ಟೊಕಿಯೊ: ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪುವ ಮೂಲಕ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಹೊಸ ಇತಿಹಾಸ ನಿರ್ಮಿಸಿದ್ದಾರೆ . ಜೊತೆಗೆ ಪದಕವನ್ನು ಖಚಿತಪಡಿಸಿದ್ದಾರೆ.
ವಿಶ್ವ ಚಾಂಪಿಯನ್‍ಶಿಪ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದುಕೊಟ್ಟ ಭಾರತದ ಮೊದಲ ಜೋಡಿ ಎಂಬ ಗೌರವಕ್ಕೆ ಪಾತ್ರವಾಗಿದೆ.
2011ರ ಮಹಿಳಾ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗು ಅಶ್ವಿನಿ ಪೆÇನ್ನಪ್ಪ ಜೋಡಿ ಮಹಿಳಾ ಡಬಲ್ಸ್ ಗೆದ್ದಿತ್ತು.
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ ಸಾತ್ವಿಕ್‍ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 1 ಗಂಟೆ 15 ನಿಮಿಗಳ ಕಾಲ ಹಾಲಿ ಚಾಂಪಿಯನ್ ಟಾಕುರೊ ಹೊಕಿ ಹಾಗೂ ಯುಗೊ ಕೊಬಾಯಶಿ ಜೋಡಿಯನ್ನು 24-22, 15-21,21-14 ಅಂಕಗಳಿಂದ ಮಣಿಸಿ ಪ್ರತಿಷ್ಠಿತ ಟೂರ್ನಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿತು.
ಪುರುಷರ ಸಿಂಗಲ್ಸ್‍ನ ಕ್ವಾರ್ಟರ್‍ನಲ್ಲಿ ಅಗ್ರ ಆಟಗಾರ ಎಚ್.ಎಸ್.ಪ್ರಣಯ್ ಚೀನಾದ ಜಾವೊ ಜನ್ ಪೆಂಗ್ ವಿರುದ್ಧ 21-19, 6-21, 18-21 ಅಂಕಗಳಿಂದ ಸೋಲು ಕಂಡರು.