Saturday, July 5, 2025

Latest Posts

Southwest Railway- Bangalore ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

ನೈರುತ್ಯ ರೈಲ್ವೆ- ಬೆಂಗಳೂರು(SWR Recruitment- Bengaluru) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 18 ಡಾಕ್ಟರ್ಸ್​, ಸ್ಟಾಫ್​ ನರ್ಸ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 5ರಂದು ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ swr.indianrailways.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ

ಹುದ್ದೆಯ ಮಾಹಿತಿ:
ಡಾಕ್ಟರ್ಸ್​(ಪಿಜಿಸಿಯನ್)- 1
ಡಾಕ್ಟರ್ಸ್​(GDMO)-6
ಸ್ಟಾಫ್ ನರ್ಸ್​-8
ಲ್ಯಾಬ್​ ಟೆಕ್ನಿಷಿಯನ್-2
ಫಾರ್ಮಾಸಿಸ್ಟ್​-1


ವಿದ್ಯಾರ್ಹತೆ:
ಡಾಕ್ಟರ್ಸ್​(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್
ಡಾಕ್ಟರ್ಸ್​(GDMO)-ಎಂಬಿಬಿಎಸ್
ಸ್ಟಾಫ್ ನರ್ಸ್​-ಬಿಎಸ್ಸಿ ನರ್ಸಿಂಗ್
ಲ್ಯಾಬ್​ ಟೆಕ್ನಿಷಿಯನ್-ಪಿಯುಸಿ, DMLT
ಫಾರ್ಮಾಸಿಸ್ಟ್​-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ

ಅನುಭವ:
ಲ್ಯಾಬ್​ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್​ ಅಸಿಸ್ಟೆಂಟ್/ ಲ್ಯಾಬ್​ ಟೆಕ್ನಿಷಿಯನ್​ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು.

ವಯೋಮಿತಿ:
ಡಾಕ್ಟರ್ಸ್​(ಪಿಜಿಸಿಯನ್)- 50 ವರ್ಷ
ಡಾಕ್ಟರ್ಸ್​(GDMO)-50-65 ವರ್ಷ
ಸ್ಟಾಫ್ ನರ್ಸ್​-20-40 ವರ್ಷ
ಲ್ಯಾಬ್​ ಟೆಕ್ನಿಷಿಯನ್- 19-33 ವರ್ಷ
ಫಾರ್ಮಾಸಿಸ್ಟ್​- 20-40 ವರ್ಷ

ವೇತನ:
ಡಾಕ್ಟರ್ಸ್​(ಪಿಜಿಸಿಯನ್)- ಮಾಸಿಕ ₹ 95,000
ಡಾಕ್ಟರ್ಸ್​(GDMO)- ಮಾಸಿಕ ₹46,000-75,000
ಸ್ಟಾಫ್ ನರ್ಸ್​- ಮಾಸಿಕ ₹ 44,900
ಲ್ಯಾಬ್​ ಟೆಕ್ನಿಷಿಯನ್-ಮಾಸಿಕ ₹ 29,200
ಫಾರ್ಮಾಸಿಸ್ಟ್​-ಮಾಸಿಕ ₹ 29,200

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/01/2022
ಸಂದರ್ಶನ ನಡೆಯುವ ದಿನಾಂಕ: 05/02/2022

ಸಂದರ್ಶನ ನಡೆಯುವ ಸ್ಥಳ:
ಮುಖ್ಯ ವೈದ್ಯಕೀಯ ಅಧೀಕ್ಷಕರು
ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ
ಓಕಳಿಪುರಂ
ಬೆಂಗಳೂರು – 560021

- Advertisement -

Latest Posts

Don't Miss