Sunday, September 8, 2024

Latest Posts

ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಭಾರತಕ್ಕೆ ಸಿಕ್ಕಿದ್ರೆ ಪೂಜಿಸುತ್ತಿದ್ದೆವು ಎಂದ ನೆಟ್ಟಿಗರು

- Advertisement -

Sports News: ನಿನ್ನೆಯಷ್ಟೇ ಗುಜರಾತ್‌ನ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಮ್ಯಾಚ್ ನಡೆಯಿತು. ಭಾರತ ಸೋಲನ್ನಪ್ಪಿದರೆ, ಟ್ರೋಫಿ ಆಸ್ಟ್ರೇಲಿಯಾ ಪಾಲಾಯಿತು. ಆದರೆ ಹೀಗೆ ಸಿಕ್ಕ ಟ್ರೋಫಿಯ ಮೇಲೆ ಕಾಲಿಟ್ಟು ಕುಳಿತ, ಆಸ್ಟ್ರೇಲಿಯಾ ತಂಡದ ನಾಯಕನ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೇನಾದರೂ ಈ ಟ್ರೋಫಿ ಸಿಕ್ಕಿದ್ದರೆ, ನಾವು ಅದನ್ನು ಪೂಜಿಸುತ್ತಿದ್ದೆವು. ಆದರೆ ಆ ಟ್ರೋಫಿಗೆ ಆ ಪುಣ್ಯವಿಲ್ಲ ಬಿಡಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಸೋಫಾ ಮೇಲೆ ಕುಳಿತು, ಎದುರಿಗೆ ಇರುವ ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿರುವ ಫೋಟೋ ಇದಾಗಿದ್ದು, ಅಲ್ಪನಿಗೆ ಐಶ್ವರ್ಯ ಬಂದ್ರೆ ಹೀಗೆ ಆಗತ್ತೆ ಎಂದು, ಬಗೆ ಬಗೆಯ ಗಾದೆ ಮಾತಿನೊಂದಿಗೆ, ನೆಟ್ಟಿಗರು ಮಾರ್ಷ ನಡುವಳಿಕೆಯನ್ನು ಖಂಡಿಸಿದ್ದಾರೆ.

2003ರಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದಾಗ, ಆಸ್ಟ್ರೇಲಿಯಾ ಆಟಗಾರರು, ಟ್ರೋಫಿ ನೀಡುತ್ತಿದ್ದ ಶರದ್ ಪವಾರ್ ಬಳಿ, ಅಗೌರವವಾಗಿ ವರ್ತಿಸಿದ್ದರು. ಅಲ್ಲದೇ, ತಮಗೆ ಟ್ರೋಫಿಯೊಂದಿಗೆ ಫೋಟೋ ತೆಗಿಸಿಕೊಳ್ಳಬೇಕು. ನೀವು ಸೈಡ್ ಸರೀರಿ ಅನ್ನೋ ರೀತಿ, ಬಿಹೇವ್ ಮಾಡಿದ್ದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮಾರ್ಷ ಈ ರೀತಿ ಟ್ರೋಫಿಗೆ ಅಗೌರವ ತೋರಿದ್ದು, ಆಸ್ಟ್ರೇಲಿಯನ್ನರು ಟ್ರೋಫಿ ಗೆದ್ದಿದ್ದಾರಷ್ಟೇ. ಆದರೆ ಗೌರವ ಗೆದ್ದಿಲ್ಲವೆಂದು ಹೇಳಿದ್ದಾರೆ.

‘ಪೆನ್‌’ಡ್ರೈವ್‌ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ?’

ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್​ ಜಾರಕಿಹೊಳಿ..!

ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಪರಿವರ್ತನೆಗೆ ಶ್ರಮ: ವಿಜಯೇಂದ್ರ ಯಡಿಯೂರಪ್ಪ

- Advertisement -

Latest Posts

Don't Miss