Political News: ಬೀದಿ ಬದಿ ಕಾರ್ ನಿಲ್ಲಿಸಿ ಬಂಗಾಳದ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ ಪ್ರಧಾನಿ ಮೋದಿ

Political News: ಪಶ್ಮಿಮ ಬಂಗಾಳಕ್ಕೆ ಭೇಟಿ ನೀಡಿ, ಪ್ರಚಾರ ಕಾರ್ಯ ಆರಂಭಿಸಿದ್ದ ಮೋದಿ, ಮಧ್ಯ ಸಣ್ಣ ಬ್ರೇಕ್ ಪಡೆದು, ಅಲ್ಲಿನ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ್ದಾರೆ. ನಮ್ಮ ಕಡೆ ನಾವು ತಿನ್ನೋ ಬೇಲ್ಪುರಿ, ಚರ್ಮುರಿಯನ್ನೇ ಅಲ್ಲಿ ಝಾಲ್ಮುರಿ ಎಂದು ಕರೆಯಲಾಗುತ್ತದೆ.

ಈ ಝಾಲ್ಮುರಿ ಸೇವಿಸಲು ಮೋದಿ, ಕಾರ್ ಇಳಿದು, ಬೀದಿಯಲ್ಲಿ ಅಂಗಡಿ ಇರಿಸಿದ್ದ ಓರ್ವ ಯುವಕನ ಬಳಿ ಬಂದು, ಹೇಗೆ ನಿನ್ನ ಝಾಲ್ಮುರಿ ಬೆಲೆ ಕೇಳಿದ್ದಾರೆ. ಅದಕ್ಕೆ ಯುವಕ 10, 20 ರೂಪಾಯಿಯದ್ದು ಇದೆ ಎಂದದಿದ್ದಾನೆ. ಅದಕ್ಕೆ ಮೋದಿ, ಹಾಗಾದ್ರೆ 1 ರೆಡಿ ಮಾಡು ಎಂದಿದ್ದಾರೆ.

ಮೋದಿ ಹಣ ನೀಡಲು ಬಂದಾಗ, ನೀವು ನಮ್ಮ ಅಂಗಡಿಗೆ ಬಂದಿದ್ದೇ ಹೆಚ್ಚು, ಹಣವೆಲ್ಲ ಬೇಡವೆಂದು ನಿರಾಕರಿಸಿದ್ದಾನೆ. ಆದರೂ ಮೋದಿ, ಹಾಗೆಲ್ಲ ಮಾಡಬೇಡ ಎಂದು ಹಣ ನೀಡಿದ್ದಾರೆ. ಬಳಿಕ ಯುವಕ ಈರುಳ್ಳಿ ತಿಂತೀರಲ್ಲಾ ಅಂತಾ ಕೇಳಿದ್ದಾನೆ. ಅದಕ್ಕೆ ಮೋದಿ, ಹಾ ಈರುಳ್ಳಿ ತಿನ್ನುತ್ತೇನೆ. ತಲೆ ತಿನ್ನುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮೋದಿಯವರ ಹಾಸ್ಯ ಚಟಾಕಿಗೆ ಅಲ್ಲಿದ್ದ ಎಲ್ಲರೂ ನಕ್ಕರು.

ಇನ್ನು ಮೋದಿ ಝಾಲ್ಮುರಿ ಸವಿದಿದ್ದಲ್ಲದೇ, ಅಲ್ಲಿ ಇದ್ದ ಚಿಕ್ಕ ಚಿಕ್ಕ ಮಕ್ಕಳ ಜತೆ ಝಾಲ್ಮುರಿಯನ್ನು ಶೇರ್ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಶೇರ್ ಮಾಡಿರುವ ಮೋದಿ, ಝಾಲ್ಮುರಿ ಬ್ರೇಕ್ ಇನ್ ಝರ್‌ಗ್ರಾಮ್ ಎಂಬ ಟೈಟಲ್ ನೀಡಿದ್ದಾರೆ.

About The Author