Sunday, September 15, 2024

Latest Posts

ವಾರ್ನರ್ ಗೆ ಪತ್ನಿ ಕ್ಯಾಂಡಿಸ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು ಗೊತ್ತಾ..?

- Advertisement -

ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ, ಪತ್ನಿ ಕ್ಯಾಂಡಿಸ್ ವಾರ್ನರ್, ಭರ್ಜರಿ ಗಿಫ್ಟ್ ನೀಡಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್, ರನ್ ಹೊಳೆ ಹರಿಸುತ್ತಿದ್ದಾರೆ. ಈ ನಡುವೆ ವಾರ್ನರ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಮೂಲಕ ಪತ್ನಿ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ.

ಈ ಹಿಂದೆ ವರ್ಷ ಪೂರ್ತಿ, ನೋವು ಅವಮಾನಗಳಿಂದ ಕುಗ್ಗಿ ಹೋಗಿದ್ದ ಆಸಿಸ್ ಓಪನರ್, ಸದ್ಯ ಎಲ್ಲವನ್ನೂ ಮೆಟ್ಟಿ ನಿಂತಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ, ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಡೀ ಕುಟುಂಬವೇ ಅವಮಾನ ಅನುಭವಿಸಬೇಕಾದ ಸನ್ನಿವೇಶ ಎದುರಾಗಿತ್ತು. ಅಂದು ಎದುರಾಳಿ ತಂಡದಿದ ಪತ್ನಿ ವಿರುದ್ಧ ಕೀಳು ಮಟ್ಟದ ಮಾತುಗಳು ಕೇಳಿ ಬಂದ ಪರಿಣಾಮ, ಬಾಲ್ ಟ್ಯಾಂಪರಿಂಗ್ ಗೆ ಮುಂದಾಗಿದ್ದ ವಾರ್ನರ್, ನಂತರ ಒಂದು ವರ್ಷ ದ ನಿಷೇಧ ಶಿಕ್ಷೆ ಅನುಭವಿಸಿದ್ರು. ಆ ವೇಳೆ ಎದುರಾದ ಅವಮಾನ ಒತ್ತಡದಿಂದಾಗಿ, ಗರ್ಭಿಣಿ ಯಾಗಿದ್ದ ವಾರ್ನರ್ ಪತ್ನಿ ಕ್ಯಾಂಡಿಸ್ ಗೆ ಗರ್ಭಪಾತ ವಾಗಿತ್ತು. ಅಂದು ಆ ವಿಷಯವನ್ನ ಸ್ವತಃ ವಾರ್ನರ್ ಪತ್ನಿ ಕ್ಯಾಂಡಿಸ್ ಬಹಿರಂಗ ಪಡಿಸಿದ್ದರು. ಸದ್ಯ ಎಲ್ಲ ಸಂಕಷ್ಟ ಗಳಿಂದ ಹೊರ ಬಂದಿರುವ ವಾರ್ನರ್, ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಬಾರಿಯ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 2 ಶತಕ ಮತ್ತು 3 ಅರ್ಧ ಶತಕ ಬಾರಿಸಿರುವ ವಾರ್ನರ್, 73.71ರ ಸರಾಸರಿಯಲ್ಲಿ 516 ರನ್ ಕಲೆ ಹಾಕಿದ್ದಾರೆ.

ಈ ನಡುವೆ ಜೂನ್ 30 ರಂದು ರಾತ್ರಿ ಸುಮಾರು 10.30ರ ವೇಳೆಗೆ ವಾರ್ನರ್ ಪತ್ನಿ, ಲಂಡನ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ವಿಶ್ವಕಪ್ ಮುಗಿಯುವುದಕ್ಕೂ ಮೊದಲೇ, ವಾರ್ನರ್ ಗೆ ಪತ್ನಿ ದೊಡ್ಡ ಗಿಫ್ಟ್ ನೀಡಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು, ತಮ್ಮ ಮೂರನೇ ಹೆಣ್ಣು ಮಗುವಿಗೆ, ಐಲಾ ರೋಸಿ ವಾರ್ನರ್ ಅಂತ ಹೆಸರಿಟ್ಟಿದ್ದಾರೆ. ಪತ್ನಿ ಮತ್ತು ಮೂವರು ಮಕ್ಕಳೊಂದಿಗಿನ ಫೋಟೋ ಒಂದನ್ನ, ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಆಸಿಸ್ ಓಪನರ್, ನ್ಯೂ ಪ್ರೊಫೈಲ್ ಪಿಕ್ ಅಂತ ಹ್ಯಾಶ್ ಟ್ಯಾಗ್ ನೀಡಿದ್ದಾರೆ.

ಡಲ್ ಆದ್ರಾ ಕನ್ನಡಿಗ ಕೆ.ಎಲ್ ರಾಹುಲ್..??ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ZtjSFmkmjFs
- Advertisement -

Latest Posts

Don't Miss