Thursday, December 26, 2024

Latest Posts

Army : 8700 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ(Army Welfare Education Society ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8700 ಶಿಕ್ಷಕ(Teacher) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ awesindia.com ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ,

ವಿದ್ಯಾರ್ಹತೆ:
ಪಿಜಿಟಿ- ಬಿ.ಎಡ್​, ಸ್ನಾತಕೋತ್ತರ ಪದವಿ
ಟಿಜಿಟಿ- ಬಿ.ಎಡ್, ಪದವಿ
ಪಿಆರ್​ಟಿ-ಡಿಪ್ಲೋಮಾ, ಬಿ.ಎಡ್, ಪದವಿ

ಅನುಭವ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 5 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು.

ವಯೋಮಿತಿ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1,2021ಕ್ಕೆ 40-57 ವರ್ಷದೊಳಗಿರಬೇಕು.

ವಯೋಮಿತಿ ಸಡಿಲಿಕೆ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, 385 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆನ್​ಲೈನ್/ಆಫ್​ಲೈನ್​​ ಮೋಡ್​​ನಲ್ಲಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಸ್ಕ್ರೀನಿಂಗ್ ಟೆಸ್ಟ್
ಟೀಚಿಂಗ್ ಸ್ಕಿಲ್ಸ್​
ಕಂಪ್ಯೂಟರ್ ಪ್ರೊಫೆಸಿಯೆನ್ಸಿ
ಸಂದರ್ಶನ

ಅರ್ಜಿ ಸಲ್ಲಿಕೆ  ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/01/2022
ಆನ್​ಲೈನ್​ನಲ್ಲಿ ಅಡ್ಮಿಟ್​ ಕಾರ್ಡ್ ಲಭ್ಯವಿರುವ ದಿನಾಂಕ: 10/02/2022
ಪರೀಕ್ಷಾ ದಿನಾಂಕ: ಫೆಬ್ರವರಿ 19 & 20
ಫಲಿತಾಂಶ ಪ್ರಕಟ ದಿನಾಂಕ: 28/02/2022


- Advertisement -

Latest Posts

Don't Miss