Saturday, May 25, 2024

Latest Posts

‘ವಿಧಾನಸಭಾ ಚುನಾವಣೆ ಫಲಿತಾಂಶ ‌ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ’

- Advertisement -

Political News: ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಶ್ರೀರಾಮದೇವರ ಕಟ್ಟೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಭಾಷಣ ಮಾಡಿದ್ದು, ನಾವು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಡಲು ತೀರ್ಮಾನಿಸಿದ್ದೇವೆ. ಅದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಂದಿದ್ದಾರೆ.

ಪಂಚ ರಾಜ್ಯ ಚುನಾವಣೆಯ ಎಕ್ಸಿಟ್ ಪೋಲ್ ರಿಪೋರ್ಟ್ ಬಂದಿದೆ. ಒಂದೆರಡು ಕಡೆ ಕಾಂಗ್ರೆಸ್ ಒಂದೆರಡು ಕಡೆ ಬಿಜೆಪಿ ಬರುವ ಸಮೀಕ್ಷೆ ನೀಡಿದ್ದಾರೆ. ಈ ಸಮೀಕ್ಷೆ ಲೋಕಸಭೆ ಮೇಲೆ ಪ್ರಭಾವ ಇರಬಹುದು. ಈ ರಿಸಲ್ಟ್ ಗೌಣ ಅಲ್ಲ. ಕಳೆದ ಬಾರಿ ಕಾಂಗ್ರೆಸ್ ಐದು ಕಡೆ ಗೆದ್ದಿತ್ತು . ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ವಿಧಾನಸಭಾ ಚುನಾವಣೆ ಫಲಿತಾಂಶ ‌ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನನ್ನ ರಾಜಕೀಯ ಅನುಭವದಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.

ಬಿಜೆಪಿ 14,15 ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ನಾಲ್ಕೈದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಕೇರಳದಲ್ಲಿ ನಾವು ಎಲ್‌ಡಿಎಫ್ ಜೊತೆ ಇದ್ದು, ಕರ್ನಾಟಕದಲ್ಲಿ ನಮ್ಮನ್ನು ಮುಗಿಸುವ ಯತ್ನ ನಡೆಯಿತು. ಕುಮಾರಸ್ವಾಮಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರು. ಆದರೆ ಕಳೆದ ಚುನಾವಣೆಯ ಕೊನೆ ಕ್ಷಣದಲ್ಲಿ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈಗ ದೇಶದಲ್ಲಿ ಎಲ್ಲಾ ಕಡೆ ಗ್ಯಾರೆಂಟಿ ಶುರುವಾಗಿದೆ. ಗ್ಯಾರೆಂಟಿ ಬಗ್ಗೆ ಈಗ ಹೆಚ್ಚು ಮಾತನಾಡೋದಿಲ್ಲ ಎಂದಿದ್ದಾರೆ.

ನಾನು ಇಂದು ಸಭೆ ನಡೆಸುತ್ತಿರುವ ಬಗ್ಗೆ ಚರ್ಚೆ ಆಗಿದೆ. ಕಳೆದ ಬಾರಿ ಎಲ್ಲರೂ ಒಕ್ಕೊರಲಿನಿಂದ ಪ್ರಜ್ವಲ್ ಅವರನ್ನು  ಒಂದು ಲಕ್ಷ ಮತಗಳ‌ ಅಂತರದಲ್ಲಿ ಗೆಲ್ಲಿಸಿದ್ದೀರಿ. ನನಗೆ ಇನ್ನೂ ರಾಜ್ಯಸಭೆ ಸದಸ್ಯನಾಗಿ ಎರಡುವರೆ ವರ್ಷ ಅವಕಾಶವಿದೆ. ನನಗೆ ಮಂಡಿ ನೋವು ಬಿಟ್ಟರೆ ಎಲ್ಲಾ ಕೆಲಸ ಮಾಡುವ ಸಾಮರ್ಥ್ಯವಿದೆ. ಲೋಕಸಭೆ ಚುನಾವಣಾ ಸಂದರ್ಭ ಕುಮಾರಸ್ವಾಮಿ ‌ಕೂಡ ಬರ್ತಾರೆ. ಸಕಲೇಶಪುರದಲ್ಲಿ ಹೆಚ್‌.ಕೆ.ಕುಮಾರಸ್ವಾಮಿ ಅಲ್ಪ ಮತಗಳ ಮತರದಲ್ಲಿ ಸೋತಿದ್ದಾರೆ. ಸಕಲೇಶಪುರ, ಬೇಲೂರಿನಲ್ಲಿ ನಮ್ಮ ಕಾರ್ಯಕರ್ತರು ಸಧೃಡರಾಗಬೇಕು.

ರೇವಣ್ಣನವರು ನಮ್ಮ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ‌ಕೆಲಸ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ನನ್ನ ಮನಸ್ಸಿನಲ್ಲೂ ಪರಿಣಾಮ ಬೀರುತ್ತದೆ.  ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಭಾಗದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಲೋಕಸಭೆಯಲ್ಲಿ ನಮಗೆ ಎಷ್ಟು ಸೀಟು ಹಂಚಿಕೆಯಾಗುತ್ತೆ. ಅನ್ನುವ ವಿಷಯವನ್ನ ನಮ್ಮ ಪ್ರಧಾನಮಂತ್ರಿಗಳು, ಬಿಜೆಪಿ ಅಧ್ಯಕ್ಷರು, ಕುಮಾರಸ್ವಾಮಿ ತೀರ್ಮಾನ ‌ಮಾಡ್ತಾರೆ ಎಂದರು..

ಯಡಿಯೂರಪ್ಪನವರ ಮಗ, ಅಶೋಕ್ ನಮ್ಮ ಮನೆಗೆ ಬಂದಿದ್ದರು. ನಾನು ಅವರಿಗೆ ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಿ, ನಾನು ನಿಮ್ಮ ಹಿಂದೆ ಇರ್ತೇನೆ ಎಂದು ಹೇಳಿದ್ದೇನೆ. ಕಳೆದ ಚುನಾವಣೆ ಸಂದರ್ಭದಲ್ಲಿ ‌ಬಿಜೆಪಿಯನ್ನು ಎದುರಿಸಿದ್ದೇವೆ. ಆದರೆ ಈಗ ಅದನ್ನೆಲ್ಲಾ ಮರೆಯಬೇಕು . ಮೋದಿಯವರು ದೊಡ್ಡದಾಗಿ ಬೆಳೆದಿದ್ದಾರೆ. ಅವರ ಕೈ ಬಲಪಡಿಸುವ ಕೆಲಸವನ್ನ ನಾವು ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆ ಫಿಕ್ಸ್ : ಮೊಮ್ಮಗನ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಹೆಚ್.ಡಿ. ದೇವೇಗೌಡ

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

ಜಗದೀಶ್ ಶೆಟ್ಟರ್‌ ಮೈಯಲ್ಲಿರೋದು ಜನಸಂಘದಿಂದ ಬಂದ ಬಿಜೆಪಿ ರಕ್ತ, ಕಾಂಗ್ರೆಸ್‌ನದ್ದಲ್ಲ: ಸಿಟಿ ರವಿ

- Advertisement -

Latest Posts

Don't Miss