Hyderabad News: ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮುಸ್ಲಿಂ ನಾಯಕ ಓವೈಸಿ, ರಾಮಮಂದಿರ ಉದ್ಘಾಟನೆ ಬಗ್ಗೆ ಕಿಡಿ ಕಾರಿದ್ದಾರೆ. ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ಒಂಚೂರು ದುಃಖವಿಲ್ಲವೇ ಎಂದು ಮುಸ್ಲೀಮರಿಗೆ ಪ್ರಶ್ನಿಸಿದ್ದಾರೆ.
ಕಳೆದ 500 ವರ್ಷಗಳಿಂದ ಕುರಾನ್ ಪಠಣ ಮಾಡಿದ ಸ್ಥಳ, ಈಗ ನಮ್ಮ ಬಳಿ ಇಲ್ಲ ಎನ್ನುವ ಮೂಲಕ, ಬಾಬ್ರಿ ಮಸೀದಿ ಕೆಡವಿದ್ದರ ಬಗ್ಗೆ ಓವೈಸಿ ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಮಸೀದಿಗಳ ಬಗ್ಗೆ ಷಡ್ಯಂತ್ರ ನಡೆಸಲಾಗುತ್ತಿದೆ. ಇನ್ನು ನಾಲ್ಕೈದು ಮಸೀದಿಯನ್ನು ನಾವು ಕಾಪಾಡಿಕೊಳ್ಳಬೇಕಿದೆ. ಈ ಬಗ್ಗೆ ಇಸ್ಲಾಂ ಯುವಕರು ಗಮನ ಹರಿಸಬೇಕು. ನಾವೆಲ್ಲ ಒಗ್ಗಟ್ಟಾಗಿರಬೇಕು. ನಮ್ಮ ಮಸೀದಿಯನ್ನು ಕಾಪಾಡಿಕೊಳ್ಳಬೇಕು ಎಂದು ಓವೈಸಿ ಹೇಳಿದ್ದಾರೆ. .
ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ಈಗ ಏನು ಮಾಡಲಾಗುತ್ತಿದೆ ಅಂತಾ ನೀವೇ ನೋಡುತ್ತಿದ್ದೀರಿ. ನಾಳೆ ಮುದುಕರಾಗಲಿರುವ, ಇಂದಿನ ಯುವ ಪೀಳಿಗೆಯವರು ಹೇಗೆ ತಮ್ಮ ನೆರೆಹೊರೆಯವರನ್ನು, ತಮ್ಮ ನಗರವನ್ನು ಕಾಪಾಡಲು, ಸಹಾಯ ಮಾಡಬೇಕು ಎಂಬುದನ್ನು ನೀವು ಅರಿತುಕೊಂಡಿದ್ದೀರಿ ಎಂದು ನಾನು ಭಾವಿಸಿದ್ದೇನೆ ಎಂದು ಓವೈಸಿ ಹೇಳಿದ್ದಾರೆ.