Health Tips: 15 ನಿಮಿಷಕ್ಕಿಂತ ಹೆಚ್ಚು ಸಮಯ ವಾಶ್‌ರೂಮ್‌ನಲ್ಲಿದ್ದರೆ ಏನಾಗತ್ತೆ..?

Health Tips: ಇಂದಿನ ಕಾಲದಲ್ಲಿ ಕೈಯಲ್ಲಿ ಫೋನ್ ಇದ್ರೆ ಸಾಕು. ಜನ ಪ್ರಪಂಚಾನೇ ಮರೆತು ಬಿಡ್ತಾರೆ. ಇರೋ ಕೆಲ್ಸಾನೆಲ್ಲಾ ಬಿಟ್ಟು, ರಿಲ್ಸ್ ಸ್ಕ್ರಾಲ್ ಮಾಡ್ತಾರೆ. ಹೀಗೆ ಇರುವವರಲ್ಲಿ ಕೆಲವರು ವಾಶ್‌ರೂಮ್‌ಗೂ ತಮ್ಮ ಫೋನ್ ತೆಗೆದುಕ“ಂಡು ಹೋಗ್ತಾರೆ. 5 ನಿಮಿಷದಲ್ಲೇ ಆಚೆ ಬರಬೇಕಾದವರು, ಅರ್ಧ ಗಂಟೆಯಾದ್ರೂ ಅಲ್ಲೇ ಕೂತಿರ್ತಾರೆ. ಇಂಥವರಿಗಾಗಿ ವೈದ್ಯರು ಎಚ್ಚರಿಕೆ ಮಾತನ್ನಾಡಿದ್ದಾರೆ. ಅದೇನಂತಾ ತಿಳಿಯೋಣ ಬನ್ನಿ..

ಗುದನಾಳದ ರಕ್ತನಾಳದ ಮೇಲೆ ಭಾರ ಬೀಳುತ್ತದೆ: ನೀವು ವಾಶ್‌ರೂಮ್‌ನಲ್ಲಿ ಫೋನ್ ಹಿಡಿದು ಕೂರುವುದೇ ತಪ್ಪು. ಏಕೆಂದರೆ ನೀವು ನಿಮ್ಮ ಕೈ ವಾಶ್ ಮಾಡುತ್ತೀರಿ. ಸ್ನಾನ ಮಾಡುತ್ತೀರಿ. ಆದರೆ ನಿಮ್ಮ ಫೋನ್ ವಾಶ್ ಮಾಡಕ್ಕಾಗತ್ತಾ..? ಇಲ್ಲಾ.. ಹಾಗಾಗಿ ನಿಮ್ಮ ಫೋನ್‌ ಮೇಲೆ ಅದೆಷ್ಟು ಕೀಟಾಣುಗಳು ಬಂದು ಕೂರತ್ತೋ ದೇವರೇ ಬಲ್ಲ. ಆ ಫೋನ್ ಹಿಡಿದು ಆಹಾರ ಸೇವಿಸುತ್ತೀರಿ. ಅದನ್ನು ಬಳಸುತ್ತಲೇ, ಮಲಗುತ್ತೀರಿ. ಹೀಗೆ ಅನೇಕ ರೀತಿಯಿಂದ ಕೀಟಾಣು ನಿಮ್ಮ ದೇಹ ಸೇರುತ್ತದೆ.

ಕ್ರಮೇಣ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಬರಲಾರಂಭಿಸುತ್ತದೆ. ಹೀಗಾಗಿ ಫೋನ್ ಹಿಡಿದು ವಾಶ್‌ರೂಮ್‌ಗೆ ಹೋಗಬಾರದು.

ಇನ್ನು ವಾಶ್‌ರೂಮ್‌ನಲ್ಲಿ 15ಕ್ಕೂ ಹೆಚ್ಚು ನಿಮಿಷ ಕುಳಿತರೆ, ಅದರಿಂದ ಗುದನಾಳದ ರಕ್ತನಾಳದ ಮೇಲೆ ಭಾರ ಬಿದ್ದು ಪೈಲ್ಸ್ ಬರುವ ಸಾಧ್ಯತೆ ಇರುತ್ತದೆ. ಸ್ನಾಯುಗಳು ದುರ್ಬಲವಾಗುತ್ತದೆ. ರಕ್ತಪರಿಚಲನೆ ಕಷ್ಟವಾಗುತ್ತದೆ. ಇದರಿಂದ ಮುಂದೆ 1 ದಿನ ನೀವು ನಿಲ್ಲಲೂ, ಕೂರಲು ಆಗದಂಥ ಸ್ಥಿತಿ ಬರಬಹುದು. ಹಾಗಾಗಿ ಟಾಯ್ಲೆಟ್‌ಗೆ ಹೋಗಿ, ಕೆಲಸ ಮುಗಿಸಿ, ಬೇಗ ಬರುವುದು ಉತ್ತಮ.

 

About The Author