ಜೆಡಿಎಸ್ ಪಕ್ಷವನ್ನು ಮುಳುಗಿಸಲು ಶಥಾಯ ಪ್ರಯತ್ನ ನಡಿತಿದೆ. ಪ್ರಜ್ವಲ್ ಬೇಗ ಕರ್ನಾಟಕಕ್ಕೆ ಬಾ: ಹೆಚ್ಡಿಕೆ ಮನವಿ

Political News: ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಶಿವರಾಮೇಗೌಡ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಶಿವರಾಮೇಗೌಡ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಅಭಿವೃದ್ಧಿ ಶೂನ್ಯವೆಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಸರ್ಕಾರ ಒಂದು ರೀತಿಯ ICU ದಲ್ಲಿದೆ. ಕಳೆದ ಒಂದು ವರ್ಷದಲ್ಲಿ ನಾಡಿನ ಜನತೆ ಬರಗಾಲ ಇರುವ ಸಂದರ್ಭದಲ್ಲಿ ಧೈರ್ಯ ತುಂಬುವ ಕೆಲಸ ಈ ಸರ್ಕಾರ ಮಾಡಿಲ್ಲ. ಮುಖ್ಯ ಮಂತ್ರಿಗಳು ಎಲೆಕ್ಷನ್ ನಂತ್ರ ಸಭೆ ಕರೆದಿದ್ರು. ಈ ರಾಜ್ಯದ ನೀರಾವರಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅತ್ಯಮೂಲ್ಯವಾದ ಸಮಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲಿಂದ ಕಳೆದು ಹೋಗಿದೆ. ರಾಜ್ಯದ ಕಲವಾರು ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಹೇಳತೀರದ್ದಾಗಿದೆ. ಕಾಂಗ್ರೆಸ್ ಸರ್ಕಾರದವರು ಕನಸು ಕಾಣುತ್ತಿದ್ದಾರೆ. ನಾಡಿನ ಅಭಿವೃದ್ಧಿ ಗೆ ಪೂರಕವಾದ ಕೆಲಸ ಎಲ್ಲೂ ಮಾಡಿಲ್ಲ ಕಾಂಗ್ರೆಸ್ ಸರ್ಕಾರ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿಲ್ಲ. ನಗರ ಪ್ರದಕ್ಷಿಣೆ ಇಂದ ಏನು ಆಗೋದಿಲ್ಲ. ಪೆನ್ ಡ್ರೈವ್ ಸಾಧನೆ ಬಗ್ಗೆ ಮಾಹಿತಿ ನೀಡುತ್ತಾರೆ ತಿಳಿದಿದ್ದೆ. ನಾನು ಜಾಹಿರಾತು ಕೊಟ್ಟು ಪ್ರಚಾರ ಮಾಡಿಲ್ಲ. ರಾಜ್ಯದ ತೆರಿಗೆ ಹಣವನ್ನು ಹೇಗೆ ಬಳಸಿಕೊಂಡಿದ್ದಾರೆ ನನಗೆ ಗೊತ್ತು. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಹೆಚ್ಡಿಕೆ ಕ್ಷಮೆಯಾಚಿಸಿದ್ದಾರೆ. ಆದರೆ ಈ ಒಂದು ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರಿಯಾಂಕಾ ಖರ್ಗೆ, ಕೃಷ್ಣ ಬೈರೇಗೌಡರ ಹೇಳಿಕೆಯನ್ನು ನಾನು ಕೇಳಿದ್ದೇನೆ. ನಾವು ದೇವೇಗೌಡ ರ ಕುಟುಂಬವೇ. ನಾವು ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ. ವ್ಯವಹಾರಗಳು ಬೇರೆ ಇರತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂತ್ರಿ ಗೆ ಜವಾಬ್ದಾರಿ ಇದ್ದಿದ್ರೆ, ಪೆನ್ ಡ್ರೈವ್ ಹೊರ ಬಂದಾಗಲೇ ಅದಕ್ಕೆ ತಕ್ಕ ಕಾನೂನು ಕ್ರಮ ತೆಗೆದು ಕೊಳ್ಳಬೇಕಿತ್ತು. ಕುಮಾರ್ ಸ್ವಾಮಿ ನೇ ಪೆನ್ ಡ್ರೈವ್ ಬಿಟ್ಟಿದ್ದು ಅನ್ನೋ ಸುದ್ದಿ ಹೊರ ಬರುತ್ತಿದೆ. ಕಾರ್ತಿಕ್ ಹೇಳಿಕೆ ಸರಿ ಇಲ್ಲ ಎಂದು ಹೇಳಿರುವ ಹೆಚ್ಡಿಕೆ, ದೇವರಾಜೇಗೌಡ ಕೇಸ್‌ಗಳ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. ದೇವರಾಜೇಗೌಡ ಅವರಿಗೆ ಪೆನ್ ಡ್ರೈವ್ ಕೊಟ್ಟೆ ಮತ್ಯಾರಿಗೂ ವಿಡಿಯೋ ನೀಡಿಲ್ಲ. ಕಾರ್ತಿಕ್ ಸುಳ್ಳು ಹೇಳುತ್ತಿದ್ದಾನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಿಮ್ಮ ತನಿಖೆ ಯಾವ ಪ್ರಕಾರ ಹೋಗುತ್ತಿದೆ..? ಪೆನ್ ಡ್ರೈವ್ ಸೋರಿಕೆಯ ವಿಚಾರವಾಗಿ ತನಿಖೆ ಆಗುತ್ತಿಲ್ಲ. ವಿಡಿಯೋ ಮಾಡಿದ ವ್ಯಕ್ತಿಗೆ ಶಿಕ್ಷೆ ಕೊಡಿ. ಸದಾಶಿವ ನಗರದಲ್ಲಿ ಇದ್ದದ್ದು CD ಶಿವು ನಾನಲ್ಲ ಎಂದು ಹೇಳುವ ಮೂಲಕ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹೇಳಿಕೆಗೆ ಲೇವಡಿ ಮಾಡಿದ್ದಾರೆ.

ನಾನು ರೇವಣ್ಣ ಕುಟುಂಬ ಮುಳುಗಿಸಬೇಕು ಅಂತ ಮಾಡಿದಿರಾ ಅಂತಿದ್ರಲ್ಲ. ದೇವೇಗೌಡ ಅವರು ಇನ್ನು ಆತ್ಮ ಹತ್ಯೆ ಮಾಡಿಕೊಂಡಿಲ್ವಾ ಅಂತ ಹೇಳಿದ್ರಲ್ಲ. ನೀವು ತಿಹಾರ್ ಜೈಲಿಗೆ ಹೋದಾಗ ನಿಮ್ಮ ಕುಟುಂಬಕ್ಕೆ ಧೈರ್ಯ ನೀಡಿದ್ವಿ. ಸಿದ್ದರಾಮಯ್ಯ ಅವರೇ ಒಂದು ಮಾತು ಹೇಳುತ್ತೇನೆ, ನನ್ನ ಪಕ್ಷದಲ್ಲಿ ಇದ್ದಾಗ ನನ್ನ ತಾಯಿಯ ಕೈತುತ್ತು ತಿಂದಿದ್ದೀರಿ. ಪ್ರಜ್ವಲ್ ರೇವಣ್ಣ ಡ್ರೈವರ್ ಮುಖ ಕೂಡ ನೋಡಿಲ್ಲ ನಾನು. ಯಾರೋ ಮಾಡಿದ್ದ ತಪ್ಪಿಗೆ ಕುಟುಂಬದ ಸರ್ವನಾಶ ಸರಿಯಲ್ಲ. ವಿಡಿಯೋ ಮಾಡಿರೋರು ಬೇರೆ ಪೆನ್ ಡ್ರೈವ್ ಹಂಚಿದ್ದು ಬೇರೆಯವರು. ಸಿದ್ದರಾಮಯ್ಯ ಅವ್ರೆ ಇದೇನಾ ನಿಮ್ಮ ಸರ್ಕಾರದ ಸಾಧನೆ..? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಪೆನ್ ಡ್ರೈವ್ ಪ್ರಕರಣದಲ್ಲಿ ಸತ್ಯ ಹೊರಗೆ ಬರಬೇಕು. ಪ್ರಕರಣದ ಬಗ್ಗೆ ಮೊದಲೇ ತಿಳಿದಿದ್ದರೆ ನಾನು ಪ್ರಜ್ವಲ್ ವಿದೇಶಕ್ಕೆ ಹೋಗೋಕೆ ಬಿಡುತ್ತಿರಲಿಲ್ಲ. ಪ್ರಜ್ವಲ್ ನಾ ಹೇಗೆ ರಕ್ಷಣೆ ಮಾಡಬೇಕು ಅನ್ನುವ ಚರ್ಚೆ ಯಲ್ಲೂ ನೆಡೆದಿಲ್ಲ. ನನ್ನ ತಂದೆ ತಾಯಿಯ ಅರೋಗ್ಯ ವಿಚಾರಕ್ಕೆ ನಾನು ದೇವೇಗೌಡ ಅವರ ಮನೆಗೆ ಹೋಗುತ್ತಿದ್ದೇನೆ. ರೇವಣ್ಣ ಮತ್ತು ಅವರ ಮಗನ ವಿಚಾರ ಸ್ಪಷ್ಟವಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮನಸಿಗೆ ಬಂದ ಹಾಗೆ ಹೇಳೋದು ಅಲ್ಲ. ಸಾರ್ವಜನಿಕವಾಗಿ ಪೆನ್ ಡ್ರೈವ್ ಹಂಚಲು ನೀವೇ ಸೂತ್ರದಾರಿಗಳು ನಾನು ರಾಜ್ಯದ ತಾಯಂದಿರಿಗೆ  ಮನವಿ ಮಾಡುತ್ತೇನೆ. ರಾಹುಲ್ ಗಾಂಧಿ ಹೇಳುತ್ತಾರೆ 400ಕ್ಕೂ ಅಧಿಕ ರೇಪ್ ಆಗಿದೆ ಅಂತ. ನಿಮ್ಮ ಅಂಕಿ ಅಂಶಗಳು ಬೇರೆ ಆದರೆ ಬಂದಿರುವ ಸಂತ್ರಸ್ತರ ಅಂಕಿ ಅಂಶ ಬೇರೆ. ಜೆಡಿಎಸ್ ಆದ್ರೂ ಬಿಜೆಪಿ ಆದ್ರೂ ಸಂತ್ರಸ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕಂತೆ. ಮಂಡ್ಯದಲ್ಲಿ ನನ್ನ ಪಕ್ಷವನ್ನು ಮುಳುಗಿಸಲು ನೋಡಿದ್ರಿ ನೀವುಗಳು. ಯಾವುದೇ ಜಾತಿ ಜನ ಬಂದ್ರು ನಾನು ಗೌರವಿಸುತ್ತೆ. ಅಮಾಯಕ ಕುಟುಂಬದ ಹೆಣ್ಣು ಮಗಳನ್ನು ಬೀದಿಗೆ ತಂದಿದ್ದೀರಿ. ದೇವೇಗೌಡ ಕುಟುಂಬವನ್ನು ಬಲಿ ಹಾಕಲು ತಯಾರಿ ಮಾಡಿದ್ದೀರಿ. ಶಿವುಕುಮಾರ್ ಅವರೇ ಈರೀತಿಯ ಹೇಳಿಕೆ ಸರಿಯಲ್ಲ. ತಪ್ಪು ಮಾಡಿದವರು ಯಾರನ್ನು ಬಿಡಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇನ್ನು ಇದೇ ವೇಳೆ ಪ್ರಜ್ವಲ್ ರೇವಣ್ಣ ಕರ್ನಾಟಕಕ್ಕೆ ಬರಲು ಕುಮಾರಸ್ವಾಮಿ ಕೈ ಜೋಡಿಸಿ ಮನವಿ ಮಾಡಿದ್ದಾರೆ. 24 ಗಂಟೆಯೊಳಗೆ ಕರ್ನಾಟಕಕ್ಕೆ ಬಂದು, ದೇವೇಗೌಡರ ಮರ್ಯಾದೆ ಉಳಿಸಲು ಹೆಚ್‌ಡಿಕೆ ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರು ಸಿಬಿಐಗೆ ನೀಡಲು ಬೇಡಿಕೆ ನೀಡಿದ್ದಾರೆ. ಜೆಡಿಎಸ್ ಪಕ್ಷವನ್ನು ಮುಳುಗಿಸಲು ಶಥಾಯ ಪ್ರಯತ್ನ ನೆಡಿತಿದೆ. ನಾನು ಪಾಪದ ಹಣದಲ್ಲಿ ರಾಜಕೀಯ ಮಾಡಿಲ್ಲ. ನನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಯಾವುದೇ ಸಂಸ್ಥೆಯನ್ನು ಕೆಳ ಹಂತಕ್ಕೆ ಇಳಿಸಿಲ್ಲ. ರೇವಣ್ಣ ಅವರು ನನ್ನ ತಂಗಿ ಮನೆಯಲ್ಲಿ ಇದ್ದಾರೆ. 40-45 ಜನರ ದೂರವಾಣಿಯನ್ನು ಟ್ರ್ಯಾಪ್ ಮಾಡುತ್ತಿದ್ದಾರೆ. ನನ್ನ ಫೋನ್ ಕೂಡ ಟ್ರ್ಯಾಪ್ ಅಲ್ಲಿದೆ. ರೇವಣ್ಣ ಫೋನ್ ಟ್ರ್ಯಾಪ್ ನಲ್ಲಿಟ್ಟಿದ್ದಾರೆ. ಅಭಿವೃದ್ಧಿ ಕೆಲಸದ ಮೇಲೆ ಗಮನ ಕೊಡಿ. ಪೆನ್ ಡ್ರೈವ್ ನಲ್ಲಿ ಯಾವುದೇ ಪುರುಷನ ಚಿತ್ರವಿಲ್ಲ. ಆಡಿಯೋ ವಿಚಾರವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ: ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!

ಹ*ತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹ*ತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ತಲೆದಂಡ

About The Author