Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಪೊಲೀಸ್ ಕಮೀಷನರೇಟ್ ಮುಂದಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಇನ್ಸೆಕ್ಟರ್ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಯಿತು.
ಹುಬ್ಬಳ್ಳಿಯ ಪ್ರಮುಖ ಪೊಲೀಸ್ ಠಾಣೆಯಲ್ಲಿ ಒಂದಾಗಿರುವ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವತಿಯಿಂದ ಮಾದಕ ವಸ್ತುಗಳ ಸೇವನೆ ವಿರೋಧಿಸಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಇಂತಹದೊಂದು ಅಭಿಯಾನ ಆರಂಭ ಮಾಡಲಾಗಿದೆ.
ಆನಂದ ನಗರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಸಹಭಾಗಿತ್ವದಲ್ಲಿ ರ್ಯಾಲಿ ಮಾಡುವ ಮೂಲಕ ಜನರಲ್ಲಿ ಮಾದಕ ವ್ಯಸನದಿಂದ ಮುಕ್ತಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹುಬ್ಬಳ್ಳಿಯಲ್ಲಿ ಕೋಟ್ಯಾಧೀಶನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ.. ಮೇರಿ ಮೇಲೆ ಆರೋಪ..!
ಲೋಕಸಭಾ ಟಿಕೆಟ್ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಚ್ಚರಿ ಹೇಳಿಕೆ..!