ಈಸ್ಟ್ ಕೋಸ್ಟ್ ರೈಲ್ವೆ 2021: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಫಾರ್ಮಾಸಿಸ್ಟ್, ಹಾಸ್ಪಿಟಲ್ ಅಟೆಂಡೆಂಟ್, ಹೌಸ್ ಕೀಪಿಂಗ್ ಅಸಿಸ್ಟೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ 12ನೇ ತರಗತಿ, ಬಿ.ಫಾರ್ಮಾ, ಜಿಎನ್ಎಂ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ eastcoastrail.indianrailways.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ,
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2021
ನರ್ಸಿಂಗ್ ಸೂಪರಿಂಟೆಂಡೆಂಟ್- 04
ಫಾರ್ಮಾಸಿಸ್ಟ್- 02
ಹಾಸ್ಪಿಟಲ್ ಅಟೆಂಡೆಂಟ್- 04
ಹೌಸ್ ಕೀಪಿಂಗ್ ಅಸಿಸ್ಟೆಂಟ್-04
ಒಟ್ಟು 14 ಹುದ್ದೆಗಳು
ನರ್ಸಿಂಗ್ ಸೂಪರಿಂಟೆಂಡೆಂಟ್- ಬಿಎಸ್ಸಿ ನರ್ಸಿಂಗ್
ಫಾರ್ಮಾಸಿಸ್ಟ್- 12ನೇ ತರಗತಿ
ಹಾಸ್ಪಿಟಲ್ ಅಟೆಂಡೆಂಟ್- 10 ನೇ ತರಗತಿ
ಹೌಸ್ ಕೀಪಿಂಗ್ ಅಸಿಸ್ಟೆಂಟ್-10 ನೇ ತರಗತಿ
ನರ್ಸಿಂಗ್ ಸೂಪರಿಂಟೆಂಡೆಂಟ್- 20-40 ವರ್ಷ
ಫಾರ್ಮಾಸಿಸ್ಟ್- 20-35 ವರ್ಷ
ಹಾಸ್ಪಿಟಲ್ ಅಟೆಂಡೆಂಟ್- 18-33 ವರ್ಷ
ಹೌಸ್ ಕೀಪಿಂಗ್ ಅಸಿಸ್ಟೆಂಟ್-18-33 ವರ್ಷ
ಫಾರ್ಮಾಸಿಸ್ಟ್, ಹಾಸ್ಪಿಟಲ್ ಅಟೆಂಡೆಂಟ್, ಹೌಸ್ ಕೀಪಿಂಗ್ ಅಸಿಸ್ಟೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಡಿಶಾದ ಭುವನೇಶ್ವರದಲ್ಲಿ ಉದ್ಯೋಗ ನೀಡಲಾಗುತ್ತದೆ.
ಫಾರ್ಮಾಸಿಸ್ಟ್, ಹಾಸ್ಪಿಟಲ್ ಅಟೆಂಡೆಂಟ್, ಹೌಸ್ ಕೀಪಿಂಗ್ ಅಸಿಸ್ಟೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 18,000-44,900 ವೇತನ ನೀಡಲಾಗುತ್ತದೆ.




