Chanakya Neeti: ಚಾಣಕ್ಯ ನೀತಿಯಲ್ಲಿ ಹೆಣ್ಣು ಮತ್ತು ಹಣದ ಬಗ್ಗೆ ಚಾಣಕ್ಯರು ಕೆಲ ವಿಷಯಗಳನ್ನು ಹೇಳಿದ್ದಾರೆ. ಎಂಥ ಹೆಣ್ಣು ಮಕ್ಕಳಿಗೆ ಹಣ ನೀಡಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಎಂಥ ಹೆಣ್ಣು ಮಕ್ಕಳಿಗೆ ನೀವು ಹಣ ನೀಡಬಾರದು ಅಂತಾ ತಿಳಿಯೋಣ ಬನ್ನಿ.
ಸೋಮಾರಿ ಹೆಣ್ಣುಮಕ್ಕಳು: ಸೋಮಾರಿ ಹೆಣ್ಣು ಮಕ್ಕಳಿಗೆ ಎಂದಿಗೂ ಹಮ ನೀಡಬಾರದಂತೆ. ಏಕೆಂದರೆ ಅವರಿಗೆ ಆ ಹಣ ಹೇಗೆ ಬಳಸಬೇಕು ಎಂಬ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಅವರು ನಿರ್ಲಕ್ಷ್ಯತೆಯಿಂದ ಆ ಹಣವನ್ನು ಪೋಲು ಮಾಡುತ್ತಾರೆ ವಿನಃ ಬುದ್ಧಿವಂತಿಕೆ ಉಪಯೋಗಿಸಿ ಹಣ ಖರ್ಚು ಮಾಡುವುದಿಲ್ಲ. ಹಾಗಾಗಿ ಸೋಮಾರಿತನವಿರುವ ಹೆಣ್ಣು ಮಕ್ಕಳಿಗೆ ಹಣ ನೀಡಬಾರದು ಅಂತಾರೆ ಚಾಣಕ್ಯರು.
ಅನ್ಯಾಯದ ಗುಣವಿರುವ ಮಹಿಳೆ: ಅನ್ಯಾಯದ, ಅಧರ್ಮದ ದಾರಿಯಲ್ಲಿ ನಡೆಯುವ ಹೆಣ್ಣು ಮಕ್ಕಳಿಗೆ ಎಂದಿಗೂ ಹಮ ನೀಡಬಾರದು ಅಂತಾರೆ ಚಾಣಕ್ಯರು. ಏಕೆಂದರೆ, ಇಂಥವರು ಹಣವನ್ನು ಕೆಟ್ಟ ಕೆಲಸಕ್ಕಾಗಿಯೇ ಬಳಸುತ್ತಾರೆ ವಿನಃ ಉತ್ತಮ ಕಾರ್ಯಕ್ಕೆಂದೂ ಬಳಸುವುದಿಲ್ಲ. ಅಲ್ಲದೇ, ಆಕೆಗೆ ಧರ್ಮದ ದಾರಿ ತಿಳಿಯದ ಹೆಣ್ಣು ಮಕ್ಕಳಿಗೆ ಎಂದಿಗೂ ಹಣ ನೀಡಬಾರದು ಅಂತಾರೆ ಚಾಣಕ್ಯರು.
ಕೋಪ ಹೆಚ್ಚಿರುವ ಮಹಿಳೆ: ಯಾವ ಮಹಿಳೆ ಹೆಚ್ಚು ಮತ್ತು ಪದೇ ಪದೇ ಕೋಪ ಬರುತ್ತದೆಯೋ ಅಂಥ ಮಹಿಳೆಯರಿಗೆ ಹಣ ನೀಡಬಾರದಂತೆ. ಇವರಿಗೆ ನಿರ್ವಹಣೆ ಮಾಡುವ ಗುಣವಾಗಲಿ, ನಿರ್ಧಾರ ತೆಗೆದುಕೊಳ್ಳುವ ತಾಳ್ಮೆಯಾಗಲಿ ಇರುವುದಿಲ್ಲ. ಹಾಗಾಗಿ ಕೋಪ ಹೆಚ್ಚಿರುವ ಮಹಿಳೆಯರಿಗೆ ಹಣ ನೀಡಬಾರದು ಅಂತಾರೆ ಚಾಣಕ್ಯರು.




