ದುಬೈ: ಬಹುನಿರೀಕ್ಷಿತಾ ಏಷ್ಯಾಕಪ್ ಇಂದಿನಿಂದ ಯುಎಇಯಲ್ಲಿ ಆರಂಭವಾಗಲಿದೆ.ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ಥಾನ ತಂಡವನ್ನು ಎದುರಿಸಲಿದೆ. ಈ ಟೂರ್ನಿ ಮುಂಬರುವ ಟಿ20 ವಿಶ್ವಕಪ್‍ಗೆ ತಯಾರಿಯಾಗಿದೆ.
ಕಳೆದ ಆರು ವರ್ಷಗಳಿಂದ ಏಷ್ಯಾಕಪ್ ಟೂರ್ನಿಯನ್ನು ಟಿ20 ಆವೃತ್ತಿಯಲ್ಲಿ ಆಡಿಸಲಾಗುತ್ತಿದೆ. ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಅಸ್ಥಿರತೆ ನಿರ್ಮಾಣವಾಗಿದ್ದರಿಂದ ಪ್ರತಿಷ್ಠಿತ ಟೂರ್ನಿ ಯುಎಇಗೆ ಸ್ಥಳಾಂತರವಾಯಿತು.
ಆಕ್ರಮಣಕಾರಿ ಪ್ರದರ್ಶನ ನೀಡಲು ಭಾರತ ಸಜ್ಜು
ಏಷ್ಯಾಕಪ್ ನಡೆಯುವ ಯುಎಇ ವಾತಾವರಣಕ್ಕೂ ಮುಂದೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವಿಶ್ವ ಟಿ20 ಟೂರ್ನಿಗೆ ತಂಡವನ್ನು ತಯಾರು ಮಾಡಲು ಏಷ್ಯಾಕಪ್ ಪ್ರದರ್ಶನವನ್ನು ಗಮನದಲ್ಲಿಟ್ಟು ಅಂತಿಮ ಹನ್ನೊಂದರ ಬಳಗವನ್ನು ಪ್ರಕಟಿಸಲಿದೆ.
ಚೆನ್ನಾಗಿ ಆಡಲು ಏಷ್ಯಾಕಪ್ ಒಳ್ಳೆಯ ವೇದಿಕೆಯಾಗಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಆಕ್ರಮಣಕಾರಿಯಾಗಿ ಆಡಲಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಆಡಲಿದೆ.
ಎಲ್ಲರ ಗಮನ ರನ್ ಯಂತ್ರ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ಜೊತೆಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಮೇಲೆ ಗಮನವಿದ್ದು ಜಸ್ಪ್ರೀತ್ ಬುಮ್ರಾ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುತ್ತಿಲ್ಲ.
ಪಾಕ್ಗೆ ಗಾಯದ ಚಿಂತೆ
ಇನ್ನು ಪಾಕಿಸ್ಥಾನ ಕ್ರಿಕೆಟ್ ತಂಡ ಕಳೆದ 12 ತಿಂಗಳಿನಿಂದ ಒಳ್ಳೆಯ ಪ್ರದರ್ಶನ ನೀಡಿ ವಿಶ್ವ ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಹತ್ತು ವರ್ಷದ ಹಿಂದೆ ಕೊನೆಯ ಬಾರಿಗೆ ಏಷ್ಯಾಕಪ್ ಗೆದ್ದಿತ್ತುಘಿ. ಇದೀಗ ಮತ್ತೊಮ್ಮೆ ಏಷ್ಯಾಕಪ್ ಗೆಲ್ಲಲು ಪಣ ತೊಟ್ಟಿದೆ.
ಈ ಬಾರಿ ಪಾಕಿಸ್ಥಾನ ತಂಡ ಸಾಕಷ್ಟು ಗಾಯದ ಸಮಸ್ಯೆಗೆ ಗುರಿಯಾಗಿದೆ. ತಂಡದ ತಾರಾ ವೇಗಿ ಶಾಹೀನ್ ಅಫ್ರೀದಿ ಗಾಯದ ಸಮಸ್ಯೆಗೆ ಗುರಿಯಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳಿಲ್ಲದ ಬ್ಯಾಟರ್‍ಗಳಿದ್ದಾರೆ. ನಾಯಕ ಬಾಬರ್ ಅಜಂ ಮತ್ತು ಮೊಹ್ಮದ್ ರಿಜ್ವಾನ್ ಇದ್ದಾರೆ.
ಅಚ್ಚರಿ ಕೊಡಲು ಸಜ್ಜಾದ ಅ್ಘನಿಸ್ಥಾನ
ಇನ್ನು ಅಫ್ಘಾನಿಸ್ಥಾನ ತಂಡ ಮೊಹ್ಮದ್ ನಬಿ ನೇತೃತ್ವದಲ್ಲಿ ದೊಡ್ಡ ತಂಡಗಳನ್ನು ಸೋಲಿಸಲು ಹೋರಾಡಲಿದೆ.ಕಳೆದ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ರಶೀದ್ ಖಾನ್ ತಂಡದ ತಾರಾ ಆಟಗಾರರಾಗಿದ್ದು ಬೌಲಿಂಗ್‍ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್‍ನಲ್ಲೂ ಒಳ್ಳೆಯ ಪ್ರದರ್ಶನ ನಿರೀಕ್ಷಿಸಲಾಗಿದೆ.
ಭರವಸೆ ಮೂಡಿಸುತ್ತಾ ಲಂಕಾ ?
ಶ್ರೀಲಂಕಾ ತಂಡ ಹೊಸ ತರಬೇತುದಾರ ಕ್ರಿಸ್ ಸಿಲ್ವರ್‍ವುಡ್ ಅಡಿಯಲ್ಲಿ ಭರವಸೆ ಪಡೆದಿದೆ. ತಂಡದಲ್ಲಿ ಹೇಳಿಕೊಳ್ಳುವಂತಹ ತಾರಾ ಆಟಗಾರರಿಲ್ಲ ಆದರೆ ರಾತ್ರೋ ರಾತ್ರಿ ತಾರಾ ಆಟಗಾರನಾಗಲು ಅವಕಾಶವಿದ್ದು ತವರಿನ ಜನರಿಗೆ ಸಂತಸ ನೀಡಲು ಅವಕಾಶವಿದೆ.
ಇನ್ನು ಬಾಂಗ್ಲಾದೇಶ ತಂಡ ಈ ಚುಟುಕು ಆವೃತ್ತಿಯಲ್ಲಿ ಅದರಲ್ಲೂ ಟಿ20 ವಿಶ್ವಕಪ್ ಆರಂಭವಾದಗಿನಿಂದ ಬರೀ ಆಘಾತಗಳನ್ನೆ ಅನುಭವಿಸುತ್ತಾ ಬಂದಿದೆ. ಟಿ20 ವಿಶ್ವಕಪ್‍ಗೂ ಮುನ್ನ ಭಾರತದ ಶ್ರೀಧರನ್ ಶ್ರೀರಾಮನ್ ಅವರನ್ನು ತಾಂತ್ರಿಕಾ ನಿರ್ದೇಶಕರಾಗಿ ಕರೆ ತರಲಾಗಿದೆ.
ಕ್ರಿಕೆಟ್ ಶಿಶು ಹಾಂಗ್ ಕಾಂಗ್ ಅರ್ಹತಾ ಪಂದ್ಯದಲ್ಲಿ ಯುಎಇ ತಂಡವನ್ನು ಸೋಲಿಸಿ ನಾಲಕ್ನೆ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆದಿದೆ.
ಇಂದಿನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ಥಾನ ತಂಡಗಳು ಮುಖಾಮುಖಿಯಾಗಲಿವೆ.
ಸಂಭಾವ್ಯ ತಂಡಗಳು:
ಶ್ರೀಲಂಕಾ : ಸಾಸನು ಶನಕಾ (ನಾಯಕ), ದನುಶ್ಕ ಗುಣತಿಲಕ, ಪಾಥುಮ್ ನಿಸ್ಸಂಕಾ, ಕುಶಾಲ್ ಮೆಂಡಿಸ್, ಚರಿತ್ ಅಸಾಲಂಕಾ, ಭಾನುಕಾ ರಾಜಪಕ್ಸೆ, ಅಶೆನ್ ಬಂಢರಾ, ಧನಂಜಯ ಡಿಸಿಲ್ವಾ, ವನಿಂದು ಹಸರಂಗಾ, ಮಹೀಶ್ ತೋಈಕ್ಷ್ಣ, ಜೆಫ್ರೆ ವಂಡರ್ಸೆ, ಪ್ರವೀಣ್ ಜಯವಿಕ್ರಮಾ, ಚಾಮಿಕಾ ಕರುಣರತ್ನೆಘಿ, ದಿಲ್ಶಾನ್ ಶನಕಾ, ಮತೀಶಾ ಪಾತಿರಾಣ, ನುವನಿಂದು ಫೆರ್ನಾಡೊ, ದಿನೇಶ್ ಚಂಡಿಮಲ್.
ಅಫ್ಘಾನಿಸ್ಥಾನ:ಮೊಹ್ಮದ್ ನಬಿ (ನಾಯಕ),ನಜಿಬ್‍ಹುಲ್ಲಾ ಜರ್ದಾನ್ (ಉಪನಾಯ), ಅ್ಸರ್ ಜಜಾಯಿ (ವಿಕೆಟ್ ಕೀಪರ್), ಅಜಮತ್‍ಹುಲ್ಲಾ ಒಮರ್‍ಜಾಯಿ, ಫರೀದ್ ಅಹ್ಮದ್ ಮಲ್ಲಿಕ್, ಫಜಲ್ ಹಕ್ ಫಾರೂಕಿ, ಹಶಮತ್‍ಹುಲ್ಲಾ ಶಾಹೀದಿ, ಹಜರತ್‍ಹುಲ್ಲಾ ಜಜಾಹಿ, ಇಬ್ರಾಹಿಂ ಜರ್ದಾನ್, ಕರೀಮ್ ಜನತ್, ಮುಜೀಬ್ ಉರ್ ರೆಹಮಾನ್, ನವೀನ್ ಹುಲ್ ಹಕ್, ನೂರ್ ಅಹ್ಮದ್, ರೆಹಮಾನ್‍ಹುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮಿಹುಲ್ಲಾ ಶೆನಿವಾರಿ, ಉಸ್ಮಾನ್ ಘನಿ.
ಏಷ್ಯಾಕಪ್ ಲೀಗ್ ವೇಳಾ ಪಟ್ಟಿ
ದಿನಾಂಕ ತಂಡಗಳು ಸ್ಥಳ
ಆ.27 ಶ್ರೀಲಂಕಾ-ಅಫ್ಘಾನಿಸ್ಥಾನ ದುಬೈ
ಆ.28 ಭಾರತ- ಪಾಕಿಸ್ಥಾನ ದುಬೈ
ಆ.30 ಬಾಂಗ್ಲಾದೇಶ – ಅಫ್ಘಾನಿಸ್ಥಾನ ಶಾರ್ಜಾ
ಆ.31 ಭಾರತ – ಹಾಂಗ್ ಕಾಂಗ್ ದುಬೈ
ಸೆ.1 ಶ್ರೀಲಂಕಾ- ಬಾಂಗ್ಲಾದೇಶ ದುಬೈ
ಸೆ.2 ಪಾಕಿಸ್ಥಾನ- ಹಾಂಗ್‍ಕಾಂಗ್ ಶಾರ್ಜಾ
ಪಂದ್ಯ ಆರಂಭ: ಸಮಯ ಸಂಜೆ 7.30