Friday, October 18, 2024

Latest Posts

ಫೈನಲ್ ತಲುಪಿದ ಅಥ್ಲೀಟ್ ಮಂಜು ಬಾಲಾ: ಸೆಮಿ ಫೈನಲ್‍ಗೆ  ಭಾರತ ಪುರುಷರ ಹಾಕಿ ತಂಡ

- Advertisement -

ಬರ್ಮಿಂಗ್‍ಹ್ಯಾಮ್: ಭಾರತದ ಅಗ್ರ ಮಹಿಳಾ ಅಥ್ಲೀಟ್ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೊ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

33 ವರ್ಷದ ಬಾಲಾ ಅರ್ಹತಾ ಸುತ್ತಿನಲ್ಲಿ  11ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ  57.48ಮೀ. ದೂರ ಎಸೆದರು. ಭಾರತದ ಮತ್ತೊರ್ವ ಮಹಿಳಾ ಅಥ್ಲೀಟ್ ಸರೀತಾ 57.48ಮೀ. ದೂರ ಎಸೆದು 13ನೇ ಸ್ಥಾನ ಪಡೆದು ಹೊರಬಿದ್ದರು.

ಸೆಮಿಫೈನಲ್‍ಗೆ  ಭಾರತ ಹಾಕಿ ತಂಡ

ಉಪನಾಯಕ ಹರ್ಮನ್‍ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲುಗಳ ನೆರೆವಿನಿಂದ ಭಾರತ ಪುರುಷರ ಹಾಕಿ ತಂಡ ವೇಲ್ಸ್ ವಿರುದ್ಧ 4-1 ಗೋಲುಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.

ಬಿ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ  ಹರ್ಮನ್‍ಪ್ರೀತ್ (19,20,40ನೇ ನಿಮಿಷ) ಎರಡು ಪೆನಾಲ್ಟಿಗಳನ್ನು ಬದಲಿಸಿ ಗೋಲು ಬಾರಿಸಿದರು. ನಂತರ 49ನೇ ನಿಮಿಷದಲ್ಲಿ  ಗುರ್ಜಾಂತ್ ಸಿಂಗ್ ಫೀಲ್ಡ್ ಗೋಲು ಹೊಡೆದು ಗೆಲುವಿನ ಅಂತರವನ್ನು ಹೆಚ್ಚಿಸಿದರು.  ವೇಲ್ಸ್ ಪರ ಡ್ರ್ಯಾಗ್ ಫ್ಲಿಕರ್ ಗಾರೆತ್ ಪುರ್‍ಲಾಂಗ್ 55ನೇ ನಿಮಿಷದಲ್ಲಿ ಗೋಲು ಹೊಡೆದರು.

ಉಪಾಂತ್ಯಕ್ಕೆ  ಅಮಿತ್ ಪಾಂಗಲ್

ತಾರಾ ಬಾಕ್ಸರ್ ಅಮಿತ್ ಪಾಂಗಲ್ (48-51ಕೆಜಿ) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್‍ನಲ್ಲಿ ಸ್ಕಾಟ್‍ಲ್ಯಾಂಡ್‍ನ ಲೆನಾನ್ ಮುಳಿಗಾನ್ ವಿರುದ್ಧ ಬ ಗೆದ್ದರು. ಕಳೆದ ಬಾರಿ ಅಮಿತ್ ಪಾಂಗಲ್ ಗೋಲ್ಡ್ ಕೋಸ್ಟ್‍ನಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ 92+ ಕೆಜಿ ವಿಭಾಗದ ಕ್ವಾರ್ಟರ್‍ನಲ್ಲಿ  ಸಾಗರ್ ಸೇಶೆಲ್ಸ್‍ನ ಅಹ್ಲಾವಾತ್ ಕೆಡಿ ಆ್ಯಗ್ನಸ್ ವಿರುದ್ಧ ಗೆದ್ದು ಸೆಮಿಗೆ ಲಗ್ಗೆ ಹಾಕಿದರು.

ಇನ್ನು ಮಹಿಳಾ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ ಭಾರತದ ಜಾಸ್ಮಿನ್ ಲೈಟ್‍ವೇಟ್ ವಿಭಾಗದಲ್ಲಿ (60ಕೆಜಿ ವಿಭಾಗ) ನ್ಯೂಜಿಲೆಂಡ್‍ನ ಟ್ರಾಯ್ ಗಾರ್ಟನ್ ವಿರುದ್ಧ 4-1 ಅಂಕಗಳಿಂದ ಗೆದ್ದು  ಸೆಮಿಗೆ ಪ್ರವೇಶ ಪಡೆದರು. ನಿಖಾತ್ ಜರೀನ್ (50ಕೆಜಿ), ನೀತು ಗಂಗಾಸ್ (48ಕೆಜಿ)ಮತ್ತು ಮೊಹ್ಮದ್ ಹುಸಾಮುದ್ದೀನ್ (57ಕೆಜಿ) ಸೆಮಿಫೈನಲ್ ತಲುಪಿದ ಮಹಿಳಾ ಬಾಕ್ಸರ್‍ಗಳಾಗಿದ್ದು ಪದಕ ಖಚಿತಪಡಿಸಿದ್ದಾರೆ.

ಸೆಮಿಫೈನಲ್‍ಗೆ ಅಥ್ಲೀಟ್ ಹಿಮಾದಾಸ್

ಭಾರತದ ತಾರಾ ಅಥ್ಲೀಟ್ ಹಿಮಾ ದಾಸ್ ಮಹಿಳಾ 200ಮೀ. ಸೆಮಿಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಗುರುವಾರ ನಡೆದ ಹೀಟ್ಸ್‍ನಲ್ಲಿ  ಹಿಮಾ ದಾಸ್ 200ಮೀ. ಓಟದಲ್ಲಿ  23.42ಸೆಕೆ. ಗುರಿ ಮುಟ್ಟಿ ಅರ್ಹತೆ ಪಡೆದರು. ಜಾಂಬಿಯಾದ  ರೊದಾ ನ್ಜೊದಾ 23.85ಸೆಕೆ. ಗುರಿ ಮುಟ್ಟಿದರೆ, ಉಗಾಂಡದ ನ್ಯಾಮಹುಂಗೆ 24.07 ಸೆಕೆ. ಗುರಿ ಮುಟ್ಟಿ  ಮೂರನೇ ಸ್ಥಾನ ಪಡೆದರು.

ಕ್ವಾರ್ಟರ್‍ಗೆ ದೀಪಿಕಾ, ಸೌರವ್

ಅಗ್ರ ಸೀಡ್‍ಗಳಾದ  ದೀಪಿಕಾ ಪಳ್ಳಿಕಲ್ ಮತ್ತು ಸೌರವ್ ಗೋಷಾಲ್ ಮಿಶ್ರ ಡಬಲ್ಸ್‍ನಲ್ಲಿ  ಕ್ವಾರ್ಟರ್ ಫೈನಲ್ ತಲುಪಿದ್ದಾರೆ.  ವೇಲ್ಸ್‍ನ ಎಮಿಲಿ ವೈಟ್‍ಲಾಕ್ ಹಾಗೂ ಪಾಟರ್ ಕ್ರೀಡ್ ವಿರುದ್ಧ 11-8, 11-4 ಅಂಕ ಗಳಿಂದ ಗೆದ್ದುಕೊಂಡರು.

 

 

 

 

- Advertisement -

Latest Posts

Don't Miss