ನವದೆಹಲಿ: 12 ರಿಂದ 17 ವರ್ಷ ವಯಸ್ಸಿನ ಮಕ್ಕಳು ಈಗ ಸೀರಮ್ ಇನ್ಸ್ಟಿಟ್ಯೂಟ್ನ ಕರೋನವೈರಸ್ ಲಸಿಕೆ ಕೋವೊವ್ಯಾಕ್ಸ್ ಅನ್ನು ಖಾಸಗಿ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಸ್ಪತ್ರೆ ಸೇವಾ ಶುಲ್ಕ ₹ 150 ರ ಜೊತೆಗೆ ಕೋವೊವ್ಯಾಕ್ಸ್ ನ ಒಂದು ಡೋಸ್ ಗೆ ₹ 900 ಮತ್ತು ಜಿಎಸ್ ಟಿ ವೆಚ್ಚವಾಗಲಿದೆ ಎಂದು...
ಬೆಂಗಳೂರು ನಗರ ಜಿಲ್ಲೆ : ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ 14, 16, 17 ರಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ರವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಕರ್ನಾಟಕ...
ಬೆಂಗಳೂರು: ನಾನು ಆ ಸಚಿವರ ಬಗ್ಗೆ ಮಾತನಾಡ್ತೀನಿ ಅಂತ ನನಗೂ ಕಾಲ್ ಬರುತ್ತಿವೆ. ಅಣ್ಣ ಅವರ ಬಗ್ಗೆ ಮಾತನಾಡಬೇಡಿ ಅವರು ಈ ಬಾರಿ ಸಿಎಂ ಆಗಿ ಬಿಡ್ತಾರೆ ಅವರ ಬಗ್ಗೆ ಮಾತನಾಡಿ ತೊಂದರೆ ಮಾಡಬೇಡಿ ಅಂತ ಯಾರ್ಯಾರೋ ಕಾಲ್ ಮಾಡಿದ್ದರು. ಮಂಡ್ಯದಿಂದ ಒಬ್ಬರು ಅಧ್ಯಕ್ಷರು ಕಾಲ್ ಮಾಡಿದ್ದರು, ಅವರು ಸಿಎಂ ರೇಸ್ ನಲ್ಲಿ ಇದ್ದಾರೆ...
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಈಗ ಇರುವಾಗಲೇ, ಈಗಿನಿಂದಲೇ ಮತಬೇಟೆ ಆರಂಭಿಸಿದ್ರಾ ಸಿಎಂ ಬೊಮ್ಮಾಯಿ, ಸಚಿವರು ಎನ್ನಲಾಗುತ್ತಿದೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ಮತಬುಟ್ಟಿಗೆ ಸಿಎಂ, ಸಚಿವರು ಕೈ ಹಾಕಿದ್ರಾ ಎನ್ನುವ ಕುತೂಹಲ ಹುಟ್ಟು ಹಾಕಿದೆ.
ಅದರಲ್ಲೂ ಮಠಗಳಿಗೆ ಅನುದಾನ ನೀಡುವ ಮೂಲಕ ಮತಬೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹಿಂದುಳಿದ, ದಲಿತ...
ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಮತ್ತು ಅಂತಹ ರೋಗನಿರೋಧಕತೆಯ ಪರಿಣಾಮವನ್ನು ಬಹಿರಂಗಪಡಿಸುವಂತೆ ಕೇಂದ್ರವನ್ನು ಕೇಳಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠವು ಸಂವಿಧಾನದ 21 ನೇ ಅನುಚ್ಛೇದದ ಅಡಿಯಲ್ಲಿ ದೈಹಿಕ ಸ್ವಾಯತ್ತತೆ ಮತ್ತು ಸಮಗ್ರತೆಯನ್ನು...
ನವದೆಹಲಿ: ಕಾಂಗ್ರೆಸ್ ನಿಂದ ಪಕ್ಷಕ್ಕೆ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ ಕೆಲವು ದಿನಗಳ ನಂತರ, ಪ್ರಶಾಂತ್ ಕಿಶೋರ್ ಸೋಮವಾರ ತಮ್ಮ ಮುಂದಿನ ಹುದ್ದೆಯ ಬಗ್ಗೆ ಸುಳಿವು ನೀಡಿದ್ದಾರೆ. ಅದೇ ಹೊಸ ರಾಜಕೀಯ ಪಕ್ಷದ ಮೂಲಕ ಸಕ್ರೀಯ ರಾಜಕಾರಣಕ್ಕೆ ಇಳಿಯುವಂತ ಸುಳಿವಾಗಿದೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, "ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗಿದಾರನಾಗಲು ಮತ್ತು ಜನಪರ ನೀತಿಯನ್ನು ರೂಪಿಸಲು...
ಮುಂಬೈ: ಐಪಿಎಲ್ ನ 47ನೇ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ತಂಡ 9 ಪಂದ್ಯಗಳಿಂದ 3ಲ್ಲಿ ಗೆದ್ದು 6ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು...
ಕಲಬುರ್ಗಿ: ಜಿಲ್ಲೆಯ ಜ್ಞಾನಜ್ಯೋತಿ ಶಾಲೆಯ ಪಿಎಸ್ಐ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದಂತ ಅಕ್ರಮದ ಜಾಲ ದಿನ ದಿನಕ್ಕೂ ವ್ಯಾಪಿಸುತ್ತಿದೆ. ಆರೋಪಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ನಡುವೆ, ಇಂದು ಪರೀಕ್ಷಾ ಕೇಂದ್ರದ ಹೆಡ್ ಮಾಸ್ಟರ್ ಕಾಶಿನಾಥ್ ಸಿಐಡಿ ಮುಂದೆ ಶರಣಾಗಿದ್ದಾರೆ.
ಸಿಐಡಿ ಪೊಲೀಸರು ಪಿಎಸ್ಐ ನೇಮಕಾತಿ ಅಕ್ರಮದಲ್ಲಿನ ಪ್ರಕರಣ ಕುರಿತಂತೆ ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸಿಐಡಿ ತನಿಖೆಗೆ...
ಮುಂಬೈ:ಮೊಹ್ಸಿನ್ ಖಾನ್ ಅವರ ಸೊಗಸಾದ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಲಕ್ನೊ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಜಿದ್ದಜಿದ್ದಿನ ಕದನದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಲಕ್ನೊ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟಾನ್ ಡಿಕಾಕ್ ಹಾಗೂ ನಾಯಕ ಕೆ.ಎಲ್.ರಾಹುಲ್ ಮೊದಲ...
ಹಾವೇರಿ: ರಾಜ್ಯ ಚುನಾವಣಾ ಆಯೋಗವು ಏಪ್ರಿಲ್ 2022 ರಿಂದ ಜುಲೈ -2022ರ ಅವಧಿಗೆ ಮುಕ್ತಾಯವಾಗಲಿರುವ ಗ್ರಾಮ ಪಂಚಾಯತಿಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ.
ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾದ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ, ಹಿರೇಕೆರೂರು ತಾಲೂಕಿನ ಬೆಟಕೇರೂರ ಗಾ.ಪಂ....