Monday, October 12, 2026

Karnataka Tv

ಪಿಎಸ್ಐ ಪರೀಕ್ಷೆ ಅಕ್ರಮ: ಬೆಂಗಳೂರಿನಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಓಎಂಆರ್ ತಿದ್ದುಪಡಿ ಮಾಡಿದ ಹಿನ್ನಲೆಯಲ್ಲಿ, ಬೆಂಗಳೂರಿನಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಿಐಡಿಯಿಂದ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಆಯ್ಕೆ ಪಟ್ಟಿಯಲ್ಲಿದ್ದಂತ ಅಭ್ಯರ್ಥಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿತ್ತು. ಏಪ್ರಿಲ್ 20, 21 ಮತ್ತು 22ರಂದು 172 ಮಂದಿ ಅಭ್ಯರ್ಥಿಗಳ ಓಎಂಆರ್ ಕಾರ್ಬನ್ ಪ್ರತಿಯನ್ನು ಪರಿಶೀಲನೆ ನಡೆಸಿತ್ತು. ವಿಚಾರಣೆಯ...

ಸನರೈಸರ್ಸ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು 

ಮುಂಬೈ:ಋತುರಾಜ್ ಗಾಯಕ್ವಾಡ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ ಸನ್ ರೈಸರ್ಸ್ ವಿರುದ್ಧ 13 ರನ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಧೋನಿ ಪಡೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (99 ರನ್)...

ಇಂದಿನಿಂದ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೇ ದಂಡ ಫಿಕ್ಸ್

ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರೋ ಕೋವಿಡ್ ನಿಯಂತ್ರಣಕ್ಕಾಗಿ, ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಇಂದಿನಿಂದ ಕಡ್ಡಾಯಗೊಳಿಸಲಾಗುತ್ತಿದೆ. ಒಂದು ವೇಳೆ ಮಾಸ್ಕ್ ಇಲ್ಲದೇ ಹೊರಗೆ ಓಡಾಡಿದ್ರೇ.. ದಂಡ ಫಿಕ್ಸ್ ಆಗಿದೆ. ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯ ನಿಯಮ ಜಾರಿಯಾಗುತ್ತಿದೆ. ಮಾಸ್ಕ್ ಇಲ್ಲದೇ ಹೊರಗೆ ಓಡಾಡೋರಿಗೆ ಬಿಬಿಎಂಪಿಯ ಮಾರ್ಷಲ್, ಪೊಲೀಸರು ರೂ.250...

ರಂಜಾನ್ ಹಬ್ಬ ಇಂದಲ್ಲ, ನಾಳೆ – ಕೇಂದ್ರ ಚಂದ್ರ ದರ್ಶನ ಸಮಿತಿ ತೀರ್ಮಾನ

ಬೆಂಗಳೂರು: ನಿನ್ನೆ ಚಂದ್ರ ದರ್ಶನವಾಗದ ಕಾರಣ, ನಾಳೆ ರಂಜಾನ್ ಹಬ್ಬವನ್ನು ಆಚರಿಸೋದಕ್ಕೆ ವಕ್ಫ್ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಚಂದ್ರ ದರ್ಶನ ಸಮಿತಿಯು ಮಾಹಿತಿ ನೀಡಿದ್ದು, ಭಾನುವಾರದಂದು ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ, ರಾಜ್ಯಾಧ್ಯಂತ ರಂಜಾನ್ ಹಬ್ಬವನ್ನು, ನಾಳೆ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಅಂದಹಾಗೇ ರಾಜ್ಯ ಸರ್ಕಾರ ನಾಳೆ ರಂಜಾನ್ ಹಬ್ಬದ ಪ್ರಯುಕ್ತ ನೀಡಲಾಗಿದ್ದಂತ ಸಾರ್ವತ್ರಿಕ...

ಬೆಂಗಳೂರಿಗರೇ ಗಮನಿಸಿ: ಆಸ್ತಿ ತೆರಿಗೆ ರಿಯಾಯತಿ ಮೇ ಅಂತ್ಯದವರೆಗೆ ವಿಸ್ತರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ‌ ಆಸ್ತಿ ತೆರಿಗೆ ಪಾವತಿಗೆ ನೀಡಲಾಗಿದ್ದ ಶೇ 5ರ ರಿಯಾಯಿತಿಯನ್ನು ಮೇ ತಿಂಗಳ ಅಂತ್ಯದ ವರೆಗೂ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಆಸ್ತಿ ತೆರಿಗೆ...

ನಾನು ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಬುದ್ದಿವಂತ ಅನ್ನುವ ಭ್ರಮೆಯಲ್ಲಿ ಇಲ್ಲ. ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಗಬೇಕು. ಸಮಸಮಾಜ ನಿರ್ಮಾಣ ಆಗಬೇಕು. ಕೆಲವರು ಮಾತ್ರ ಶ್ರೀಮಂತ ಆದ್ರೆ ನಾಡು ಉದ್ಧಾರ ಆಗೋದಿಲ್ಲ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೂರು ಇಲ್ಲದವರಿಗೆ ಸೂರು, ಹಸಿದವರಿಗೆ ಅನ್ನ ನೀಡುವ ಕೆಲಸ‌ವನ್ನ...

ನಮ್ಮ ಸಮಾಜದಲ್ಲಿ ನಾನು ಒಬ್ಬನೇ ಇರೋದು, ನನ್ನ ಬೆನ್ನಿಗೆ ನಿಂತಿರೋದು ಸಿಎಂ ಬೊಮ್ಮಾಯಿ – ಸಚಿವ ಮುನಿರತ್ನ

ಬೆಂಗಳೂರು:ಸಿಎಂ ಬಸವರಾಜ್ ಬೊಮ್ಮಾಯಿ ಅವರದ್ದು ತಾಯಿ ಹೃದಯ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಹಲ‌ ಮಠಾಧೀಶರನ್ನ ಸರ್ಕಾರಗಳು ಗುರುತಿಸಿರಲಿಲ್ಲ. ಈಗ ತಾಯಿ ಹೃದಯದ ಬಸವರಾಜ್ ಬೊಮ್ಮಾಯಿ ಗುರುತಿಸಿದ್ದಾರೆ. ಪ್ರತಿ ಹಂತದಲ್ಲೂ ಸಿಎಂ ನನ್ನ ಕೈ ಹಿಡಿದಿದ್ದಾರೆ. ಇವರು ನಮ್ಮ ನಾಯಕರು ಎಂಬುದಾಗಿ ಸಚಿವ ಮುನಿರತ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಹಾಡಿ ಹೊಗಳಿದ್ದಾರೆ. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,...

ಆ್ಯಸಿಡ್ ಎರಚಿದ ಕಿರಾತಕ ನಾಗೇಶ್ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ, ನಾಪತ್ತೆಯಾಗಿರುವಂತ ಕಿರಾತಕ ನಾಗೇಶ್ ಬಂಧನಕ್ಕಾಗಿ, ಪೊಲೀಸರು ಈಗ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಎಲ್ಲಾ ರಾಜ್ಯಗಳ ಪೊಲೀಸರಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವಂತ ಬೆಂಗಳೂರು ನಗರ ಪೊಲೀಸರು, ಕಿರಾತಕ ನಾಗೇಶ್ ಮಾಹಿತಿ ಇದ್ದರೇ ನೀಡುವಂತೆ, ಬಂಧಿಸುವಂತೆ ಕೋರಿಕೊಂಡಿದ್ದಾರೆ. ಅಂದಹಾಗೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವಂತ ನಾಗೇಶ್...

ಆರ್ಸಿಬಿಗೆ ಹ್ಯಾಟ್ರಿಕ್ ಸೋಲು : ಪ್ಲೇ ಆಫ್ ಹಾದಿ ಕಠಿಣ

ಮುಂಬೈ:ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ಗೆ ತತ್ತರಿಸಿದ ಆರ್ ಸಿಬಿ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ದ 6 ವಿಕೆಟ್ ಗಳ ಸೋಲು ಅನುಭವಿಸಿದೆ. ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಆರ್ಸಬಿ ತಂಡಕ್ಕೆ ಒಳ್ಳೆಯ ಆರಂಭ ಕೊಡುವಲ್ಲಿ ನಾಯಕ ಡುಪ್ಲೆಸಿಸ್ (0) ಎಡವಿದರು. https://www.youtube.com/watch?v=d8CX92B1rxQ&t=62s ವಿರಾಟ್ ಕೊಹ್ಲಿ  (58 ರನ್),...

ಎಸ್.ಎಂ.ಕೃಷ್ಣ ಅವರಿಗೆ ಶುಭ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕೇಂದ್ರದ ಮಾಜಿ ಸಚಿವರು ಹಾಗೂ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಎಸ್.ಎಂ.ಕೃಷ್ಣ ಅವರ ಜನುಮ ದಿನವಾದ ಇಂದು ದೂರವಾಣಿ ಕರೆ ಮಾಡಿ ಮಾತನಾಡಿದರು. ದೇವರು ತಮಗೆ ಆಯುಷ್ಯ ಮತ್ತು ಆರೋಗ್ಯವನ್ನು ನೀಡಲಿ ಎಂದು ಬಸವರಾಜ ಬೊಮ್ಮಾಯಿ ಅವರು ಶುಭಕೋರಿದರು.

About Me

32609 POSTS
0 COMMENTS
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img