Sports News: ಕ್ರೀಡಾಪಟುಗಳಾದ ನೀರಜ್ ಛೋಪ್ರಾ ಮತ್ತು ಪಿ ವಿ ಸಿಂಧು, ಸದ್ಯಕ್ಕೆ ಫೇಮ್‌ನಲ್ಲಿರುವ ಸ್ಪೋರ್ಟ್ಸ್ ಸ್ಟಾರ್ಸ್. ಆದರೆ ಅವರು ತಮ್ಮ ಕ್ರೀಡೆಯಿಂದ ಸದ್ಯ ಸುದ್ದಿಯಾಗಿಲ್ಲ. ಬದಲಾಗಿ ತಮ್ಮ ಇನ್‌ಸ್ಟಾಗ್ರಾಮ್ ಫೋಸ್ಟ್‌ನಿಂದ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್ ನೋಡಿ, ಹಲವರು ಇವರು ಮದುವೆಯಾಗುತ್ತಿದ್ದಾರೆ ಅಂತಲೇ ಅಂದಾಜು ಮಾಡಿದ್ದಾರೆ.
ಇನ್ನು ಪೋಸ್ಟ್‌ನಲ್ಲಿ ಅಂಥದ್ದೇನಿದೆ ಅಂದ್ರೆ, ನೀರಜ್ ಮತ್ತು ಸಿಂಧು ಒಂದೇ ದಿನ ಫೋಟೋ ಶೇರ್ ಮಾಡಿದ್ದಾರೆ. ನೀರಜ್ ಬ್ಯಾಟ್ಮಿಂಟನ್ ಸೆಟ್ ಫೋಟೋ ಹಾಕಿ, ಇದರರ್ಥವೇನು ಹೇಳ್ತೀರಾ ಎಂದು ಕೇಳಿದ್ದಾರೆ. ಸಿಂಧು, ಜಾವಲಿನ್ ಥ್ರೋ ಫೋಟೋ ಹಾಕಿ, ಇದು ನನ್ನ ಬಳಿ ಹೇಗೆ ಬಂತು..? ಗೆಸ್ ಮಾಡ್ತೀರಾ..? ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ನೋಡಿ ಹಲವರು ಇಬ್ಬರು ಮದುವೆಯಾಗುತ್ತಿದ್ದಾರೆಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅತ್ತಿಗೆ ಬ್ಯಾಟ್ಮಿಂಟನ್ ಆಡುತ್ತಾರೆಂದು ಹೇಳಿದ್ದಾರೆ. ಇನ್ನು ಕೆಲವರು ಮದುವೆ ಎಲ್ಲ ಇರಲಿಕ್ಕಿಲ್ಲ, ಇಬ್ಬರೂ ಕ್ರೀಡೆಯಲ್ಲಿ ಏನೋ ಸುದ್ದಿ ಕೊಡಲಿದ್ದಾರೆಂದು ಹೇಳಿದ್ದಾರೆ. ಮತ್ತೆ ಕೆಲವರು ಇವರ ಮದುವೆ ಸುದ್ದಿ ನಿಜವಾಗಲಿ ಎಂದು ವಿಶ್ ಮಾಡಿದ್ದಾರೆ. ಒಟ್ಟಾರೆಯಾಗಿ, ಈ ಫೋಟೋದ ಅರ್ಥವೇನು ಅಂತಾ ನೀರಜ್ ಮತ್ತು ಸಿಂಧುನೇ ಉತ್ತರಿಸಬೇಕಾಗಿದೆ.
ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದ ರೋಹನ್ ಬೋಪಣ್ಣ