Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ, ಸರಿಯಾದ ಮಾಹಿತಿ ಮೇರೆಗೆ ಹರಳು ಧರಿಸಬೇಕು.
ಕೆಲವರು ಎಲ್ಲ ರತ್ನಗಳನ್ನು ಧರಿಸುತ್ತಾರೆ. ಒಂದು ಉಂಗುರದಲ್ಲಿ ನವರತ್ನಗಳಿರುತ್ತದೆ. ಅಂಥ ಉಂಗುರವನ್ನು ಹಾಕಿಕೊಂಡರೆ, ಲಾಭ ಲಭಿಸುವುದಿಲ್ಲ. ಏಕೆಂದರೆ, ನಮ್ಮ ರಾಶಿ ನಕ್ಷತ್ರಕ್ಕೆ ಸಂಬಂಧಿಸಿದಂತೆ, ನಾವು ಜನಿಸಿ ಹೊತ್ತು, ದಿನಕ್ಕೆ ಸಂಬಂಧಿಸಿದಂತೆ, ನಾವು ಹರಳನ್ನು ಧರಿಸಬೇಕು. ಅದನ್ನು ಬಿಟ್ಟು ನವಗ್ರಹಗಳಿಗೆ ಸಂಬಂಧಿಸಿದ ಹರಳನ್ನು ಧರಸಿದರೆ, ಪ್ರಯೋಜನವಾಗುವುದಿಲ್ಲ.
ಕೆಲವೊಮ್ಮೆ ನಾವು ಧರಿಸುವ ಹರಳು ನಮ್ಮನ್ನು ಬಲಹೀನರನ್ನಾಗಿ ಮಾಡುತ್ತದೆ. ಆರೋಗ್ಯ ಸಮಸ್ಯೆ, ಆಸ್ತಿ ಸಮಸ್ಯೆ, ಆಸ್ತಿ ಮಾರಾಟ ಮಾಡುವುದು ಇತ್ಯಾದಿ ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಉತ್ತಮ ಜ್ಯೋತಿಷಿಗಳ ಬಗ್ಗೆ ನಿಮ್ಮ ಜಾತಕ ತೋರಿಸಿ, ಯಾವ ಹರಳು ತೋರಿಸಬೇಕು ಎಂದು ತಿಳಿದು, ಧರಿಸಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.