ಪಾಕಿಸ್ತಾನ : ಪಾಕಿಸ್ತಾನದ ಸುಪ್ರೀಂಕೋರ್ಟ್(supreme Court of Pakistan) ನ ಪ್ರಥಮ ಮಹಿಳಾ ನ್ಯಾಯಾಧೀಶೆ ಯಾಗಿ ಆಯೇಷಾ ಎ. ಮಲಿಕ್(Ayesha A. Malik) ನೇಮಕಗೊಂಡಿದ್ದಾರೆ. ಆಯೇಷಾ ಎ. ಮಲಿಕ್ ಲಾಹೋರ್ ಹೈಕೋರ್ಟ್(Lahore High Court) ನಲ್ಲಿ ನ್ಯಾಯಮೂರ್ತಿಯಾಗಿ ಸೇವೆಸಲ್ಲಿಸುತ್ತಿದ್ದರು. ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್(Gulzar Ahmed) ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗದ(jcp) ವಿರುದ್ಧ 5 ಬಹುಮತಗಳಿಂದ ಗೆದ್ದ ನ್ಯಾಯಮೂರ್ತಿ ಆಯೇಷಾ ಎ. ಮಲಿಕ್ ಅವರನ್ನು ನೇಮಕಗೊಳಿಸಲು ಅನುಮೋದಿಸಲಾಗಿದೆ. ಜೇಷ್ಠತೆ ಆಧಾರದಲ್ಲಿ ಆಯೇಷಾ ಎ. ಮಲಿಕ್ ಅವರನ್ನು ನೇಮಕ ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ನ ಬಾರ್ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ಆಫ್ರಿದ್(Latif Ofrid) ವಿರೋಧ ವ್ಯಕ್ತಪಡಿಸಿ, ದೇಶದ ಅತ್ಯಂತ ಪ್ರತಿಭಟನೆಗೆ ಕರೆ ನೀಡಿದ್ದರು. ಆಯೇಷಾ ಎ. ಮಲಿಕ್ ದೇಶದ ಐದು ಹೈಕೋರ್ಟ್ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರಿಗೆ ಇಂತ ಕಿರಿಯರು ಎಂದು ವಿರೋಧಿಸುವುದಾಗಿ ಮಾಧ್ಯಮಗಳೊಂದಿಗೆ ಲತೀಫ್ ಆಫ್ರಿದ್ ತಿಳಿಸಿದ್ದಾರೆ. ಅವರ ಹೆಸರು ಆಯ್ಕೆ ಮಾಡಿದ್ದಕ್ಕೆ ಕೋರ್ಟ್ ಕಲಾಪ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ಆದರೆ (jcp) ಬಳಿಕ ಆಯೇಷಾ ಎ. ಮಲಿಕ್ ಅವರನ್ನು ಸಂಸದೀಯ ಸಮಿತಿ ನ್ಯಾಯಮೂರ್ತಿಯಾಗಿ ಪರಿಗಣಿಸಿದೆ.