Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ ಸಾಮಾನ್ಯ. ಮದುವೆಯಲ್ಲಿ ಪೂರಿ-ಖೀರು ಮಾಡಿಸಿಲ್ಲವೆಂದು, ನೀಡಿದ ವರದಕ್ಷಿಣೆ ಸಾಲಲಿಲ್ಲವೆಂದು, ಹೀಗೆ ಸಣ್ಣ ಸಣ್ಣ ವಿಚಾರಕ್ಕೂ ಅಲ್ಲಿ ಮದುವೆ ನಿಂತ ಉದಾಹರಣೆಗಳಿದೆ.

ಇದೀಗ ಗೋಪಾಲ್‌ಗಂಜ್‌ನಲ್ಲಿ ಇಂಥದ್ದೇ 1 ಘಟನೆ ನಡೆದಿದ್ದು, ಮಹಿಂದ್ರಾ ಥಾರ್ ವರದಕ್ಷಿಣೆಯಾಗಿ ನೀಡಲಿಲ್ಲವೆಂಬ ಕಾರಣಕ್ಕೆ ಮದುವೆ ನಿಂತಿದೆ. ಹುಡುಗಿಯ ಕಡೆಯವರು ಖರ್ಚು ಮಾಡಿ ಎಂಗೇಜ್‌ಮೆಂಟ್ ಮಾಡಿದ್ದರು. ಮದುವೆ ಖರ್ಚು ಕೂಡ ಅವರೇ ಮಾಡಬೇಕಿತ್ತು. ಮದುವೆಗಾಗಿ ಸಾಲ ಸೋಲ ಮಾಡಿ, ಹೇಗೂ ಮದುವೆಗೆ ತಯಾರಿ ಮಾಡಿದ್ದರು.

ಆದರೆ ವರನ ಕಡೆಯಲು ಮದುವೆಯಾಗಬೇಕು ಅಂದ್ರೆ, ತಾಳಿ ಕಟ್ಟುವ ಸಮಯದಲ್ಲಿ ಮಹಿಂದ್ರಾ ಥಾರ್ ಕಾರ್ ಕೀ ನನ್ನ ಬಳಿ ಇರಬೇಕು ಎಂದು ಷರತ್ತು ವಿಧಿಸಿದ್ದನಂತೆ. ಆದರೆ ಹುಡುಗಿ ಕಡೆಯವರು ಸಾಲ ಮಾಡಿ ಮದುವೆ ಮಾಡುತ್ತಿದ್ದೇವೆ. ಮದುವೆ ಬಳಿಕ ಸ್ವಲ್ಪ ಸಮಯ ನೀಡಿ, ಥಾರ್ ನೀಡುತ್ತೇವೆ ಎಂದಿದ್ದಾರೆ. ಆದರೆ ಮದುವೆಗೆ ಎಲ್ಲರೆದುರು ಥಾರ್ ಪಡೆದು ಮೆರೆಯಬೇಕು ಎಂದುಕೊಂಡಿದ್ದ ವರನ ಐಡಿಯಾ ಹಾಳಾಗಿದೆ.

ಈ ಕಾರಣಕ್ಕೆ ಕೋಪಗೊಂಡ ವರನ ಕಡೆಯಲು ಮದುವೆಯನ್ನೇ ನಿಲ್ಲಿಸಿದ್ದಾರೆ. ಸಾಲ ಮಾಡಿ ಇಷ್ಟೆಲ್ಲ ಮಾಡಿದ್ದು, ಇದೀಗ ಮದುವೆ ನಿಂತರೆ ನಷ್ಟವಾಗುವುದಲ್ಲದೇ, ಮರ್ಯಾದೆ ಹೋಗುತ್ತದೆ ಎಂದು ುಡುಗಿ ಕಡೆಯವರು ಎಷ್ಟೇ ಬೇಡಿಕೊಂಡರೂ ಮದುವೆಯಾಗಲು ವರನ ಕಡೆಯವರು ಸುತಾರಾಂ ಒಪ್ಪಲಿಲ್ಲ. ಹಾಗಾಗಿ ಈ ಬಗ್ಗೆ ವಧುವಿನ ಕಡೆಯವರು ಪೋಲೀಸ್ ಠಾಣೆಗೆ ದೂರು ನೀಡಿದ್ದು, ಎಂಗೇಜ್‌ಮೆಂಟ್ ಸಮಯದಲ್ಲಿ ವರದಕ್ಷಿಣೆಯಾಗಿ ಹಣ ನೀಡಿದ್ದು, ಅದನ್ನ ವಾಪಸ್ ಕೇಳಿದ್ದಾರೆ.

About The Author