Friday, April 18, 2025

Latest Posts

Araga Jnanendra : ಕಾಲೇಜುಗಳು ನಾಳೆಯಿಂದ ಪುನರಾರಂಭ..!

- Advertisement -

ಹಿಜಬ್ ವಿವಾದದ (Hijab Controversy ) ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭುಗಿಲೆದ್ದಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಹೈಸ್ಕೂಲ್ (High School) ಹಾಗೂ ಕಾಲೇಜುಗಳಿಗೆ (colleges) ಮೂರು ದಿನಗಳ ಕಾಲ ರಜೆ ಘೋಷಿಸಿತ್ತು. ಹಿಜಾಬ್ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಹೈಕೋರ್ಟ್ ನ  ತ್ರಿಸದಸ್ಯ ಪೀಠ ಹಿಜಾಬ್ ವಿಚಾರಕ್ಕಾಗಿ ಶಾಲಾ-ಕಾಲೇಜುಗಳನ್ನು ಮುಚ್ಚುವುದು ಸೂಕ್ತವಲ್ಲ. ಬೇಗನೆ ಶಾಲಾ-ಕಾಲೇಜುಗಳನ್ನು ತೆಗೆಯುವಂತೆ ಹೈಕೋರ್ಟ್  ಸರ್ಕಾರಕ್ಕೆ ಸೂಚನೆ ನೀಡಿತ್ತು. ಮೊದಲನೇ ಹಂತದಲ್ಲಿ  ಹೈಸ್ಕೂಲ್ ತರಗತಿಗಳನ್ನು ಸೋಮವಾರದಿಂದ ಪ್ರಾರಂಭ ಮಾಡಿದ್ದರು ಈಗ ನಾಳೆಯಿಂದ ಕಾಲೇಜುಗಳನ್ನು ತೆರೆಯಲು ಮುಂದಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆಗೆ  ದಕ್ಕೆ ಬರೆದಂತೆ  ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.

- Advertisement -

Latest Posts

Don't Miss