ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ (Controller General of Accounts) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 590 ಸಹಾಯಕ ಖಾತೆ ಅಧಿಕಾರಿ(Assistant Accounts Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ ಬಿಡುಗಡೆಯಾದ 45 ದಿನಗಳೊಳಗೆ cga.nic.in ಗೆ ಭೇಟಿ ನೀಡಿ ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ನೇಮಕಾತಿ ಅಧಿಸೂಚನೆಯನ್ನು 22.01.2022 ರಿಂದ 28.01.2022 ರವರೆಗೆ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು CGAಯಲ್ಲಿ ಕೆಲಸಕ್ಕೆ ಸೇರಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ : ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್
ಜಾಹೀರಾತು ಸಂಖ್ಯೆ : A-65061(55)/ 38/ 2021- Group B-CGA/ 359
ಹುದ್ದೆಯ ಹೆಸರು : ಸಹಾಯಕ ಖಾತೆ ಅಧಿಕಾರಿ
ಒಟ್ಟು ಹುದ್ದೆಗಳು : 590
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ : 7ನೇ ವೇತನ ಆಯೋಗದ 8/9ನೇ ಲೆವೆಲ್
ನೇಮಕಾತಿ ಅಧಿಸೂಚನೆ ಬಿಡುಗಡೆ ದಿನಾಂಕ : 22.01.2022 ರಿಂದ 28.01.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 45 ದಿನದೊಳಗೆ
ಅಧಿಕೃತ ವೆಬ್ಸೈಟ್ : cga.nic.in
ವಿದ್ಯಾರ್ಹತೆ: ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಿವಿಲ್/SAS ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ : ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 7ನೇ ವೇತನ ಆಯೋಗದ 8/9ನೇ ಲೆವೆಲ್ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಪೋಸ್ಟ್/ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಇ-ಮೇಲ್ ಐಡಿ: groupbsec-cga@gov.in.
ವಿಳಾಸ: ಸೀನಿಯರ್ ಅಕೌಂಟ್ಸ್ ಆಫೀಸರ್ (HR-3)
O/o ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್
ಎಕ್ಸ್ಪೆಂಡಿಚರ್ ಡಿಪಾರ್ಟ್ಮೆಂಟ್
ಹಣಕಾಸು ಸಚಿವಾಲಯ
ಕೊಠಡಿ ಸಂಖ್ಯೆ. 210, 2 ನೇ ಮಹಡಿ
ಮಹಾಲೇಖಾ ನಿಯಂತ್ರಕ್ ಭವನ, ಬ್ಲಾಕ್ E
GPO ಕಾಂಪ್ಲೆಕ್ಸ್, INA
ದೆಹಲಿ – 110023.