Saturday, April 5, 2025

Latest Posts

ಜನಪೀಡಕ ದರ ಬೀಜಾಸುರ ಸರಕಾರದಿಂದ ರಾಜ್ಯದ ಜನತೆಗೆ ಇನ್ನೊಂದು ಶಾಕ್!: ಕೇಂದ್ರ ಸಚಿವ ಕುಮಾರಸ್ವಾಮಿ

- Advertisement -

Political News: ರಾಜ್ಯದಲ್ಲಿ ಡಿಸೇಲ್ ದರ ಹೆಚ್ಚಿಸಿದ್ದು ಇಂದಿನಿಂದಲೇ ದರ ಹೆಚ್ಚಳವಾಗಿದೆ. ನಿನ್ನೆಯಷ್ಟೇ ಹಾಲಿನ ದರ ಏರಿಸಿದ್ದ ಸರ್ಕಾರ, ಇದೀಗ ಡಿಸೇಲ್ ದರ ಏರಿಸಿ, ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಕೆಲ ದಿನಗಳ ಹಿಂದೆ ಮೆಟ್ರೋ ದರವೂ ಏರಿತ್ತು. ಇನ್ನು ದಿನಸಿಯ ರೇಟ್‌ ಕೂಡ ಸದ್ದಿಲ್ಲದಂತೆ ಹೆಚ್ಚಾಗುತ್ತಿದೆ.

ಸಿದ್ದರಾಮಯ್ಯ ಸರ್ಕಾರದವರು ಫ್ರೀ ಬಸ್, 2 ಸಾವಿರ ಗೃಹಲಕ್ಷ್ಮೀ ಹಣ ಕೊಟ್ಟು 5 ಸಾವಿರ ವಾಪಸ್ ಪಡೆಯುತ್ತಿದ್ದಾರೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ಜೊತೆ ಡಿಸೇಲ್ ದರ ಏರಿಕೆಯಾಗಿದ್ದಕ್ಕೆ ಕೇಂದ್ರ ಸಚಿ ಕುಮಾರಸ್ವಾಮಿ, ಬಿಜೆಪಿ ಉಚ್ಛಾಟಿತ ನಾಯಕ ಯತ್ನಾಳ್ ಸೇರಿ, ಬಿಜೆಪಿಯ ಹಲವರು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ರೀತಿ ಟ್ವೀಟಿಸಿದ್ದಾರೆ..

ಡೀಸೆಲ್ ದರ ಲೀಟರಿಗೆ ₹2 ಏರಿಕೆ!! ಜನಪೀಡಕ ದರ ಬೀಜಾಸುರ ಸರಕಾರದಿಂದ ರಾಜ್ಯದ ಜನತೆಗೆ ಇನ್ನೊಂದು ಶಾಕ್!! ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ₹5 ಏರಿಕೆ ಭಾಗ್ಯ ಕೊಟ್ಟ ರಾಜ್ಯ ಕಾಂಗ್ರೆಸ್ ಸರಕಾರ!! ಯುಗಾದಿ ಹೊಸ ತೊಡಕು ದಿನವೇ ಹೊಸ ಹೊಸ ದರ ವಿಧಿಸಿ ದರ ಬೀಜಾಸುರ ಸರಕಾರ ವಿಜೃಂಭಿಸಿದೆ. ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ! ಕೈ ಕಂಪನಿ ಸರಕಾರಕ್ಕೆ ಕಣ್ಣಿಲ್ಲ, ಕರುಣೆಯೂ ಇಲ್ಲ. ಕಿತ್ತು ತಿನ್ನುವ ವಿಕೃತಿಯನ್ನು ಹತ್ತಿಕ್ಕಲು ಜನರು ಬೀದಿಗಿಳಿದು ದಂಗೆ ಎಳದೇ ವಿಧಿ ಇಲ್ಲ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಟ್ವೀಟ್ ಇಂತಿದೆ

ಬೆಂಗಳೂರಿನ ದಿನನಿತ್ಯದ ಜೀವನ ಬಲು ದುಬಾರಿಯಾಗಿದೆ. ಸ್ಟ್ಯಾಂಪ್ ಡ್ಯೂಟಿ 200-500% ಏರಿಕೆ, ಮೆಟ್ರೋ ಟಿಕೆಟ್ ದರ ಏರಿಕೆ, ಅಗತ್ಯ ವಸ್ತುಗಳು ಎಂದಿಗಿಂತಲೂ ಅತಿ ಹೆಚ್ಚು ದುಬಾರಿಯಾಗಿದೆ. ಹೆಚ್ಚಿನ ತೆರಿಗೆಗಳು, ಕಾಲೇಜು ಶುಲ್ಕ, ಇವಿ ಸುಂಕ ಮತ್ತು ಇದೀಗ ಕಸದ ಸೆಸ್. ಶ್ರೀ ಸಾಮಾನ್ಯನ ಸಂಕಷ್ಟ ಹೇಳ ತೀರದಾಗಿದೆ.

ಮಾಜಿ ಶಾಸಕ ಪ್ರೀತಂ ಗೌಡ ಅವರ ಟ್ವೀಟ್ ಹೀಗಿದೆ

ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆಯ ಮೂಲಕ ಯುಗಾದಿಗೆ ಉಡುಗೊರೆ ನೀಡಿದೆ! ದಿನಬೆಳಗಾದರೆ ಬೆಲೆ ಏರಿಕೆಯದ್ದೇ ಸದ್ದು. ಹಾಲು, ಮೊದರು, ವಿದ್ಯುತ್‌, ನೀರು ಸೇರಿದಂತೆ ಎಲ್ಲಾ ರೀತಿಯ ದಿನಬಳಕೆಯ ವಸ್ತು, ಸೇವೆಗಳ ದರಗಳನ್ನು ಏರಿಸಿರುವ ಕಾಂಗ್ರೆಸ್‌ ಸರ್ಕಾರ ಒಂದು ಕೈಲಿ ಕೊಟ್ಟು, ಇನ್ನೊಂದು ಕೈಲಿ ದರೋಡೆ ಮಾಡುತ್ತಿದೆ. ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿರುವ ಕಾಂಗ್ರೆಸ್‌ ಇದೀಗ ದಿನನಿತ್ಯದ ಖರ್ಚುವೆಚ್ಚಗಳನ್ನು ತೂಗಿಸಿಕೊಳ್ಳಲು ರಾಜ್ಯದ ಜನತೆಯ ಜೇಬನ್ನು ಲೂಟಿ ಮಾಡುತ್ತಿದೆ.

ಬಿಜೆಪಿ ಉಚ್ಛಾಟಿತ ನಾಯಕ ಯತ್ನಾಳ್ ಟ್ವೀಟ್ ಹೀಗಿದೆ.

ಡೀಸೆಲ್ ಮೇಲಿನ ಸೇಲ್ಸ್ ಟಾಕ್ಸ್ ಅನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರ ಬಡವರಿಗೆ, ಮಧ್ಯಮ ವರ್ಗದವರಿಗೆ ಹೊರೆ ಹೊರೆಸಿದೆ. ತನ್ನೆಲ್ಲಾ ಆರ್ಥಿಕ ಸಂಪನ್ಮೂಲಗಳನ್ನು ಗ್ಯಾರಂಟಿ ಯೋಜನೆಗಳಿಗೆ ಧಾರೆ ಎರೆದು, ಬೊಕ್ಕಸವನ್ನು ಖಾಲಿ ಮಾಡಿಕೊಂಡಿರುವ ಸರ್ಕಾರ ಈಗ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಅನ್ಯಾಯವೆಸಗಿದೆ.

- Advertisement -

Latest Posts

Don't Miss