Sunday, September 8, 2024

Latest Posts

ಹಾಕಿ ಏಷ್ಯಾ ಕಪ್: ಇಂಡೋನೇಷ್ಯಾ ಎದುರು ಭಾರತಕ್ಕೆ  ಅಗ್ನಿ ಪರೀಕ್ಷೆ 

- Advertisement -

ಜಕಾರ್ತಾ(ಇಂಡೋನೇಷ್ಯಾ) :  ಹಾಲಿ ಚಾಂಪಿಯನ್ ಭಾರತ ತಂಡ ನಾಕೌಟ್ ಹಂತಕ್ಕೆ ಹೋಗಬೇಕಿದ್ದಲ್ಲಿ  ಇಂದು ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ  ಮಟದಲ್ಲಿ  ಗೆಲುವು ಸಾಸಬೇಕಿದೆ.  ಜೊತೆಗೆ  ಜಪಾನ್ ತಂಡ ಪಾಕಿಸ್ಥಾನ ತಂಡವನ್ನು ಸೋಲಿಸಬೇಕಿದೆ.

ಆತಿಥೇಯ ಇಂಡೋನೇಷ್ಯಾ ವಿರುದ್ಧ ದೊಡ್ಡ ಮಟ್ಟದಲ್ಲಿ  ಗೆಲುವು ದಾಖಲಿಸಿದರೂ ನಾಕೌಟ್ ಹಂತಕ್ಕೆ ಹೋಗುವ ಖಾತರಿ ಇಲ್ಲ. ಭಾರತದ ಆಸೆ ಜೀವಂತವಾಗಿರಬೇಕಿದ್ದಲ್ಲಿ ಜಪಾನ್ ಪಾಕ್ ತಂಡವನ್ನು ಸೋಲಿಸಬೇಕು.

ಮೊದಲ ಪಂದ್ಯ ಡ್ರಾ ಹಾಗೂ ಎರಡನೆ ಪಂದ್ಯವನ್ನು ಕೈಚೆಲ್ಲಿದ್ದರಿಂದ ಭಾರತ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ.  ಮೊದಲ ಸ್ಥಾನದಲ್ಲಿ ಜಪಾನ್ ಎರಡನೆ ಸ್ಥಾನದಲ್ಲಿ  ಪಾಕಿಸ್ಥಾನ ಇದೆ.

ಅಂಕಪಟ್ಟಿಯಲ್ಲಿ  ಭಾರತ -3 ಅಂಕ ಹೊಂದಿದೆ ಪಾಕಿಸ್ಥಾನ +13 ಅಂಕ ಪಡೆದಿದೆ.

ಸರ್ದಾರ್ ಸಿಂಗ್ ಅಡಿಯಲ್ಲಿ  ಭಾರತದ ಯುವ ತಂಡ ಆಡುತ್ತಿದೆ. ಇವರೊಂದಿಗೆ ತಂಡದ ಹಿರಿಯರ ಆಟಗಾರರಾದ ಬಿರೇಂದ್ರ ಲಾಕ್ರಾ ಮತ್ತು ಎಸ್.ವಿ.ಸುನಿಲ್ ಪಂದ್ಯದಿಂದ  ಹೊರ ಬಂದರು. ಲಾಕ್ರಾ ಮತ್ತು ಸುನಿಲ್ ಈ ಹಿಂದಿನ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ.

ಟೂರ್ನಿಯಲ್ಲಿ  ಭಾರತ ಹೀನಾಯ ಪ್ರದರ್ಶನ ನೀಡಲು ಯುವ ಆಟಗಾರರಿಗಿರುವ ಅನುಭವದ ಕೊರತೆಯೇ ಕಾರಣವಾಗಿದೆ. ಜೂನಿಯರ್ ವಿಶ್ವಕಪ್ ತಂಡವನ್ನು ಕಳುಹಿಸಿದ ಕಾರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಲಾಗುತ್ತಿದೆ.

ತಂಡದ ಮೂರು ವಿಭಾಗಗಳಲ್ಲಿ ಒಗ್ಗಟಿನ ಕೊರತೆ ಕಾಡುತ್ತಿದೆ. ಮಿಡ್‍ಫೀಲ್ಡ್  ವಿಭಾಗದಲ್ಲಿ  ಒಳ್ಳೆಯ ಆಟಗಾರನಿಲ್ಲ. ಫಾರ್ವರ್ಡ್‍ಲೈನ್ ಟೊಕಿಯೊ ಒಲಿಂಪಿಯನ್‍ಗಳಾದ  ಸಿಮ್ರಾನಜೀತ್ ಸಿಂಗ್ ಮತ್ತು ಯುವ ಆಟಗಾರ ಉತ್ತಮ ಸಿಂಗ್ ಅವರಿಂದ ಒಳ್ಳೆಯ ಪ್ರರ್ದಶನ ಬಂದಿಲ್ಲಘಿ. ಪವನ್ ರಾಜಭಾರ ಬದ್ಧತೆ ಮತ್ತು ಗಮನ ಸೆಳಯುವ ಆಟ ಆಡಿದ್ದಾರೆ. ಅವಕಾಶಗಳನ್ನು ಸೃಷ್ಟಿಸಿ  ಗೋಲುಗಳನ್ನ ಹೊಡೆಯುತ್ತಿದ್ದಾರೆ.

ಭಾರತ ತಂಡ ಪೆನಾಲ್ಟಿ  ಕಾರ್ನರ್ ವಿಭಾಗದಲ್ಲಿ ಗೋಲಾನ್ನಾಗಿ ಪರಿವರ್ತಿಸಲು ಕಷ್ಟಪಡುತ್ತಿದೆ. ರೂಪಿಂದರ್ ಪಾಲ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರ ನಡೆದಿದ್ದಾರೆ.  ಯುವ ಆಟಗಾರರನ್ನೊಳಗೊಂಡ ಭಾರತ ತಂಡ ಇಂದು ಅತ್ಯುತ್ತಮ ಆಟವನ್ನು ಪ್ರದರ್ಶೀಸಬೇಕಿದೆ.

 

 

 

- Advertisement -

Latest Posts

Don't Miss