ರಾಜಕೀಯ ಸುದ್ದಿ : ರಾಜಕೀಯದಲ್ಲಿ ಡಿಸಿಎಂ ವಿಚಾರ ಒಂದಾದ್ರೆ ಇನ್ನು ಜಾತಿ ಪರಿಗಣನೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಇನ್ನು ಪಕ್ಷದಲ್ಲಿ ಲಿಂಗಾಯತ ಧರ್ಮದ ಕಡೆಗಣನೆ ವಿಚಾರವೂ ಬಹು ಮುಖ್ಯ, ಇದರ ಬಗ್ಗೆ ಶಾಸಕರ ಮಾತು ಏನು ನೋಡೋಣ ?
ಧಾರವಾಡದಲ್ಲಿ ಲಿಂಗಾಯತ ಕಡೆಗಣನೆ ವಿಚಾರವಾಗಿ ಕೂಡ ಶಾಸಕರು ಹೇಳಿಕೆ ನೀಡಿದ್ದಾರೆ.
ಲಿಂಗಾಯತ ಕಡೆಗಣನೆ ಬಗ್ಗೆ ಶಾಮನೂರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಅರವಿಂದ್ ಬೆಲ್ಲದ್ ಇದೊಂದು ಬಹಳ ಗಂಭೀರ ವಿಷಯ, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ಅತ್ಯಂತ ಹಿರಿಯ ಮುಖಂಡರು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಅವರ ಮಗ ಮಂತ್ರಿ ಸಹ ಇದ್ದಾರೆ. ಇವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಆದವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಎಲ್ಲಾ ಸಮಾಜಕ್ಕೂ ಸರಿಯಾದ ಜವಾಬ್ದಾರಿ ಕೆಲಸ ಕೊಡುತ್ತಿಲ್ಲ, ಕೆಲವೇ ಕೆಲವು ಆಫೀಸರ್ ಗಳಿಗೆ ಉತ್ತಮವಾದ ಪೋಸ್ಟಿಂಗ್ ಕೊಡುತ್ತಿದ್ದಾರೆ, ಡಿಸಿಷನ್ ಮಾಡುವ ಪೋಸ್ಟಿಂಗ್ ಗಳನ್ನ ಕೆಲವೇ ಸಮಾಜಕ್ಕೆ ಕೊಡುತ್ತಿದ್ದಾರೆ, ವೀರಶೈವ ಲಿಂಗಾಯತ ಸಮಾಜದವರಿಗೆ ಕಡೆಗಣನೆ ಮಾಡುತ್ತಿದ್ದಾರೆ, ತಾತ್ಸಾರ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ. ಸಿಎಂ ಆದವರು ಕೇವಲ ಒಂದು ಸಮಾಜಕ್ಕೆ ಮಾತ್ರ ಅಲ್ಲ ಇಡೀ ರಾಜ್ಯದ ನಾಯಕರು.
ಹಾಗಿದ್ದಾಗ ಎಲ್ಲಾ ಸಮಾಜದ ವರ್ಗದವರನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಇರುತ್ತದೆ. ಆ ಜಾಗ ಅರಿತು ಸಿಎಂ ಕಾರ್ಯ ನಿರ್ವಹಿಸಬೇಕು ಈ ರೀತಿ ಜಾತಿ ರಾಜಕಾರಣ, ಕಲುಷಿತ ರಾಜಕಾರಣ ಮಾಡಬಾರದು. ಎಂದು ಅರವಿಂದ್ ಬೆಲ್ಲದ್ ಕಿಡಿಕಾರಿದರು.
ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ
Rail timing change; ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ