ದೆಹಲಿಯ ಕರ್ನಾಟಕ ಭವನ ನೂತನ ಕಟ್ಟಡದ ಪ್ರಗತಿ ಪರಿಶೀಲಿಸಿದ BSY

ನಿನ್ನೆ ಪ್ರವಾಹ ಪೀಡಿತ ಉತ್ತರ ಕರ್ನಾಟಕದ ವೈಮಾನಿಕ ಸಮೀಕ್ಷೆ ನಡೆಸಿದ ಬಿಎಸ್ವೈ, ನಂತರ ದೆಹಲಿಗೆ ತೆರಳಿದ್ರು. ಸಚಿವ ಸಂಪುಟ ವಿಸ್ತರಣೆ, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ದೆಹಲಿ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಸದ್ಯ ಪಕ್ಷದ ಇತರೆ ನಾಯಕರ ಜೊತೆ ಸೇರಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣದ ಪರಿಶೀಲನೆ ನಡೆಸಿದ್ರು.

ಹೌದು… ಶಾಸಕರಾದ ಜಗದೀಶ್ ಶೆಟ್ಟರ್, ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಜೊತೆಯಲ್ಲಿ ತೆರಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಕರ್ನಾಟಕಭವನದ ನೂತನ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದರು. ನಂತರ ದೆಹಲಿ ನಾಯಕರನ್ನು ಭೇಟಿಯಾಗಲಿರುವ ಬಿಎಸ್ ವೈ ಸಚಿವ ಸಂಪುಟ ರಚನೆ ಕುರಿತಂತೆ, ವರಿಷ್ಠರ ಬಳಿ ಚರ್ಚಿಸಲಿದ್ದಾರೆ.

https://www.youtube.com/watch?v=2x-gN-D3xk4

About The Author