Political News: ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದರೆಂಬ ಕಾರಣಕ್ಕೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಟಿ. ನರಸೀಪುರದಲ್ಲಿ ಪೊಲೀಸ್ ಅಧಿಕಾರಿಯ ವರ್ತನೆಯ ಹಿನ್ನೆಲೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ನೋಡಿದರೆ, ಪರೋಕ್ಷವಾಗಿ ಸರ್ಕಾರವೇ ಪ್ರಚೋದನೆ ನೀಡಿದಂತಿದೆ. ಇದರ ಪರಿಣಾಮವಾಗಿ, ಸಂಘಟಿಸಲಾಗಿದ್ದ ಗಣಪತಿ ವಿಸರ್ಜನಾ ಶೋಭಾಯಾತ್ರೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ, ಶಾಂತಿಗೆ ಭಂಗ ಬಾರದ ರೀತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಆದರೆ ಗಾಯದ ಮೇಲೆ ಬರೆ ಎಳೆದಂತೆ, ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರ ಮೇಲೆ FIR ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣಕ್ಕೆ ಕೈ ಹಾಕಿದೆ. ಇದು ಸಮಾಜದ ಶಾಂತಿ ಹಾಗೂ ಸ್ವಾಸ್ಥ್ಯವನ್ನು ಕಾಪಾಡುವ ಕ್ರಮವಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರನ್ನು ಮತ್ತಷ್ಟು ಪ್ರಚೋದಿಸುವ ಅವಿವೇಕಿ ಕ್ರಮವಾಗಿದೆ. ಕೂಡಲೇ ಪ್ರತಾಪ್ ಸಿಂಹ ಅವರ ಮೇಲೆ ದಾಖಲಿಸಿರುವ FIR ಅನ್ನು ರದ್ದುಗೊಳಿಸಿ ಸರ್ಕಾರ ವಿವೇಕ ಮೆರೆಯಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ವಿರೋಧಿ ಭಾವನೆ ಅವಿಭಾಜ್ಯ ಅಂಗವಾಗಿದೆ!
ಇತ್ತೀಚೆಗೆ ಟಿ. ನರಸೀಪುರದಲ್ಲಿ ಪೊಲೀಸ್ ಅಧಿಕಾರಿಯ ವರ್ತನೆಯ ಹಿನ್ನೆಲೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ನೋಡಿದರೆ, ಪರೋಕ್ಷವಾಗಿ ಸರ್ಕಾರವೇ ಪ್ರಚೋದನೆ ನೀಡಿದಂತಿದೆ.
ಇದರ ಪರಿಣಾಮವಾಗಿ, ಸಂಘಟಿಸಲಾಗಿದ್ದ ಗಣಪತಿ ವಿಸರ್ಜನಾ ಶೋಭಾಯಾತ್ರೆ ಯಾವುದೇ ಅಹಿತಕರ ಘಟನೆಗೆ… pic.twitter.com/4apwRviAaQ
— Vijayendra Yediyurappa (@BYVijayendra) September 20, 2026




