Horoscope: ಈ ವರ್ಷ ಕರ್ನಾಟಕ ರಾಜಕೀಯದಲ್ಲಿ ಏನೇನು ಬದಲಾವಣೆಗಳು ಆಗಲಿದೆ..? ಯಾರಿಗೆ ಪಟ್ಟ ಸಿಗಲಿದೆ..? ಡಿಸಿಎಂ ಡಿಕೆಶಿ ಹಣೆಬರಹ ಹೇಗಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ.
ಡಿಸಿಎಂ ಡಿಕೆಶಿಗೆ ಈ ವರ್ಷ ಜಾಕ್‌ಪಾಟ್ ಹೊಡೆಯುವ ಸಾಧ್ಯತೆ ಹೆಚ್ಚಾಗಿದ್ದು, 2025 ಡಿಕೆಶಿಗೆ ಅದೃಷ್ಟದ ವರ್ಷವಾಗಿದೆ. ಡಿಕೆಶಿಗೆ ಈ ವರ್ಷ ಒಳ್ಳೆಯ ಯೋಗವಿದೆ. ಆದರೆ ಈ ವರ್ಷ ಮೇ ತಿಂಗಳಿನಿಂದ 10 ತಿಂಗಳ ಕಾಲ ಅವರ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಗುರೂಜಿ ಸೂಚನೆ ನೀಡಿದ್ದಾರೆ. ಡಿಕೆಶಿ ಸಿಎಂ ಆದರೆ, ಅವರಿಂದ ಧರ್ಮಕಾರ್ಯಗಳು ನಡೆಯಲಿದ್ದು, ರಾಜ್ಯಕ್ಕೆ ರಾಷ್ಟ್ರಕ್ಕೆ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನಲಾಗಿದೆ.
ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ, ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಈ ವರ್ಷ ಅಷ್ಟು ಉತ್ತಮವಾಗಿಲ್ಲ. ಫೆಬ್ರವರಿಯ ಬಳಿಕ ಅವರಿಗೆ ಅಷ್ಟು ಉತ್ತಮವಿಲ್ಲದ ಕಾರಣ, ಅವರು ಲಕ್ಷ್ಮೀ ನರಸಿಂಹ ಸ್ವಾಮಿಯ ಆರಾಧನೆ ಮಾಡಬೇಕು. ಇದರಿಂದ ಹಲವು ಸಮಸ್ಯೆಗಳು ದೂರವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.