Tamilunadu: ಯಮನಾಗಿ ಬಂದ ಡ್ರೈವರ್, ಬಸ್ ಹತ್ತುವ ವೇಳೆ ವೃದ್ಧೆ ಆಯ ತಪ್ಪಿ ಬಿದ್ದು ಸಾ*ವು..!

Tamilunadu News: ತಮಿಳುನಾಡಿನ ತೆಂಕಾಸಿ ಎಂಬಲ್ಲಿ 70 ವರ್ಷದ ವೃದ್ಧೆ ಬಸ್ ಹತ್ತಲು ಹೋಗಿ, ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೃದ್ಧೆ ಸರಿಯಾಗಿ ಬಸ್ ಹತ್ತುವ ಮುನ್ನವೇ ಅರ್ಜೆಂಟ್ ಆಗಿ ಡ್ರೈವರ್ ಬಸ್ ಶುರು ಮಾಡಿದ್ದಾನೆ. ಈ ವೇಳೆ ವೃದ್ಧೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಎತ್ತಲು ಅಲ್ಲೇ ಇದ್ದ ಕೆಲವರು ಮತ್ತು ಕಂಡಕ್ಟರ್‌ ಪ್ರಯತ್ನಿಸಿದರು ಕೂಡ ಆಕೆ ಬಿದ್ದ ಪೆಟ್ಟಿಗೆ ಮೂರ್ಛೆ ಹೋಗಿದ್ದಾಳೆ. ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕ“ಂಡೋಯ್ದರೂ ಆಕೆ ಸಾವನ್ನಪ್ಪಿದ್ದಾಳೆಂದು ವರದಿಯಾಗಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಹಲವರು ಬೇರೆ ಬೇರೆ ರೀಿತಿಯಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಡ್ರೈವರ್‌ಗೆ ಹಿಗ್ಗಾಮುಗ್ಗಾ ಬೈದಿರುವ ಜನ, ಹತ್ತುವವರನ್ನು ಅಹಂಕಾರಿಗಳು ಗಮನಿಸುವುದೇ ಇಲ್ಲ. ಅವರಿಗೆ ಬಸ್ ಓಡಿಸಿದೋಷ್ಟೇ ತಿಳಿದಿದೆ. ಅವರ ಮನೆಯವರಾಗಿದ್ರೆ ಈ ರೀತಿ ಮಾಡುತ್ತಿದ್ರಾ ಅಂತಾ ಪ್ರಶ್ಮಿಸಿದ್ದಾರೆ.

ಪ್ರತಿಯ“ಬ್ಬರೂ ಡ್ರೈವರ್ ಮಾಡಿರೋದು ತಪ್ಪು ಅಂತಾ ಹೇಳಿದ್ದು, ವೃದ್ಧೆಗೆ ಪೂರ್ತಿಯಾಗಿ ಹತ್‌ತಿ ಕೂರುವಷ್ಟು ಸಮಯ ನೀಡಬೇಕಿತ್ತು ಎಂದಿದ್ದಾರೆ. ಒಟ್ಟಾರೆಯಾಗಿ, ಬಸ್ ಡ್ರೈವರ್ ರೂಪದಲ್ಲಿ ಬಂದ ಯಮ ವೃದ್ಧೆಯ ಜೀವ ಕಸಿದಿದ್ದಾನೆ.

About The Author