾಪ್‌ ಕೇಸ್ : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ: ಪ್ರೀತಂಗೌಡ

ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss