Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯು.ಹೆಚ್. ಸಾತೇನಹಳ್ಳಿ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿಂದೆ ನಿಖಿಲ್ ಎಂಬ ಯುವಕನ ಆತ್ಮಹತ್ಯೆಗೆ ಇನ್ಸ್ಪೆಕ್ಟರ್ ಸಾತೇನಹಳ್ಳಿ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈಗ ಕೇಸ್ ವಾಪಸ್ ತಗೆದುಕೊಳ್ಳದೆ ಹೋದರೆ ರೌಡಿಶೀಟರ್ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಕೇಶ್ವಾಪೂರ ನಿವಾಸಿ ಹರೀಶ್ ಪೂಜಾರಿ ಎಂಬುವವರು ಆರೋಪ ಮಾಡಿದ್ದಾರೆ.
ಹರೀಶ್ ಪೂಜಾರಿ ಕಳೆದ ವರ್ಷ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನ ಆದರೂ ಹರೀಶ್ ಇಬ್ಬರ ಹೆಸರಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಿದ್ದರು. ಅದೇ ಪ್ಲ್ಯಾಟ್ ವಿಷಯಕ್ಕೆ ಹರೀಶ್ ಪೂಜಾರಿ ಹಾಗೂ ಪತ್ನಿ ಮನೆಯವರ ನಡುವೆ ಗಲಾಟೆಯಾಗಿತ್ತು. ಗಲಾಟೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಳೆದ ಆಗಸ್ಟ್ 22ರಂದು ಹರೀಶ್ ಪೂಜಾರಿ ಪತ್ನಿ ವಿನಯಾ ತಂದೆ ಸಂಬಂಧಿಕರು ಹರೀಶ್ ಪೂಜಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ರಾಡ್ ನಿಂದ ಹಲ್ಲೆಗೆ ಯತ್ನಿಸಿದ್ದರು. ಆಗ ಹರೀಶ್ ಅವರ ಅಜ್ಜನಿಗೆ ಗಾಯಗಳಾಗಿವೆ. ಗಲಾಟೆ ಬಳಿಕ ಹರೀಶ್ ಅವರು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದು ಜನರ ವಿರುದ್ಧ ದೂರು ನೀಡಿದ್ದರು. ಇದೀಗ ಆ ದೂರು ವಾಪಸ್ ತಗೆದುಕೊಳ್ಳಲು ಇನ್ಸ್ಪೆಕ್ಟರ್ ಸಾತೇನಹಳ್ಳಿ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೀನು ಕೇಸ್ ತೆಗೆದುಕೊಳ್ಳದೆ ಹೋದ್ರೆ ರೌಡಿಶೀಟರ್ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಜೀವ ಭಯ ಇದೆ ಎಂದು ಹರೀಶ್ ಪೂಜಾರಿ ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿಯ ಕೋಟೆಲಿಂಗೇಶ್ವರ ನಗರದಲ್ಲಿ 28 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ನಿಖಿಲ್ ಆತ್ಮಹತ್ಯೆಗೆ ಪೊಲೀಸರ ಹಾಗೂ ಪತ್ನಿ ಕಿರುಕುಳ ಕಾರಣ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ ಹಾಗೂ ASI ಜಯಶ್ರೀ ಚಲವಾದಿ ವಿರುದ್ದ ಈ ಆರೋಪ ಕೇಳಿ ಬಂದಿದ್ದು, ಗಂಡ ಹೆಂಡತಿಯ ಜಗಳ ರಾಜೀ ಸಂಧಾನಕ್ಕೆ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ನೊಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದಾಗ ಪೊಲೀಸರು, ಇನ್ಸಪೆಕ್ಟರ್ ಸಾತೇನಹಳ್ಳಿ, ASI ಜಯಶ್ರೀ ಚಲವಾದಿ, ನಿಖಿಲ್ ಪತ್ನಿ ಸೇರಿ ಎಂಟು ಜನರ ವಿರುದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?
ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!
‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’