Political News: ಬಿ.ಕೆ.ಹರಿಪ್ರಸಾದ್ ಅವರು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರ ವಿರುದ್ದ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬೆರಿದರುವ ಅವರು, ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಓಲೈಕೆ ನಡೆಸುವ ಅನಿವಾರ್ಯತೆ ಇರಬಹುದು ಮಿಸ್ಟರ್ ಹರಿಪ್ರಸಾದ್. ಆದರೆ, ಪ್ರಧಾನಿ ನರೇಂದ್ರ ಮೋದಿಜಿ ಸಮಸ್ತ ಭಾರತದ ಪ್ರಧಾನಿ ಎಂದಿದ್ದಾರೆ.
ಮುಸ್ಲಿಂ ಮಹಿಳೆಯರ ಮೇಲಿನ ತ್ರಿವಳಿ ತಲಾಕ್ ದೌರ್ಜನ್ಯವನ್ನು ಮನಗಂಡು, ಮುಸ್ಲಿಂ ಮಹಿಳೆಯರ ಬಲವರ್ಧನೆಗಾಗಿ ತ್ರಿವಳಿ ತಲಾಕ್ ನಿಷೇಧಿಸಿದರೆ, ಅದನ್ನು ಸ್ವಾಗತಿಸುವ ಯೋಗ್ಯತೆಯೂ ಅಂತಹದ್ದೇ ಶೋಷಕ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕಿಲ್ಲ. ಪ್ರಧಾನಿ ಮೋದಿಯವರಿಗೆ ಏಕವಚನ ಪ್ರಯೋಗಿಸುವ ಹರಿಪ್ರಸಾದ್ ಅವರನ್ನು ನಾವೂ ಏಕವಚನದಲ್ಲೇ ಮಾತನಾಡಿಸಿದರೆ ಹೇಗಿರುತ್ತದೆ? ದೇಶದ ಪ್ರಧಾನಿಗೇ ಗೌರವ ನೀಡದ ವ್ಯಕ್ತಿಯೊಬ್ಬ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದಾಗ, ರಾಜ್ಯ ಕಾಂಗ್ರೆಸಿಗರು ಗೂಂಡಾಗಳಂತೆ ವರ್ತಿಸುವುದರಲ್ಲಿ ಆಶ್ಚರ್ಯವೇನಿಲ್ಲ! ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇರುತ್ತದೆ ಎನ್ನುವ ನ್ಯೂಟನ್ನನ ನಿಯಮ ನೆನಪಿರಲಿ ಹರಿಪ್ರಸಾದ್! ನಿಮ್ಮ ಕೀಳು ಮಟ್ಟದ ನಾಲಿಗೆಗೆ ನಾವೂ ಅದೇ ರೀತಿ ಉತ್ತರಿಸುತ್ತಾ, ಕಾಂಗ್ರೆಸ್ ಹಳವಂಡಗಳನ್ನು ಬಯಲು ಮಾಡತೊಡಗಿದರೆ, ನಿಮಗೆ ಎದುರಿಸಲು ತಾಕತ್ತೇ ಇರುವುದಿಲ್ಲ! ಎಂದು ರವಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ @INCIndia ಪಕ್ಷಕ್ಕೆ ಮುಸ್ಲಿಂ ಓಲೈಕೆ ನಡೆಸುವ ಅನಿವಾರ್ಯತೆ ಇರಬಹುದು ಮಿಸ್ಟರ್ ಹರಿಪ್ರಸಾದ್. ಆದರೆ, @narendramodi ಜಿ ಸಮಸ್ತ ಭಾರತದ ಪ್ರಧಾನಿ.
ಮುಸ್ಲಿಂ ಮಹಿಳೆಯರ ಮೇಲಿನ ತ್ರಿವಳಿ ತಲಾಕ್ ದೌರ್ಜನ್ಯವನ್ನು ಮನಗಂಡು, ಮುಸ್ಲಿಂ ಮಹಿಳೆಯರ ಬಲವರ್ಧನೆಗಾಗಿ ತ್ರಿವಳಿ ತಲಾಕ್ ನಿಷೇಧಿಸಿದರೆ, ಅದನ್ನು ಸ್ವಾಗತಿಸುವ ಯೋಗ್ಯತೆಯೂ… pic.twitter.com/Fhd9XXoTSz
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) September 20, 2026




