Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಂಗೀತಾ ಅಂತಲೇ ಹೆಸರು ಯಾಕೆ ಇಟ್ಟಿದ್ದು..? ಅನ್ನೋ ಬಗ್ಗೆ ವಿವರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಸಂಗೀತಾದಲ್ಲಿ ಕೆಲಸ ಮಾಡುವವರೇ ಸುಭಾಷ್ ಅವರಿಗೆ ಕಂಪನಿ ಹೆಸರಿನ ಬಗ್ಗೆ ಸಲಹೆ ನೀಡಿದ್ದರಂತೆ. ನೀವು ಟೆಕ್ ಬ್ಯುಸಿನೆಸ್ ಮಾಡಿ, ಹೀಗೆ ಹೆಸರಿಟ್ಟಿದ್ದೀರಿ. ಇಂದಿನ ಪೀಳಿಗೆಯವರನ್ನು ಸೆಳೆಯಲು ಈ ರೀತಿ ಪಾರಂಪರಿಕ ಪದ್ಧತಿ ಎಲ್ಲಾ ವರ್ಕೌಟ್ ಆಗಲ್ಲಾ. ಹೆಸರು ಚೇಂಜ್ ಮಾಡೋಣ ಸರ್ ಎಂದಿದ್ದರಂತೆ.
ಆದರೆ ಸುಭಾಷ್ ಅವರು ಯಾವುದೇ ಕಾರಣಕ್ಕೂ ಸಂಗೀತಾ ಎನ್ನುವ ಹೆಸರು ಚೇಂಜ್ ಮಾಡಲು ಓಕೆ ಎನ್ನಲೇ ಇಲ್ಲವಂತೆ. ನಾವು ಕೆಲವು ಬಾರಿ ಕೆಲವು ವಸ್ತುಗಳನ್ನು, ಕೆಲವು ಸಂಬಂಧಗಳನ್ನು, ಕೆಲವು ಹೆಸರುಗಳನ್ನು ಚೇಂಜ್ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸುಭಾಷ್ ಚಂದ್ರ.




