Hassan News: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ, ಸಾಕಾನೆ ಅರ್ಜುನ ಮರಣ ಹೊಂದಿದ್ದಾನೆ. ದಸಾರ ವೇಳೆಯಲ್ಲಿ, ನಾಡ ಅಧಿದೇವತೆಯ ಅಂಬಾರಿ ಹೊತ್ತು ತಿರುಗಿದ್ದ ಅರ್ಜುನ(63) ಇನ್ನು ನೆನಪು ಮಾತ್ರ.
ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜೊತೆ ಸೆಣಸಾಡಿತ್ತು. ಈ ವೇಳೆ ಅರ್ಜುನನ ಮೇಲಿದ್ದ ಮಾವುತ ಓಡಿ ಹೋಗಿದ್ದಾನೆ. ಒಂಟಿ ಸಲಗ ಅರ್ಜುನನ ಮೇಲೆ ದಾಳಿ ಮಾಡಿದ್ದು, ಅರ್ಜುನ ಸಾವನ್ನಪ್ಪಿದ್ದಾನೆ.
ವಿಶ್ವವಿಖ್ಯಾತ ಮೈಸೂರು ದಸರಾದ ವೇಳೆ ಅರ್ಜುನ 8 ಬಾರಿ ಅಂಬಾರಿ ಹೊತ್ತಿದ್ದ. ಖೆಡ್ಡಾ ಕಾರ್ಯಾಚರಣೆ ವೇಳೆ ಪುಟ್ಟ ಅರ್ಜುನನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಬಳಿಕ ಇದು ಪಳಗಿದಾಗ, 1990ರಲ್ಲೇ ಮೈಸೂರು ದಸರಾಗೆ ಅಂಬಾರಿ ಹೊರುವ ಶಿಬಿರಕ್ಕೆ ಇವನನ್ನು ಸೇರಿಸಲಾಗಿತ್ತು. ದ್ರೋಣ, ಬಲರಾಮನಂಥ ಆನೆಗಳಿಗೆ ಅನಾರೋಗ್ಯ ಉಂಟಾದಾಗ, ಅರ್ಜುನನಿಗೆ ಅಂಬಾರಿ ಹೊರುವ ಅವಕಾಶ ಮಾಡಿಕೊಡಲಾಗಿತ್ತು.
‘ಕಾಂಗ್ರೆಸ್‌ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ’
ಆರ್‌ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಪಿಡಿಒ ಆತ್ಮಹತ್ಯೆಗೆ ಯತ್ನ ಖಂಡಿಸಿ ಪ್ರತಿಭಟನೆ
ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ