Thursday, December 12, 2024

Latest Posts

2022ಕ್ಕೆ ಅಪ್ಪು ಕನಸಿನ ಗಂಧದಗುಡಿ..!

- Advertisement -

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಕನಸು ವೈಲ್ಡ್ ಲೈಫ್ ಕುರಿತು ಮಾಡಿದಂತಹ ಚಿತ್ರದ ಶೀರ್ಷಿಕೆಯ ಟೀಸರ್ ನವೆಂಬರ್ 1ರಂದೆ ತೆರೆಕಾಣಬೇಕಿತ್ತು ಆದರೆ ಅಪ್ಪು ಅವರ ಹಠಾತ್ ಹಗಲಿಕೆ ಇಂದಾಗಿ ಅದನ್ನು ಮುಂದೂಡಲಾಗಿತ್ತು.ಇದೀಗ ಪಿ, ಆರ್, ಕೆ ಯೂಟ್ಯೂಬ್ ಚಾನಲ್ ನಲ್ಲಿ ಇಂದು ಚಿತ್ರದ ಶೀರ್ಷಿಕೆ ಅನಾವರಣ ಗೊಂಡಿದ್ದು ಗಂಧದಗುಡಿ ಎಂಬ ಶೀರ್ಷಿಕೆ ಇಡಲಾಗಿದೆ.

ಗಂಧದಗುಡಿ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ನಟಿಸಿದ್ದಂತಹ ಸಿನಿಮಾ,1973ರಲ್ಲಿ ತೆರೆ ಕಂಡಿತ್ತು. ಗಂಧದಗುಡಿ ಮುಖ್ಯವಾಗಿ ಅರಣ್ಯವನ್ನು ಸಂರಕ್ಷಿಸುವ ಕುರಿತು ಮಾಡಿದಂತಹ ಚಿತ್ರವಾಗಿತ್ತು. ಇನ್ನೂ ಶಿವರಾಜ್ ಕುಮಾರ್ ಅವರು ಗಂಧದಗುಡಿ -2 ರಲ್ಲಿ ಅಭಿನಯಿಸಿದ್ದರು, ಈ ಚಿತ್ರವು 1994ರಲ್ಲಿ ತೆರೆಕಂಡಿತ್ತು.

ಪುನೀತ್ ಅವರ ಕನಸು ವೈಲ್ಡ್ ಲೈಫ್ ಕುರಿತು ಮಾಡಿದಂತಹ ಸಿನಿಮಾದ ಟೈಟಲ್ ‘ ಗಂಧದಗುಡಿ ‘ ಎಂದೆ ಇಡಲಾಗಿದೆ.ನೈಜ ಘಟನೆಯ ಆದರದ ಮೇಲೆ ಮಾಡಿರುವ ಈ ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ಸೊಬಗು, ವನ್ಯ ಜೀವಿಗಳು, ಕಾಡಿನ ಜನರು ಅಲ್ಲಿ ನಡೆಯುವಂತಹ ಕೆಲ ಗಂಭೀರ ವಿಚಾರಗಳನ್ನೂ ಮತ್ತು ಅಭಯಾರಣ್ಯ , ಪ್ರಾಣಿಗಳನ್ನು ಉಳಿಸುವಂತ ಸಂದೇಶವನ್ನು ನೀಡಲಿದ್ದಾರೆ ಎಂಬ ಮಾಹಿತಿಗಳು ದೊರಕಿವೆ.

ಇನ್ನೂ ಈ ಚಿತ್ರಕ್ಕೆ ಪುನೀತ್ ಅವರೊಂದಿಗೆ ಖ್ಯಾತ ವೈಲ್ಡ್ ಛಾಯಾಗ್ರಾಹಕ ಅಮೋಘವರ್ಷ ಅವರು ಕೈ ಜೋಡಿಸಿ ಅವರೇ ನಿರ್ದೇಶಿಸಿದ್ದಾರೆ, ನಮ್ಮ ಕರ್ನಾಟಕದ ವನ್ಯ ಸೊಬಗನ್ನು ಅದ್ಬುತವಾಗಿ ತೋರಿಸಿದ್ದಾರೆ. ಹಾಗೂ ಈ ಚಿತ್ರಕ್ಕೆ ಮುಡ್ ಸ್ಕಿಪ್ಪರ್ ಅವರು ಜೊತೆ ಯಾಗಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಪ್ರತೀಕ್ ಶೆಟ್ಟಿ ಕ್ಯಾಮೆರಾ ಕೆಲಸವನ್ನು ನಿರ್ವಹಿಸಿದ್ದಾರೆ.

ಈ ಸಿನಿಮಾದಲ್ಲಿ ಪ್ರಕೃತಿ ಸೊಬಗನ್ನು ತೋರಿಸುವುದರ ಜೊತೆಗೆ ಸ್ವತಃ ಪುನೀತ್ ಅವರೇ ನಟಿಸಿದ್ದಾರೆ. ಅಮೋಘವರ್ಷ ಜೊತೆಗೆ ಸಂಪೂರ್ಣ ಅರಣ್ಯವನ್ನು ಸುತ್ತಿದ್ದಾರೆ ಪುನೀತ್. ಹಾಗೆಯೇ ಸ್ಕೂಬಾ ಡೈವ್, ಟ್ರಕ್ಕಿಂಗ್ ಗಳನ್ನು ಮಾಡಿದ್ದಾರೆ.
ಪುನೀತ್ ಅವರ ಬಹುದೊಡ್ಡ ಕನಸಾಗಿರುವ ಈ ಗಂಧದಗುಡಿ ಶೀರ್ಷಿಕೆಯ ಟೀಸರ್ ಇಂದು ಅನಾವರಣ ಗೊಂಡಿದ್ದು. ಪುನೀತ್ ಪತ್ನಿ ಅಶ್ವಿನಿ ಯವರು ಪುನೀತ್ ಕನಸು ನನಸು ಮಾಡಲು ಮುಂದಾಗಿದ್ದಾರೆ. ಇನ್ನೂ ಸಂಪೂರ್ಣ ಚಿತ್ರ 2022ಕ್ಕೇ ತೆರೆ ಮೇಲೆ ಬರಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss