ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್‍ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ ಜೋಡಿಯೊಂದು ತಮ್ಮ ಮದುವೆಗೆ ವಿಶಿಷ್ಟವಾದ ಪದ್ದತಿಯ ಸೆರ್ಪಡಿಯೊಂದಿಗೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
View this post on Instagram
ಈ ಕುರಿತ ವಿಡಿಯೋಂದನ್ನು ದಂಪತಿಯ ಫೋಟೋಗ್ರಾಫರ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ನವದಂಪತಿಯನ್ನು ಶಾಂತಿ ಮತ್ತು ಮೀಂಟು ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ದಂಪತಿಯು ಕೆಲ ಮದುವೆಯ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದನ್ನು ನೀವು ಕಾಣಬಹುದಾಗಿದೆ. ವರನು ಜೀಮ್‍ಗೆ ಹೋಗುವುದರಿಂದ ಹಿಡಿದು ವಧುವು ಶಾಂಪಿಗ್‍ಗೆ ಹೋಗುವವರೆಗಿನ ಒಪ್ಪಂದಗಳ ಷರತ್ತುಗಳನ್ನು ಬಿಳಿಯ ಕಾರ್ಡಶೀಟ್‍ವೊಂದರ ಮೇಲೆ ಬರೆಯಲಾಗಿದೆ. ಅದಕ್ಕೆ ದಂಪತಿಯು ಸಹಿ ಹಾಕುತ್ತಿರುವುದನ್ನು ನೀವು ನೋಡಬಹುದಾಗಿದೆ. ನವ ದಂಪತಿಯ ಮುಂದಿನ ಭವಿಷ್ಯದಲ್ಲಿ ಅಗತ್ಯವಿರುವ ಎಲ್ಲ ಹೆಚ್ಚಿನ ವಿವರಗಳು ಆ ಒಂದು ಕಾರ್ಡ್ ಶೀಟ್ ಮೇಲೆ ಬರೆಯಲಾಗಿತ್ತು.
ಅದರಲ್ಲಿರುವ ಕೆಲ ವಿಭಿನ್ನ ಷರತ್ತುಗಳನ್ನು ನೀವು ಕಾಣಬಹುದು. ಅದೇನೆಂದರೆ ದಂಪತಿ ಒಂದು ತಿಂಗಳಲ್ಲಿ ಒಂದೇ ಪಿಜ್ಜಾ ತಿನ್ನಬೇಕು. ವಧುವು ಮದುವೆಯ ನಂತರ ಪ್ರತಿದಿನ ಸೀರೆ ಧರಿಸುವ ಒಪ್ಪಂದದ ಕುರಿತು ಬರೆಯಲಾಗಿತ್ತು. ವೀಡಿಯೊವನ್ನು 40 ಮಿಲಿಯನ್ ಬಾರಿ ವೀಕ್ಷಿಸಲಾಗಿದ್ದು, ಹಲವಾರು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.